ಸಮಾಜ, ರಾಷ್ಟ್ರೀಯ ಸೇವೆ ವಿದ್ಯಾಥರ್ಿಗಳ ಜೀವನಕ್ಕೆ ಮೌಲ್ಯವಾದದ್ದು: .ಗುರುಮೂತರ್ಿ

ಲೋಕದರ್ಶನ ವರದಿ

ಕಂಪ್ಲಿ 12:ವಿದ್ಯಾಥರ್ಿಗಳು ಸಮಾಜ ಸೇವೆ ಮತ್ತು ರಾಷ್ಟ್ರೀಯ ಸೇವೆಯ ಪರಿಕಲ್ಪನೆಯನ್ನು ವಿದ್ಯಾಥರ್ಿ ದೆಸೆಯಿಂದಲೇ ಬೆಳೆಸಿಕೊಳ್ಳಲು ಮುಂದಾಗಬೇಕು. ಹಾಗು ಸ್ವಾರ್ಥರಹಿತ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಳ್ಳೇಯ ಬದುಕನ್ನು ಕಟ್ಟಿಕೊಳ್ಳುವ ಪಠ್ಯೇತರ ಚಟುವಟಿಕೆಯ ವೇದಿಕೆಯ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಹಾಗು ಸೇವೆಗೆ ಸದಾ ಸಿದ್ದರಾಗುವಂತೆ ಕ್ರೀಯಾಶೀಲತೆ ಘಟಕ ಇದಾಗಿದೆ ಎಂದು ದರೋಜಿ ಗ್ರಾಮ ಪಂಚಾಯತಿಯ ಉಪಾಧ್ಯಾಕ್ಷರಾದ ಶ್ರೀ.ಎಂ.ಎಸ್.ಗುರುಮೂತರ್ಿಯವರು ಉದ್ಘಾಟನಾ ನುಡಿಯಲ್ಲಿ ಅಭಿಪ್ರಾಯಪಟ್ಟರು. 

ವಿಶೇಷ ಉಪನ್ಯಾಸರಾಗಿ ಆಗಮಿಸಿದ ಸಕರ್ಾರಿ ಪ್ರಥಮದಜರ್ೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಶ್ರೀ.ಎಂ.ಎನ್.ಪ್ರವೀಣಕುಮಾರ ಇವರು ಗಾಂಧೀಜಯವರ ಸವರ್ೊದಯ ಗ್ರಾಮದ ತತ್ವದ ನೆಲೆಯಲ್ಲಿ ರಾಷ್ಟ್ರ ಸೇವೆ ಮಾಡುತ್ತಾ " ನನಗಲ್ಲ ನಿನಗೆ " ಎಂಬ ಘೋಷಾ ವಾಕ್ಯದೊಂದಿಗೆ ನಾನು ಸೇವೆಗೆ ಸದಾ ಸಿದ್ದನಾಗಿ ಬದುಕಿನ 24ಗಂಟೆಯಂತೆ ದೇಶ ಸೇವೆಗೆ ಅಣಿಯಾಗಲು ಎನ್.ಎಸ್..ಎಸ್.ಎಂಬ ಯೋಜನೆಯು ವಿದ್ಯಾಥರ್ಿಗಳಿಗೆ ಬದ್ರಬುನಾದಿ ಆಗಿದೆ. ಯೋಜನೆಯ ಚಿಹ್ನೆಯ ಸಂಕೇತದಲ್ಲಿ ಕೆಂಪು: ಉತ್ಸಾಹ & ತ್ಯಾಗ, ಬಿಳಿ : ಶಾಂತಿ & ಸಹಬಾಳ್ವೆ, ನೀಲಿ : ಸಮೃದ್ದಿ & ಸವರ್ೋತೋಮುಖ ಅಭಿವೃದ್ದಿ ಇವುಗಳನ್ನು ಅರಿತು ದೇಶಾಭಿಮಾನ, ನಾಡು ನುಡಿಗಾಗಿ ಸೇವೆಯ ಬಾಳು ವಿದ್ಯಾಥರ್ಿಗಳಲ್ಲಿ ಇರಬೇಕೆಂದು ವಿದ್ಯಾಥರ್ಿಗಳಿಗೆ ಕರೆಕೊಟ್ಟರು. 

         ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ  ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ಆರ್.ಶಿವಕುಮಾರ ಮಾತನಾಡಿ ಶಿಸ್ತು ಏಕತೆ & ಪ್ರಾಮಾಣಿಕ ಕೆಲಸ ಇವು ದೇಶದ ಪ್ರಗತಿಗೆ ಪೂರಕವಾಗಿವೆ. ಮತ್ತು ಶಿಕ್ಷಣದಲ್ಲಿ ಈ ಯೋಜನೆಯಿಂದ ಮಕ್ಕಳಲ್ಲಿ ಸದೃಡತೆ ಮತ್ತು ವ್ಯೆಕ್ತಿ ವಿಕಸನವಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಮನೋಭಾವನೆಯನ್ನು ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು  ಹೇಳಿದರು.

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ.ಬಿ.ಸೈಯದ್ ಹುಸೇನ್ ಗೌರವ ಸನ್ಮಾನ ಸ್ವಿಕರಿಸಿ, ಮಾತನಾಡುತ್ತ ಸಹಕಾರ ಸಹೌರ್ದತೆಯಿಂದ ಸೇವೆ ಮಾಡುತ್ತ ಕಲಿಯೋಣ ಬನ್ನಿ ಮತ್ತು ಶ್ರಮವೇ ಜಯತೇ ಎಂಬದನ್ನು ಅರಿಯೋಣ ಬನ್ನಿ ಎಂದು ಹೇಳಿದರು.

ವೇದಿಕೆಯಲ್ಲಿ  ಮುಖ್ಯ ಅತಿಥಿಗಳಾಗಿ ಮಾಜಿ ಎಸ.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ.ವಿ.ಗೋವರ್ಧನ್, ಹೈ.ಕ ವಿಭಾಗೀಯ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾದ ಆಧ್ಯಕ್ಷರಾದ  ನಾಗರಾಜ ಬೋವಿ, ಯುವಮುಖಂಡರಾದ ಡಿ.ವಿ. ರವಿ ಮತ್ತು ವಿ.ಗೋವಿಂದಪ್ಪ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ  ಶಿಕ್ಷಕರಾದ ಶ್ರೀಕಾಂತ, ಪರುಶರಾಮ, ರುದ್ರಗೌಡ, ಶ್ರೀಮತಿ ದ್ಯಾಮವ್ವ, ಕು|| ಜ್ಯೋತಿ ಗುರಿಕಾರ್, ಶ್ರೀಮತಿ ಆಸ್ಮಾಖಾನಂ, ಸಿ.ಮಹಾದೇವಿ, ಯು.ಸೌಮ್ಯ, ರೂಬಿನಾ, ಇವರುಗಳು ಇದ್ದು, ಕಾರ್ಯಕ್ರಮದ ಪ್ರಾಸ್ತಾವಿಕ ಹಾಗು ಸ್ವಾಗತವನ್ನು ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಕಾರ್ಯಕ್ರಮದ ಅಧಿಕಾರಿಯಾದ  ಪರುಸಪ್ಪ.ಕೆ, ಪ್ರಾರ್ಥನೆಯ್ನು ಕು|| ಆಶಾಬೀ ಮತ್ತು ತಂಡ, ವಂದನಾರ್ಪಣೆಯನ್ನು  ಸಿ.ಎಂ.ಬಸವರಾಜಯ್ಯ ಹಿಂದಿ ಶಿಕ್ಷಕರು, ನಿರೂಪಣೆಯನ್ನು  ಶಾಲೆಯ ಹಿರಿಯ ಮತ್ತು ವೃತ್ತಿ ಶಿಕ್ಷಕರಾದ ಆರ್.ಮಹಾರುದ್ರಪ್ಪ ನಿರ್ವಹಿಸದರು.