ಸಿಂದಗಿ; ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಲೋಕದರ್ಶನ ವರದಿ

ಸಿಂದಗಿ 17: ಕಳೇದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ಈ ಕ್ಷೇತ್ರದ ಮೂಲಭೂತ ಸೌಲಭ್ಯಗಳನ್ನು ಒಂದೊಂದಾಗಿ ಒದಗಿಸುವದರ ಮೂಲಕ ಸಂಪೂರ್ಣ ಅಭಿವೃದ್ದಿ ಪಡೆಸುವುದೇ ನಮ್ಮ ಮೂಲ ಉದ್ದೇಶವಾಗಿದ್ದು ಅದಕ್ಕೆ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೇ ನಮಗೆ ಶ್ರೀರಕ್ಷೆ ಎಂದು ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

              ಪಟ್ಟಣದ ಶಾಂತೇಶ್ವರ ನಗರದ ವಾರ್ಡ 21 ರ ಇಂದಿರಾನಗರದಲ್ಲಿ ಶನಿವಾರ ಪುರಸಭೆ ಕಾರ್ಯಾಲಯದ ನಗರೋತ್ಥಾನ ಮೂರನೇ ಹಂತದ  ರೂ 25 ಲಕ್ಷಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ವಾರ್ಡ 2ರ ಸಂಗಮೇಶ್ವರ ಲೇಔಟನಲ್ಲಿ ಸನ್ 2019-20 ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಅರ್ಬನ್ ಬ್ಯಾಂಕನಿಂದ ಹೂಗಾರ ಮನೆಯವರೆಗೆ ರೂ. 10 ಲಕ್ಷಗಳಲ್ಲಿ ಸಿಸಿ ರಸ್ತೆಗೆ  ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗಿದ್ದು ಆದರೆ ತಾಂತ್ರಿಕ ಅಡತಡೆಗಳಿಂದ ಕಾಮಗಾರಿಗಳು ಮಂದಗತಿಯಿಂದ ನಡೆಯುತ್ತಿದ್ದು ಕೆಲವೊಂದು ಕಾಮಗಾರಿಗಳು ಟೆಂಡರ ಹಂತದಲ್ಲಿವೆ. ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಬರದಿಂದ ಸಾಗಿದ್ದು ಮುಂಬರುವ ಬೆಸಿಗೆಯೊಳಗೆ ಸಾರ್ವಜನಿಕರಿಗೆ ಶುದ್ಧ ನೀರು ಸರಬರಾಜು ಮಾಡುವ ಕನಸು ಕಂಡಿದ್ದೇವೆ. ಈ ಸರಕಾರವು ಹಿಂದೆ ಮಂಜೂರಾದ ಕಾಮಗಾರಿಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದು ಕಾಲಕ್ರಮೇಣ ಕಾಮಗಾರಿಗಳು ಪ್ರಗತಿಯತ್ತ ಸಾಗುತ್ತವೆ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. 

         ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಯೀದ ಅಹ್ಮದ ದಖನಿ, ಪುರಸಬೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಪ್ರೋ.ಬಿ.ಎ.ಪಾಟೀಲ,  ಶಿವಶಂಕರಗೌಡ ಪಾಟೀಲ, ಗುರು ಬಸರಕೋಡ, ದಾನಪ್ಪ ಜೋಗುರ, ಎಂ.ಎಂ.ಹಂಗರಗಿ, ಮಾಹದೇವಪ್ಪ ಯಡ್ರಾಮಿ, ಶಿವಾನಂದ ಕಲಬುರ್ಗಿ, ಬಸಯ್ಯ ಹಿರೇಮಠ ಬಂದಾಳ, ಶ್ರೀಶೈಲ ಕುಂಬಾರ, ವಿಶ್ವನಾಥ ಜೋಗುರ ಸೇರಿದಂತೆ ಅನೇಕರು ಇದ್ದರು.