ಪ್ರತಿಯೊಬ್ಬ ಸೈನಿಕನಲ್ಲಿ ಆತ್ಮಸ್ಥೈರ್ಯ ತುಂಬಬೇಕು

ದಕ್ಷಿಣ ಏರಿಯಾದ ಕಮಾಂಡರ್ ಲೆಪ್ಟನೆಂಟ್ ಜನರಲ್ ಎಸ್.ಟಿ.ಉಪಾಸನಿ

  ಲೋಕದರ್ಶನ ವರದಿ

ಧಾರವಾಡ 14: ಸೈನಿಕರು ಒಂದೇ ಕುಟುಂಬದ ಸದಸ್ಯರಾಗಿದ್ದು ಪರಸ್ಪರ ಎಲ್ಲರೂ ಸಹಾಯ, ಸಹಕಾರ ನೀಡುವ ಮೂಲಕ ಪ್ರತಿಯೊಬ್ಬ ಸೈನಿಕನಲ್ಲಿ ಆತ್ಮಸ್ಥೈರ್ಯ ತುಂಬಬೇಕೆಂದು ದಕ್ಷಿಣ ಏರಿಯಾದ ಕಮಾಂಡರ್ ಲೆಪ್ಟನೆಂಟ್ ಜನರಲ್ ಎಸ್.ಟಿ.ಉಪಾಸನಿ ತಿಳಿಸಿದರು.

            ಬೆಳಗಾವಿ ಮರಾಠಾ ಲೈಟ್ ಇನಫೆಂಟ್ರಿ ರೆಜಿಮೆಂಟಲ್ ಸೆಂಟರ್ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಹಯೋಗದಲ್ಲಿ ಇಂದು ಬೆಳಿಗ್ಗೆ  ಡಾ. ಮಲ್ಲಿಕಾಜರ್ುನ ಮನಸೂರ ಕಲಾಭವನದಲ್ಲಿ ಆಯೋಜಿಸಿದ ಭೂದಳ, ವಾಯುದಳ ಹಾಗೂ ನೌಕಾದಳದ ಮಾಜಿ ಸೈನಿಕರ ಸಮ್ಮೇಳನದಲ್ಲಿ ಮಾತನಾಡಿದರು.

ಸೇವೆಯಲ್ಲಿರುವ ಹಾಗೂ ಸೇವೆಯಿಂದ ನಿವೃತ್ತರಾಗಿರುವ ಪ್ರತಿಯೋಬ್ಬ ಸೈನಿಕರಿಗೆ ಸರಕಾರಿ ಸೌಲಭ್ಯಗಳ ಬಗ್ಗೆ ತಿಳುವಳಿಕೆ ಇರಬೇಕು. ಜೊತೆಗೆ ಅವುಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ದೇಶದ ಗಡಿ ಕಾಯುವ ಸೈನಿಕರಿಗೆ ಸೈನ್ಯ ಹಾಗೂ ಪರಿವಾರ(ಕುಟುಂಬಿಕ) ಎಂಬ ಎರಡು ಕುಟುಂಬಗಳಿವೆ. ಆದರೆ, ಸೈನಿಕರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಈ ಕಾರಣಕ್ಕಾಗಿ ಪರಸ್ಪರ ಸಹಾಯ, ಸಹಕಾರ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಸೌಲಭ್ಯಗಳ ಕುರಿತು ತಿಳಿದುಕೊಂಡು, ಪರಸ್ಪರ ಪಡೆದು, ಅದರ ಮಾಹಿತಿ ಗೊತ್ತಿಲ್ಲದವರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಸಮಸ್ಯೆಗಳಿರುವ ಸೈನಿಕರು ಅಂತಜರ್ಾಲ ವ್ಯಾಪ್ತಿಯೊಳಗೆ ಬರಬೇಕು. ಮೊಬೈಲ್, ಇಮೇಲ್ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ  ತಮ್ಮ ದೂರು ಸಲ್ಲಿಸುವ ಮೂಲಕ ತತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ತಾಂತ್ರಿಕ ಜ್ಞಾನ ಹಾಗೂ ಮಾಹಿತಿ ಇದೆ. ಅದು ಉಪಯೋಗವಾಗಬೇಕು.

ಉತ್ತಮ ಬದುಕಿಗೆ ಆರೋಗ್ಯ ಮುಖ್ಯ. ನಿವೃತ್ ಸೈನಿಕರು ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಬೇಕು. ಅದಕ್ಕಾಗಿ ವ್ಯಾಯಾಮ, ಪ್ರತಿ ದಿನ ನಡಿಗೆ ರೂಢಿಸಿಕೊಳ್ಳಬೇಕು. ದಿನ ನಿತ್ಯ ಬಳಸುವ  ಆಹಾರ ಮತ್ತು ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಾಗ ಮನುಷ್ಯ  ಆಯುಷ್ಯಕ್ಕಿಂತ ಹೆಚ್ಚು  ಬಾಳುತ್ತಾನೆ. ಅನಾರೋಗ್ಯ ಉಂಟಾದಾಗ ಔಷಧಿ ಸೇವಿಸಿ, ಗುಣಮುಖ ಹೊಂದುವ ಬದಲಿಗೆ ಹಣ್ಣು-ಹಂಪಲ ಸೇವಿಸಿ ಗುಣಮುಖರಾಗಬೇಕೆಂದು ಅವರು ಹೇಳಿದರು.

ಕನರ್ಾಟಕ ಹಾಗೂ ಕೇರಳಾ ಬಟಾಲಿಯನ್ ಮೇಜರ್ ಜನರಲ್ ಸಂಜೀವ ನಾರಾಯಣ, ಬೆಳಗಾವಿ ಮರಾಠಾ ಲೈಟ್ ಇನಫೆಂಟ್ರಿ ರೆಜಿಮೆಂಟಲ್ ಸೆಂಟರ್ ಆಯೋಜಿಸಿದ್ದ ಅನುಭವಿ ಸೈನಿಕರ ರ್ಯಾಲಿಯಿಂದ ಸೈನಿಕರ ಜೀವನಮಟ್ಟ ಸುಧಾರಣೆಗೆ ಹೆಚ್ಚು ಅನುಕೂಲವಾಗಿದೆ. ಸೈನಿಕರ ಕಲ್ಯಾಣಕ್ಕಾಗಿ ಇಂದಿನ ಸರಕಾರಗಳು  ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅವುಗಳನ್ನು ಪರಿಚಯಿಸಲು ಈ ಸಮ್ಮೇಳನ ಹಮ್ಮಿಕೊಂಡಿದ್ದು, ಇದರ ಮೂಲಕ ಸೈನಿಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.

ಸೆ.26ರಂದು ಬೆಂಗಳೂರಲ್ಲಿ ನಡೆದ ಕಾಯರ್ಾಗಾರದಲ್ಲಿ ಸೈನಿಕರ ಅನೇಕ ಸಮಸ್ಯೆಗಳ ಕುರಿತು ಸುದೀರ್ಘ ಚಚರ್ೆಗಳು ನಡೆದಿವೆ. ಧನ್ಮಾತಕ ಚಿಂತನೆ ವ್ಯಕ್ತವಾಗಿವೆ. ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ಮಾಜಿ ಸೈನಿಕರಿಗೆ ಮಾತ್ರವೇ ರಿಯಾಯತಿ ಇತ್ತು. ಇದೀಗ ಇದು ವೃತ್ತಿಯಲ್ಲಿನ ಸೈನಿಕರಿಗೂ ಅನ್ವಯ ಆಗಲಿದೆ. ಕೈಗಾರಿಕೆ ಸ್ಥಾಪಿಸುವ ಸೈನಿಕರಿಗೆ ಶೇ.10ರಷ್ಟು ರಿಯಾಯತಿ ಇದೆ. ತರಬೇತಿಯಲ್ಲಿ ಪಡೆದ ಕೌಶಲ್ಯ ಆಧಾರದಡಿ ಉದ್ಯೋಗ ಲಭಿಸುತ್ತಿವೆ ಎಂದು ತಿಳಿಸಿದರು.

ಈ ವೇಳೆಯಲ್ಲಿ ದೇಶದ ಸುಭದ್ರತೆಗಾಗಿ ಪ್ರಾಣಾರ್ಪಣೆ ಮಾಡಿದ ಸೈನಿಕರ ಕುಟುಂಬದ ಸದಸ್ಯರಾದ ಸಾವಿತ್ರಿ ಸುಬೇದಾರ, ಸರಸ್ವತಿ ನಾಯಕ, ಮಲ್ಲವ್ವ ಸರೇಂದ್ರ, ಹಮೀದಾ ಸೋಮನಕಟ್ಟಿ, ಶಂಕ್ರವ್ವ ಕಮತರ, ನೀಲವ್ವ ಶಿವಳ್ಳಿ, ಅನ್ನಪೂರ್ಣ, ಜನತಬೀ, ರೇಖಾ ಹಾಗೂ ಮಹಾದೇವಿ ಕೊಪ್ಪದ ಅವರಿಗೆ ನಿವೃತ್ ಲೆಪ್ಟನೆಂಟ್ ಜನರಲ್ ಎಸ್.ಸಿ.ಸರದೇಶಪಾಂಡೆ ಅವರು ಗೌರವಿಸಿದರು.

ಸಮ್ಮೇಳನದಲ್ಲಿ ಬ್ರಿಗೇಡಿಯರ್ ಗೋವಿಂದ ಕಾಲವಾಡ, ಸಿ.ಎಸ್.ಹವಾಲ್ದಾರ್ ಸೇರಿದಂತೆ ದ ಭೂದಳ, ವಾಯುದಳ ಹಾಗೂ ನೌಕಾದಳದ ಮಾಜಿ ಸೈನಿಕರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಿಲ್ಲಾ ಉಪ ನಿದರ್ೇಶಕ  ಈಶ್ವರ ಕೋಡಳ್ಳಿ ಅವರು ಸ್ವಾಗತಿಸಿ, ವಂದಿಸಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು.