ಲೋಕದರ್ಶನ ವರದಿ
ಸಿರಗುಪ್ಪ 06: ಕಾನೂನು ಬದ್ಧವಾಗಿ ಕೆಲಸ ಮಾಡುವ ವಕೀಲರ ಮೇಲೆ ಪೊಲೀಸರು ವಿನಃ ಕಾರಣ ದೌರ್ಜನ್ಯ ಎಸಗುತ್ತಿದ್ದು, ವಕೀಲರಿಗೆ ಭದ್ರತೆ ಇಲ್ಲದಂತಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ ಒತ್ತಾಯಿಸಿದರು.
ದೆಹಲಿ ಮತ್ತು ಕಂಪ್ಲಿಯಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬುಧವಾರ ಮಾತನಾಡಿದರು. ಕಕ್ಷಿದಾರರ ಪರ ಕೆಲಸ ನಿರ್ವಹಿಸುತ್ತಿರುವ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಿ, ಸೂಕ್ತ ರಕ್ಷಣೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲರು ಕೆಂಪು ಪಟ್ಟಿ ಧರಿಸಿ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಕಾರ್ಯದಶರ್ಿ ಎಸ್.ಮಂಜುನಾಥಗೌಡ, ಉಪಾಧ್ಯಕ್ಷ ಬಿ.ಉದಯಶಂಕರ್, ವಕೀಲರಾದ ಸಿದ್ದಲಿಂಗಯ್ಯ ಹಿರೇಮಠ, ವೆಂಕಟೇಶ ಆಚಾರ, ಪಿ. ಮಹಾದೇವಪ್ಪ, ಎನ್.ನಾಗರಾಜ, ಪ್ಯಾಟೇಗೌಡ, ವಿಜಯ್ಕುಮಾರ್, ಎಚ್.ಶೇಖಣ್ಣ, ಯು.ವೆಂಕೋಬ, ವೈ.ವೀರೇಶ, ಸುರೇಶ್ಸ್ವಾಮಿ, ನೆಲಗುಂಟಯ್ಯ, ರಾಜಭಕ್ಷಿ, ತಿರುಮಲ ಇದ್ದರು.