ಲೋಕದರ್ಶನ ವರದಿ
ಮೂಡಲಗಿ 11: 'ಮನುಷ್ಯ ತಾನು ಮಾತನಾಡುವ ಮಾತುಗಳಿಂದ ಮನಸ್ಸನ್ನು ಒಂದುಗೂಡಿಸುವಂತರಿಬೇಕು ಹೊರತು ನಸ್ಸನ್ನು ಬೇರೆ ಮಾಡದಂತಿರಬೇಕು' ಎಂದು ಖಾನಟ್ಟಿಯ ಮಲ್ಲಿಕಾಜರ್ುನ ಮಠದ ಬಸವಾನಂದ ಸ್ವಾಮೀಜಿಗಳು ಹೇಳಿದರು. ಇಲ್ಲಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಸ್ಥಳೀಯ ಅಂಗಡಿ ಸಹೋದರರ ಆತಿಥ್ಯದಲ್ಲಿ ದಿ. ಶವಿಬಸಪ್ಪ ಚನವೀರಪ್ಪ ಅಂಗಡಿ ಅವರ 99ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ ಹುಣ್ಣಿಮೆಯ ಮನೆ ಮನೆಗೆ 31ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಆಡುವ ಮಾತುಗಳು ಮೃದುವಾಗಿರಬೇಕು, ಇನ್ನೊಬ್ಬರಿಗೆ ಒಳಿತು ಮಾಡುವಂತಿರಬೇಕು ಎಂದರು. ನಿಪನಾಳದ ವಿಠ್ಠಲ-ರುಕ್ಮೀಣಿ ಸೇವಾಶ್ರಮದ ಪ್ರಭು ಮಹಾರಾಜರು 'ನುಡಿದರೆ ಮುತ್ತಿನ ಹಾರದಂತಿರಬೇಕು' ವಿಷಯದ ಕುರಿತು ಮಾತನಾಡಿದರು.
ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದ ಶಿವಪುತ್ರಯ್ಯ ಮಠಪತಿ ಪ್ರಾಸ್ತಾವಿಕ ಮಾತನಾಡಿ ಶಿವಾನುಭವ ಗೋಷ್ಠಿಯು ನಿರಂತರವಾಗಿ ನಡೆಯುವಲ್ಲಿ ಜನರ ಸಹಕಾರವೇ ಮುಖ್ಯ ಕಾರಣವಾಗಿದೆ. ಇದು ಮುಂದುವರಿಯಲ್ಲಿ ಎಲ್ಲರ ಸಹಕಾರ ಅವಶ್ಯವಿದೆ ಎಂದರು.
ಭಜನಾ ಕಲಾವಿದರಾದ ನಾಗೇಶ ಐಹೋಳೆ, ಶಿವಲಿಂಗ ಮುನ್ಯಾಳ, ಮಹಾಲಿಂಗಪ್ಪ ಯಡವನ್ನವರ, ಕೆಂಪಣ್ಣ ದೇಸಾಯಿ, ಸತ್ಯಪ್ಪಾ ಮುಗಳಖೋಡ, ಪಾಲಬಾವಿಯ ಅಜರ್ುನ ತುಪ್ಪದ ಅವರು ಭಜನಾ ಹಾಡುಗಳನ್ನು ಹೇಳಿದರು. ಸಂಗಪ್ಪಾ ಅಂಗಡಿ, ಬಾಲಶೇಖರ ಬಂದಿ ಹಾಗೂ ಮೂಡಲಗಿ ಸಹಕಾರಿ ಬ್ಯಾಂಕ್ಗೆ ನಿದರ್ೇಶಕರಾಗಿ ಆಯ್ಕೆಯಾಗಿರುವ ಹರೀಶ ಅಂಗಡಿ ಅವರನ್ನು ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಸನ್ಮಾನಿಸಿದರು.
ಆತಿಥ್ಯ ವಹಿಸಿದ್ದ ಸಿ.ಎಸ್. ಅಂಗಡಿ, ಡಿ.ಬಿ. ಪಾಟೀಲ, ಈಶ್ವರಪ್ಪ ಸತರಡ್ಡಿ, ಶಂಕರ ತಾಂವಶಿ, ಶಂಕರ ಚಿಪ್ಪಲಕಟ್ಟಿ, ಶಿವಬಸು ನೀಲನ್ನವರ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ಶಿವಲಿಂಗಯ್ಯ ಹಿರೇಮಠ, ಪಂಚಯ್ಯ ಹಿರೇಮಠ, ಮಲ್ಲಪ್ಪ ಬಳಿಗಾರ, ಈಶ್ವರ ಮುಗಳಖೋಡ, ಶಿವಾನಂದ ಪಾಶರ್ಿ, ಅಜ್ಜಪ್ಪ ಅಂಗಡಿ ಇದ್ದರು. ಸದಾಶಿವ ಶೀಲವಂತ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.