ಸಾಮಾಜಿಕ ಶಾಂತಿ-ಮೈತ್ರಿಗೆ ಮನಃಶುದ್ಧಿಕರಣ ಪ್ರಕ್ರಿಯೆ ಅವಶ್ಯಕ: ನೀಲಣ್ಣವರ್

ಲೋಕದರ್ಶನ ವರದಿ

ಧಾರವಾಡ 15 : ಪರಧರ್ಮ ಸಹಿಷ್ಣುತೆಯನ್ನು ಆದಿಕಾಲದಿಂದಲೂ ಅನುಸರಿಸುತ್ತಾ ಬಂದಿರುವ ನಮ್ಮ ಸಮಾಜದಲ್ಲಿ ಶಾಂತಿ-ಮೈತ್ರಿಭಾವ ಹೆಚ್ಚಿಸುವ ನಿಟ್ಟಿನಲ್ಲಿ ಪರಸ್ಪರ ಸಹಬಾಳ್ವೆ, ಸಹಕಾರದಂತಹ ಗುಣಗಳು ಹೆಚ್ಚಾಗಿಸಲು ಮನಸ್ಸಿನಾಳದಲ್ಲಿರುವ ಕೆಟ್ಟ ವಿಚಾರಗಳನ್ನು ತೆಗೆದು ಹಾಕಲು ಮನೋನಿಗ್ರಹ, ಮನೋವಿಶ್ಲೇಷಣೆಯಂತಹ ಮನಃಶುದ್ಧಿಕರಣದ ಪ್ರಕ್ರಿಯೆಗಳನ್ನು ನಡೆಸುವುದು ಅವಶ್ಯಕವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಡಿ.ನೀಲಣ್ಣವರ್ ಅಭಿಪ್ರಾಯಪಟ್ಟರು.

ಅವರು ಇಂದು ಧಾರವಾಡದ ರಂಗಾಯಣದಲ್ಲಿ ಪ್ರಬುದ್ಧ ಭಾರತ ನಿಮರ್ಾಣ ಪೌಂಡೇಶನ್, ಬುದ್ಧಿಷ್ಟ ಪಾಲಿ ಶಿಕ್ಷಣ ಮತ್ತು ಸಂಶೋಧನಾ ಟ್ರಸ್ಟ್, ರಮಾತಾಯಿ ಮಹಿಳಾ ಪ್ರಗತಿ ಮತ್ತು ಅಧ್ಯಯನ ಸಂಸ್ಥೆ, ಸಮಾನ ಮನಸ್ಕರ ವಿಚಾರ ವೇದಿಕೆ ಮತ್ತು ಗಣಕರಂಗ, ಧಾರವಾಡ ಮುಂತಾದ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 62ನೇಯ ಧಮ್ಮ ಚಕ್ಕ ಪವತ್ತನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. 21ನೇಯ ಶತಮಾನದಲ್ಲಿ ಎಲ್ಲರಿಗೂ ಅವಶ್ಯಕವಾಗಿ ಬೇಕಾಗಿರುವುದು ಶಾಂತಿ, ಸಮಾಧಾನ, ತಾಳ್ಮೆ ಮುಂತಾದ ಗುಣಗಳು. ಇವೆಲ್ಲವುಗಳನ್ನು ದ್ಯಾನ, ಓದು, ಉತ್ತಮ ಚಚರ್ೆ, ಸಮಾನಾಸಕ್ತರೊಂದಿಗಿನ ಒಡನಾಟಗಳಿಂದ ಅನುಭವಿಸಲು ಸಾಧ್ಯ. ಇವೆಲ್ಲವುಗಳು ನೆಲದ ಬುದ್ಧಧಮ್ಮದಲ್ಲಿ ನಾವು ಪಡೆಯಬಹುದಾಗಿದೆ. ಬುದ್ಧಧಮ್ಮದಲ್ಲಿ ಯಾವುದೇ ಜಾತಿ-ಪಂಗಡಗಳ ಬೇಧ-ಭಾವವಿಲ್ಲ. ಎಲ್ಲರೂ ಸಮಾನರೆಂಬ ಭಾವದಿಂದ ಮುನ್ನಡೆಯುವ ಅವಕಾಶವಿರುವ ವಿಶ್ವದ ಏಕೈಕ ಧರ್ಮವೆಂದರೆ ಬುದ್ಧಧರ್ಮ, ಇದನ್ನು ಮನಗಂಡು 1956 ಅಕ್ಟೋಬರ್, 14ರಂದು ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ನಾಗಪುರದ ದೀಕ್ಷಾಭೂಮಿಯಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಮೂಲಧರ್ಮಕ್ಕೆ ಮರಳಿದ ಐತಿಹಾಸಿಕ ದಿನವಾಗಿದೆ. ದಿನವನ್ನು ದೇಶದಲ್ಲೆಡೆ 'ಧಮ್ಮ ಚಕ್ಕ ಪವತ್ತನ ದಿನ'ವೆಂದು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ನಿವೃತ್ತ ತಹಶೀಲದಾರ ಬಿ.ಎಫ್.ಅಸೂಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಂತಕ ತಮ್ಮಣ್ಣ ಮಾದರ ಮಾತನಾಡುತ್ತಾ, ವಿನಾಕಾರಣ ಸಮಾಜದಲ್ಲಿ ಗೊಂದಲ, ಅವಿಶ್ವಾಸ, ಅಸಹಕಾರ, ಗಲಭೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಬುದ್ಧ-ಬಾಬಾಸಾಹೇಬರ ಮಹಾಮಾರ್ಗಗಳ ಅವಶ್ಯಕತೆ ತೀವ್ರವಾಗಿದೆ. ನಿನಗೆ ನೀನೆ ಬೆಳಕು ಎಂದು ಹೇಳಿದ ಬುದ್ಧನ ಅರಿವಿನ ಮಾರ್ಗದಲ್ಲಿ ಎಲ್ಲರೂ ಮುನ್ನಡೆದು ಶಾಂತಿ, ಸಹನೆ, ತಾಳ್ಮೆಯನ್ನು ಎಲ್ಲರಲ್ಲಿಯೂ ತುಂಬಬೇಕಾಗಿದೆ. ಅದಕ್ಕಾಗಿ ಇಂದಿನ ಕಾರ್ಯಕ್ರಮ ಸೂಕ್ತವಾಗಿದೆಕಾರ್ಯಕ್ರಮ ಸಂಘಟಕರು ಅಭಿನಂದನಾರ್ಹರು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಬೇಕಿದ್ದ ಮಾಜಿ ಸಚಿವ ಬಿ.ಬಿ.ನಿಂಗಯ್ಯವರ ಅನುಪಸ್ಥಿತಿಯಲ್ಲಿ ಅವರ ಸಂದೇಶವನ್ನು ಹುಬಳೆಪ್ಪನವರು ವಾಚಿಸಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕವಿವಿ ಪ್ರಾಧ್ಯಾಪಕ ಡಾ.ರವೀಂದ್ರ ಕಾಂಬಳೆ ಮಾತನಾಡುತ್ತಾ, ವಿಜ್ಞಾನಿ ಮತ್ತು ತತ್ವಜ್ಞಾನಿಯ ನಡುವೆ ಇರುವ ವ್ಯತ್ಯಾಸ ಬಹಳ ಸೂಕ್ಷ್ಮವಾದುದು, ತತ್ವಜ್ಞಾನಿ ತನ್ನ ಗ್ರಹಿಕೆಗೆ ಬಂದ ವಿಷಯವನ್ನು ಒಂದು ಸಲ ಬರೆದು ಹೇಳಿದರೆ ಸಮಾಜಕ್ಕೆ ಅದು ಅಚಿತಿಮ ಸಂದೇಶ ; ಆದರೆ, ವಿಜ್ಞಾನಿ ತಾನು ಸಂಶೋಧಿಸಿದ ಸಂಗತಿಯನ್ನು ನಿರಂತರ ಮರುವಿಮಶರ್ೆಗೆ ಒಳಪಡಿಸುತ್ತಾ ಅಂತಿಮ ಸತ್ಯ ಗೋಚರಿಸುವ ತನಕ ಕಾರ್ಯನಿರತನಾಗುತ್ತಾನೆ. ಅಂತಹ ಕಾರ್ಯನಿರತ ಶೋಧಕರಾಗಿ ಬುದ್ಧ, ಬಾಬಾಸಾಹೇಬರು ಇಂದಿಗೂ ಜಾಗೃತಿ, ಹೋರಾಟಗಳ ಸಂದರ್ಭದಲ್ಲಿ ನಮ್ಮೊಂದಿಗಿದ್ದಾರೆ ಎಂದು ವಿವರಿಸಿದರು.

ಉತ್ತರ ಕನರ್ಾಟಕ ಸಮತಾ ಸೈನಿಕ ದಳದ ಅಧ್ಯಕ್ಷ ಪೀತಾಂಬ್ರಪ್ಪ ಬೀಳಾರ ಅವರು ಇಂದಿನದು ಮಹಳ ಮಹತ್ವದ ದಿನ, ಶೋಷಿತ ಸಮುದಾಯಗಳಿಗೆ ದೇಶದಲ್ಲಿ ಉತ್ತಮ ಜೀವನವಿಧಾನಕ್ಕಾಗಿ ಬೌದ್ಧಧಮ್ಮದ ಅವಶ್ಯಕತೆ ಮನಗಂಡು ಬಾಬಾಸಾಹೇಬರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧಧಮ್ಮ ದೀಕ್ಷೆ ಪಡೆದ ಇಂದಿನ ದಿನದ ನೆನಪಿನ ಕಾರ್ಯಕ್ರಮ ಆಯೋಜಿಸಿರುವುದು ಬಹಳ ಅಭಿನಂದನೀಯ ಎಂದು ಶ್ಲಾಘಿಸಿದರು.

ಸಾನಿಧ್ಯವನ್ನು ಧಾರವಾಡದ ಬುದ್ಧಿಷ್ಟ ಪಾಲಿ ಶಿಕ್ಷಣ ಮತ್ತು ಸಂಶೋಧನಾ ಟ್ರಸ್ಟಿನ ಅಧ್ಯಕ್ಷ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಡಾ.ರಾಜೇಂದ್ರ ಧಾನೆ, ಪ್ರಧಾನ ಗುರುಮಾತೆ ಸರೋಜಾ ಮುಶೆಣ್ಣವರ, ಸಮಾಜ ಸೇವಕಿ ಶೋಭಾ ಚಲವಾದಿ, ಚಿಂತಕ ಲಕ್ಷ್ಮಣ ಬಕ್ಕಾಯಿ ಉಪಸ್ಥಿತರಿದ್ದರು.

ರಂಗಕಮರ್ಿ ಹಿಪ್ಪರಗಿ ಸಿದ್ಧರಾಮ ನಿರೂಪಿಸಿ, ವಂದಿಸಿದರು. ಪಿಂಡದಾನ ಕಾರ್ಯಕ್ರಮದ ನೇತೃತ್ವವನ್ನು ಭರತ್ ಕಾಳೆಸಿಂಗೆ ವಹಿಸಿಕೊಂಡಿದ್ದರು. ಮಂಜುನಾಥ ಗುಡಿಮನಿ, ಶಿವಾನಂದ ರಾಠೋಡ, ಮೀನಾಕ್ಷಿ ಶಂಕರ ಶರಣದವರ, ಪ್ರಶಾಂತ ಮಾದರ, ಡಾ.ಸದಾನಂದ ಸುಗಂಧಿ, ಶಿವಾನಂದ ಅಮರಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.