ವೀರ ಯೋಧ ಮಹೇಶ ಮರೀಗೊಂಡ ಹುತಾತ್ಮ: ಶಾಸಕರ ಕಂಬನಿ

Soldier Mahesh Marigonda Martyr: Company of MLAs

ಮಹಾಲಿಂಗಪುರ 25: ಬುಧವಾರ ದಿ. 24 ರಂದು ಕಾಶ್ಮೀರದ ಪುಂಚನಲ್ಲಿ ಸೈನಿಕರ ವಾಹನ ಕಂದಕಕ್ಕೆ ಬಿದ್ದು ಐದು ವೀರ ಯೋಧರು ಹುತಾತ್ಮರಾದರು ಅವರಲ್ಲಿ ಕರ್ನಾಟಕದ ಮೂವರು ಅದರಲ್ಲಿ ಮಹಾಲಿಂಗಪುರದ ವೀರ ಯೋಧ ಮಹೇಶ ನಾಗಪ್ಪ ಮರೀಗೊಂಡ ಹುತಾತ್ಮರಾಗಿದ್ದು. ನಗರವನ್ನು ದುಃಖ ಮಡಿಲಲ್ಲಿ ತೆಲುವಂತೆ ಮಾಡಿದೆ, ಸುದ್ದಿ ತಿಳಿದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿಯವರು ನಗರದ ಅತಿಥಿ ಗ್ರೃಹದಲ್ಲಿ ತುರ್ತು ಪತ್ರಿಕಾ ಗೋಷ್ಟಿ ಕರೆದು ಉದ್ದೇಶಿಸಿ ಮಾತನಾಡಿ, ನಾಡಿಗೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಎಂದರು. 

ಪುಂಚದಿಂದ ಬಂದ ಸುದ್ದಿ ನಗರಕ್ಕೆ ಗರ ಬಡಿದಂತೆ ಬಂದರೇಗಿ ಇಡೀ ಮಹಾಲಿಂಗಪುರ ಒಂದು ಕ್ಷಣ ಏನನ್ನು ನಂಬದ ಸ್ಥಿತಿ ತಲುಪಿತು. ಭಾರತ ಮಾತೆ ತನ್ನ ಐವರು ವೀರ ಯೋಧರನ್ನು ಈ ದುರಂತ ಘಟನೆಯಲ್ಲಿ ಕಳೆದುಕೊಂಡು ತುಂಬಲಾರದ ನಷ್ಟವನ್ನು ಅನುಭವಿಸಿದ ಭಾರತ ಮಾತೆ ದುಃಖಿತಳಾಗಿದ್ದು. ಕಣಿವೆ ರಾಜ್ಯದ ಅತ್ಯಂತ ದುರ್ಗಮ ಪ್ರದೇಶ ಪುಂಚ ಸೇನಾ ವಾಹನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ವಾಹನ ಕಂದಕಕ್ಕೆ ಬಿದ್ದು ಐವರು ಯೋಧರು ಸ್ಥಳದಲೆ ವೀರಮರಣವನ್ನು ಹೊಂದಿದರು. ಅವರಲ್ಲಿ ಕರ್ನಾಟಕದ ಮೂವರು, ಇಬ್ಬರು ಮಹಾರಾಷ್ಟದವರು ಈ ಸುದ್ದಿ ಇಡೀ ದೇಶಕ್ಕೆ ಗರ ಬಡಿದಂತಾಯಿತು. 

ವಿಶೇಷ ಮುತವರ್ಜಿ ವಹಿಸಿದ ಶಾಸಕರು : ಸುದ್ದಿ ತಿಳಿದ ತಕ್ಷಣ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ಘಟನೆ ನಡೆದ ಸ್ಥಳದಿಂದಲೇ ಸಂಪರ್ಕ ಬೆಳೆಸಿ ತಮ್ಮ ಕ್ಷೇತ್ರದ ವೀರ ಯೋಧರ ಸುದ್ದಿಯನ್ನು ಖಚಿತ ಪಡಿಸಿಕೊಂಡು, ಆ ವೀರಯೋಧರ ಮುಂದಿನ ಕರ್ಮಕ್ಕಾಗಿ ಮುತುವರ್ಜಿ ವಹಿಸಿ ವೀರ ಮರಣ ಹೊಂದಿದ ವೀರ ಯೋಧನ ಅಂತಿಮ ಸಂಸ್ಕಾರದ ಕಾರ್ಯವನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಮುಂದಿನ ಕಾರ್ಯಗಳು ಸುಗಮವಾಗಿ ನೆರವೇರಲು ಸಹಕರಿಸಲು ಮನವಿ ಮಾಡಿ ಕಾರ್ಯ ಪ್ರವೃತ್ತರಾದರು. 

ಕುಟುಂಬಕ್ಕೆ ದೇವರು ದುಃಖ್ ಭರಿಸುವ ಶಕ್ತಿ ಕೊಡಲಿ, ಆ ಕುಟುಂಬದೊಂದಿಗೆ ಇಡೀ ಸರ್ಕಾರ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.ನಾಳೆ ಪಾರ್ಥವ ಶರೀರ ಬರವ ನೀರೀಕ್ಷೆ ಇದೆ ಎಂದರು. 

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಮುಖಂಡರಾದ ಶಿವಾನಂದ ಅಂಗಡಿ, ಬಸು ಮಡಿವಾಳ , ನಾಗಲಿಂಗ ಸುತ್ತಾರ, ಶಿವು ಹೂಗಾರ ಇದ್ದರು.