ಸಿರಗುಪ್ಪ: ಹೆಚ್ಚುವರಿ ಬಸ್ ಸಂಚಾರಕ್ಕಾಗಿ ಪ್ರತಿಭಟನೆ

ಲೋಕದರ್ಶನ ವರದಿ

ಸಿರಗುಪ್ಪ 05: ತಾಲೂಕಿನ ವಿವಿಧ ಹಳ್ಳಿಗಳಿಗೆ ಹೆಚ್ಚುವರಿ ಬಸ್ ಸಂಚಾರ, ಸಮಯಪಾಲನೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಎಬಿವಿಪಿ ತಾಲೂಕು ಘಟಕದ ನೇತೃತ್ವದಲ್ಲಿ ಕಾಲೇಜು ವಿದ್ಯಾಥರ್ಿಗಳು ಪಟ್ಟಣದ ಸಾರಿಗೆ ಘಟಕದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. 

ಸಂಘಟನೆ ತಾಲೂಕು ಸಂಚಾಲಕ ವಿ.ಕುಮಾರ್ನಾಯಕ ಮಾತನಾಡಿ, ತಾಲೂಕಿನ ಸಂಚರಿಸುವ ಒಂದು, ಎರಡು ಬಸ್ಗಳ ಸಿಬ್ಬಂದಿ ಸಮಯ ಪಾಲಿಸುತ್ತಿಲ್ಲ. ವಿದ್ಯಾಥರ್ಿಗಳಿಗೆ ಕಾಲೇಜು ಸಮಯಕ್ಕೆ ತೆರಳಲು ಸಾಧ್ಯವಾಗದೇ ಆರಂಭದ ತರಗತಿಗಳು ತಪ್ಪುತ್ತಿವೆ. ಸೂಕ್ತ ಕ್ರಮಕೈಗೊಂಡು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ಮನವಿ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಗಂಗಾಧರ, ಸ್ಥಳೀಯ ಘಟಕದಲ್ಲಿ ಕಡಿಮೆ ಬಸ್ಗಳಿದ್ದು, ಮೇಲಧಿಕಾರಿಗಳ ಜತೆ ಚಚರ್ಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳು ಪ್ರತಿಭಟನೆ ಕೈ ಬಿಟ್ಟರು. ತಾಲೂಕು ಕಚೇರಿ ಶಿರಸ್ತೇದಾರ್ ಎಸ್.ಲೀಲಾ, ಪಿಎಸ್ಐ ಗಂಗಪ್ಪಬುಲರ್ಿ, ಎಸ್ಎಫ್ಡಿ ಬಳ್ಳಾರಿ ವಿಭಾಗದ ಸಂಚಾಲಕ ಎಂ.ಎಸ್.ಅಂಬಣ್ಣ, ಎಬಿವಿಪಿ ಪದಾಧಿಕಾರಿಗಳಾದ ಜಿ.ಕಾಡಸಿದ್ದ, ಕಲ್ಲೂರು ನಾಗಲಿಂಗ, ವೀರಾಂಜನ್, ಗುರು, ಬಿ.ಕೆ.ವೀರೇಶ್ ಇತರರಿದ್ದರು.