ಸೋಯಾಬೀನ ಮಾರಾಟ ಆರಂಭ

ಸೋಯಾಬೀನ ತೂಕದ ಕಾರ್ಯ ಆರಂಭ

ವರದಿ: ಎಂ.ಬಿ. ಘಸ್ತಿ  

ಸಂಕೇಶ್ವರ 25: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನ್ಯಾಫೇಡ್ ಸಂಸ್ಥೆಯ ಪರವಾಗಿ ಸೋಯಾಬೀನ್ ಕಾಳು ಖರೀದಿ ಕೇಂದ್ರವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ, ಬೆಳಗಾವಿ ದಿ. ಹುಕ್ಕೇರಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಕೇಶ್ವರದಲ್ಲಿ ಸೋಯಾಬೀನ ಕಾಳು ಖರೀದಿ ಕೇಂದ್ರ ಆರಂಭವಾಗಿದೆ. 

ಬೆಂಬಲ ಬೆಲೆ ಪ್ರತಿ ಕ್ವಿಂಟಲಗೆ 4892/- ರೂಗಳು ಖರೀದಿ ಪ್ರಮಾಣ ಪ್ರತಿ ರೈತರಿಗೆ 20 ಕ್ವಿಂಟಲ ಕೊಡಲಾಗುವುದು ಸೋಯಾಬೀನದ ವಿಶೇಷ ಲಕ್ಷಣಗಳು ದೂಳು, ಹರಳು, ಹೊಟ್ಟು, ಪ್ರತಿ ಕ್ವಿಂಟಲಗೆ 2 ಕೇಜಿ ವಜಾ ಮಾಡಲಾಗುವುದು ಮತ್ತು ಬೆರಕೆ ಮಿಶ್ರಣ 3 ಕೇಜಿ, ಹಾಳಾದ ಕಾಳುಗಳು 3 ಕೇಜಿ, ಒಡೆದ ಕಾಳುಗಳು 4 ಕೇಜಿ., ಅಪೂರ್ಣ (ಪೂರ್ಣ ಮಾಗದ) ಮತ್ತು ಕುಗ್ಗಿದ ಕಾಳುಗಳು 3 ಕೇಜಿ., ಹುಳುಕಾದ ಕಾಳುಗಳು 4 ಕೇಜಿ., ತೇವಾಂಶ 12 ಕೇಜಿ., ಈ ರೀತಿ ವಿಶೇಷ ಗುಣಲಕ್ಷಣಗಳು ಸೋಯಾಬೀನದಲ್ಲಿ ಇರಬೇಕು 

ಇಂದು ತಾಲೂಕಾ ಮಾರ್ಕೆಟಿಂಗ ಸೋಸಾಯಟಿಯಲ್ಲಿ ಸೋಯಾಬೀನ ತೂಕದ ಪೂಜೆಯನ್ನು ಸಂಘದ ಸಂಚಾಲಕ ರಮೇಶ ಪವನ ಕತ್ತಿಯವರು ತೆಂಗನಕಾಯಿ ಒಡೆದು ಪೂಜೆ ಸಲ್ಲಿಸಿದ ನಂತರ ಸೋಯಾಬೀನ ತೂಕದ ಕಾರ್ಯ ಆರಂಭಗೊಂಡಿತು. 

ಈ ಸಮಾರಂಭದಲ್ಲಿ ನಗರದ ಸಂಚಾಲಕ ಸುನೀಲ ಅಣ್ಣಾಸಾಹೇಬ ಪರ್ವತರಾವ, ಫೆಡ್ರೇಶನದ ಮಹಾಮಂಡಳದ ಬೆಳಗಾವಿ ಶಾಖಾ ವ್ಯವಸ್ಥಾಪಕರಾದ ಚಂದ್ರಗೌಡಾ ಪಾಟೀಲ ಇವರು ರೈತರು ಬೆಳೆದ ಸೋಯಾಬೀನ ಕಾಳುಗಳನ್ನು ಮಾರಾಟ ಮಾಡಲು ನೋಂದಣಿಯ ನವಂಬರ 30 ರ ವರೆಗೆ ಇರುತ್ತದೆ ರೈತರು ಆಧಾರ ಕಾರ್ಡ ಪ್ಯಾನ ಕಾರ್ಡ ಮತ್ತು ಗೇಣಿ ಮತ್ತು ಪಹಣಿ ಪತ್ರಿಕೆ ಇವುಗಳನ್ನು ಸಂಸ್ಥೆಯಲ್ಲಿ ತಂದು ನೋಂದಾಯಿಸಿಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದರು.