ಸಮಾಜ ಸೇವೆ ಎಂಬುದು ಭಾವನಾತ್ಮಕ ಸಂಬಂಧಕ್ಕೆ ಪೂರಕ: ದುಂಡಿಗೌಡ್ರ

ಲೋಕದರ್ಶನವರದಿ

ಶಿಗ್ಗಾವಿ : ಸಮಾಜ ಸೇವೆ ಮತ್ತು ರಾಜಕೀಯ ಸೇವೆ ಎಂಬುವುಗಳು ಭಾವನಾತ್ಮಕ ಸಂಬಂಧಕ್ಕೆ ಪೂರಕವಾದವುಗಳು, ಆದರೆ ರಾಜಕೀಯಕ್ಕಿಂತ ಸಮಾಜಸೇವೆ ಹೆಚ್ಚು ತೃಪ್ತಿಕೊಡುವಂತಹುದು ಎಂದು ಭಾರತ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಸೋಮವಾರ ಪಟ್ಟಣದ ಹಡಪದ ಅಪ್ಪಣ್ಣ ಕ್ರೇಡಿಟ್ ಕೋ ಆಫ್ ಸೊಸೈಟಿಯಲ್ಲಿ ಶ್ರೀಕಾಂತ ದುಂಡಿಗೌಡ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜಕ್ಕೆ ಏನಾದರು ಕೊಡುಗೆ ಕೊಡುವ ಉದ್ದೇಶದಿಂದ ಸರ್ವರೂ ಕೂಡಿ ಕಟ್ಟಿರುವ ಈ ಹಡಪದ ಅಪ್ಪಣ್ಣ ಸೋಸೈಟಿಯಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರಲ್ಲದೆ ತಾಲೂಕಿನಲ್ಲಿ ಅಭಿವೃದ್ದಿಯ ಬದಲಾವಣೆ ಆಗಬೇಕದೆ ಅದಕ್ಕೆ ಭಾರತ ಸೇವಾ ಸಂಸ್ಥೆ ಬದ್ದವಾಗಿದೆ, ಕೇವಲ ಉಳ್ಳವರ ಮಾತಿನಿಂದ ಅಭಿವೃದ್ದಿ ಆಗದು, ಅಭಿವೃದ್ದಿ ಎಂಬುದು ನಿರಂತರವಾಗಿರಬೇಕು ಆ ನಿಟ್ಟಿನಲ್ಲಿ ಅನುಕೂಲವಿಲ್ಲದ ಸಮುದಾಯಗಳನ್ನು ಗುರುತಿಸಿ ಅನುಕೂಲ ಮಾಡಿ ಕೊಡುವ ಕಡೆ ಗಮನಿಸಬೇಕಿದೆ, ಮೊದಲು ಮಾಡುವ ಮನಸ್ಸು ಬೇಕು ಅಂದಾಗ ಎಂತಹ ಕಠಿಣವಾದ ಕಾರ್ಯಗಳನ್ನ ಮಾಡಲು ಸಾದ್ಯವಿದೆ ಎಂದರು.

ಪಟ್ಟಣದಲ್ಲಿ ರಚನಕಟ್ಟೆ ಕರೆಯ ಸುತ್ತಲೂ ವಾಕಿಂಗ್ ಪಾರ್ಕ ಮಾಡಬೇಕಿತ್ತು ಎಂದು ಇಂಗಿತ ವ್ಯಕ್ತಪಡಿಸಿದ ಅವರು ಶಾಸಕರು ವಿಶೇಷ ಅನುದಾನ ತರುವ ಮೂಲಕ ಇನ್ನೂ ಹೆಚ್ಚಿನ ಕಾರ್ಯಗಳನ್ನ ಮತ್ತು  ಅವಕಾಶ ವಂಚಿತರನ್ನು ಮೆಲೆತ್ತುವ ಕೆಲಸದ ಜೊತೆಗೆ ಬದಲಾವಣೆಯ ಮೂಲಕ ಮಾತನಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಮುಖಂಡ ವಿಶ್ವನಾಥ ಪಾಟೀಲ ಮಾತನಾಡಿದರು, ಬಸವರಾಜ ಹೊಸಮನಿ, ಹಡಪದ ಅಪ್ಪಣ್ಣ ಕ್ರೇಡಿಟ್ ಕೋ ಆಫ್ ಸೋಸೈಟಿಯ ಅದ್ಯಕ್ಷ ಮುತ್ತುರಾಜ ಕ್ಷೌರದ, ಉಪಾದ್ಯಕ್ಷ ಮಾಲತೇಶ ಹಡಪದ, ನಿದರ್ೇಶಕರಾದ ಶಿವಕುಮಾರ ಮಡ್ಲಿಕರ, ಮಲ್ಲಿಕಾಜರ್ುನ ಹಡಪದ, ಈರಣ್ಣ ಯಲಿಗಾರ, ಬಸವರಾಜ ಜಂಗಲಿ, ಸಿದ್ದಪ್ಪ ಗಂಜೀಗಟ್ಟಿ, ರವಿ ಹಡಪದ, ವಿಶ್ವನಾಥ ಬಂಡಿವಡ್ಡರ, ಬಸವರಾಜ ಹಡಪದ ವ್ಯವಸ್ಥಾಪಕ ಪ್ರಭು ಭವಾನಿ ಸೇರಿದಂತೆ ಸಿಬ್ಬಂದಿ ಇದ್ದರು.