ಲೋಕದರ್ಶನ ವರದಿ
ಸಿರುಗುಪ್ಪ 16: ಹೊಸಪೇಟೆ ನಗರದಲ್ಲಿ ವಯಸ್ಕರ ಶಿಕ್ಷಣ ಮೂಲ ಸಾರ ಕಾರ್ಯಕ್ರಮ ಪ್ರಗತಿ ಪರಿಶೀಲನೆಯನ್ನು ಲೋಕ ಶಿಕ್ಷಣ ಕೇಂದ್ರಗಳಿಗೆ ಕನರ್ಾಟಕ ಸರ್ಕಾರ ಲೋಕ ಶಿಕ್ಷಣ ನಿದರ್ೆಶನಾಲಯದ ಉಪನಿರ್ದೇಶಕರು ಬೆಂಗಳೂರು ಬೆಂಗಳೂರಿನ ಕೆಎನ್ ವಿಜಯ ಅವರು ಭೇಟಿ ನೀಡಿ ಪರಿಶೀಲಿಸಿದರು.
ಹೊಸಪೇಟೆ ನಗರದ ಸಿದ್ದಲಿಂಗಪ್ಪ ಚೌಕಿ ಚಪ್ಪರದಹಳ್ಳಿ ಎಸ್.ಆರ್.ನಗರ ಉಪ ವಿಭಾಗ ಮಟ್ಟದ ಸಾರ್ವಜನಿಕರ ಸರಕಾರಿ ಆಸ್ಪತ್ರೆ ಬಳಿಯ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಕಲಿಕಾ ಪ್ರಕ್ರಿಯೆಯನ್ನು ಪರಿಶೀಲಿಸಿ ಮಾತನಾಡಿ ಬಳ್ಳಾರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಪ್ರಸಕ್ತ ಸಾಲಿನ ಡಾ. ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಅನಕ್ಷರಸ್ಥರಿಗೆ ಶಿಕ್ಷಣ ನೀಡಲಾಗುತ್ತಿದೆ.ಅಲ್ಲದೆ ನಗರ ಅಥವಾ ಪಟ್ಟಣ ಕೊಳಚೆ ಪ್ರದೇಶ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲಾಗುವುದು.ಹಾಗಾಗಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು. ಬಳಿಕ ಕಲಿಕಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ಮೌನೇಶ್, ಹೊಸಪೇಟೆ ತಾಲೂಕು ಸಾಕ್ಷರತಾ ಸಂಯೋಜಕ ಕೆ.ವರಪ್ರಸಾದ್, ಲೋಕ ಶಿಕ್ಷಣ ನಿದರ್ೆಶನಾಲಯದ ಆರ್ಥಿಕ ಸಲಹೆಗಾರ ರವಿ ಕುಮಾರ್, ಸಾಕ್ಷರತಾ ಸಾಮಾಜಿಕ ಕಾರ್ಯಕರ್ತರಾದ ಶೋಭಾ, ಶೇಖನ್.ಬಿ, ರೋಫಿಯಾ ಬೇಗಂ, ಮೊಹಮ್ಮದ್ ಗೌಸ್, ವಿರುಪಾಕ್ಷಿ ಮತ್ತಿತರರಿದ್ದರು.