ಸಿರುಗುಪ್ಪ: ವಿಶೇಷ ಆಧಾರ್ ನೋಂದಣಿ

ಸಿರುಗುಪ್ಪ 11: ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ವಿಶೇಷ ಆಧಾರ್ ನೋಂದಣಿ ಅಭಿಯಾನವನ್ನು ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪೋಸ್ಟ್ ಮಾಸ್ಟರ್ ಗ್ರೇಡ್-2 ಬಿ ನಾಗರಾಜ್ ತಿಳಿಸಿದರು. 

ಪೋಸ್ಟ್ ಫೋರಂ ಸದಸ್ಯರಾದ ಎ.ಅಬ್ದುಲ್ ನಬಿ ಮಾತನಾಡಿ ಸಿರುಗುಪ್ಪ ನಗರ ದಿನ ದಿಂದ ದಿನಕ್ಕೆ ಬೆಳೆಯುತ್ತಿದ್ದು ಜನಸಂಖ್ಯೆ ಅನುಗುಣವಾಗಿ ಸಿಬ್ಬಂದಿ ಒದಗಿಸುವಂತೆ ಕೋರಿ ಹಾಲಿ ಸಿಬ್ಬಂದಿಯ ಸ್ನೇಹಪರ ಸೇವೆಯನ್ನು ಶ್ಲಾಘಿಸಿದರು.ಅಂಚೆ ಇಲಾಖೆಯ ಕೆ ಧನಲಕ್ಷ್ಮಿ, ಪ್ರದೀಪ್ ಕುಮಾರ್ ಬಿಇ, ಶಿವಪ್ರಸಾದ್ ಅವರು ಮಾತನಾಡಿ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯು ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಸೇವೆ ಕಾರ್ಯಕ್ರಮ ಜಾಗೃತಿ ಮೂಡಿಸುವುದು ಸದುಪಯೋಗಿಸಿ ಕೊಳ್ಳಲು ಭಾಗವಹಿಸಬೇಕು ಎಂದರು ಎ.ಮೊಹಮ್ಮದ್ ನೌಷಾದ್ ಅಲಿ ಸಿಬ್ಬಂದಿ ವರ್ಗದವರು ಇದ್ದರು.