ಲೋಕದರ್ಶನ ವರದಿ
ಸಿರುಗುಪ್ಪ 11: ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸ್ಟಾರ್ ರೋರಲ್ & ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆಯ ಸಹಯೋಗದೊಂದಿಗೆ 20ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ರಕ್ತದಾನ ಶಿಬಿರವನ್ನು ತಹಶೀಲ್ದಾರ್ ದಯಾನಂದ್ ಪಾಟೀಲ್ ಉದ್ಘಾಟಿಸಿ ಮಾತನಾಡಿದ ಅವರು ಪತ್ರಕರ್ತರು ಸಮಾಜದಲ್ಲಿನ ಹಲವು ವಿಷಯಗಳನ್ನು ಪತ್ರಿಕೆಗಳ ಮೂಲಕ ಬೆಳಕಿಗೆ ತರುವ ಮೂಲಕ ಸಮಾಜದಲ್ಲಿ ಬದಲಾವಣೆ ಮೂಡಿಸಿದಂತೆ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಆಥರ್ಿಕ ದುಸ್ಥಿತಿಯಲ್ಲಿರುವವರಿಗೆ ನೆರವು ನೀಡುವ ಕಾರ್ಯ ಶ್ಲಾಘನೀಯವಾಗಿದ್ದು ಎಂದರು.
ಸಂಸ್ಥೆಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ ಸಮಾಜದಲ್ಲಿನ ಆಥರ್ಿಕವಾಗಿ ದುಸ್ಥಿತಿಯಲ್ಲಿರುವ ಕುಟುಂಬಗಳು ಮದುವೆ ಸಮಾರಂಭಗಳಿಗೆ ಹೆಚ್ಚಿನ ಹಣ ಖರ್ಚುಮಾಡಲು ಆಗದೆ ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಅಂತಹವರ ವಿವಾಹವನ್ನು ಸರಳ ಸಾಮೂಹಿಕ ವಿವಾಹದ ಮೂಲಕ ಆಚರಿಸಿಕೊಳ್ಳಲು ನೆರವು ನೀಡುವ ಉದ್ದೇಶದಿಂದ ಕಳೆದ 20ವರ್ಷಗಳಿಂದ ತಾಲೂಕಿನಲ್ಲಿ ವಾರ್ಷಿಕೋತ್ಸವ ಅಂಗವಾಗಿ ಸರಳ ವಿವಾಹಗಳನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಪ್ರತಿಯೊಬ್ಬರು ಆಡಂಬರದ ವಿವಾಹಗಳನ್ನು ಆಚರಿಸಿಕೊಳ್ಳುವುದನ್ನು ಬಿಟ್ಟು ಇಂತಹ ಸರಳ ವಿವಾಹಗಳಲ್ಲಿ ಮದುವೆಯಾಗುವುದರಿಂದ ದೇಶಕ್ಕೆ ಆಥರ್ೀಕ ನಷ್ಟವಾಗುವುದನ್ನು ತಪ್ಪಿಸಿದಂತಾಗುತ್ತದೆ. ಎಂದುರು.
11ಜೋಡಿ ಸಾಮೂಹಿಕ ವಿವಾಹದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟರು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಾ ರ್ಷಿಕ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಮ್ಮಿಗನೂರಿನ ಜಡೇಸ್ವಾಮಿಗಳು, ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ದಯಾಲಯದ ಪೂಣರ್ಿಮ ಅಕ್ಕನವರು, ತೆಕ್ಕಲಕೋಟೆಯ ಬಸಪ್ಪ ತಾತ, ಹಿರಿಯ ಪತ್ರಕರ್ತರಾದ ಸಿ.ಜಿ.ಹಂಪಣ್ಣ, ಜಗನ್ಮೋಹನರೆಡ್ಡಿ, ಮುಖಂಡರಾದ ಮಾರೆಪ್ಪ, ದರೂರು ಪುರುಷೋತ್ತಮಗೌಡ, ಗಾದಿಲಿಂಗಮೂರ್ತಿ ಕೋರಿ ಪಿಡ್ಡಯ್ಯ, ಶರಣಬಸವ, ಲಿಲ್ಲಿಥಾಮಸ್, ಶಿಲ್ಪಾ ಸೇರಿದಂತೆ ಇನ್ನಿತರರು ಇದ್ದರು.