ಲೋಕದರ್ಶನ ವರದಿ
ಸಿಂದಗಿ 25: ಬ್ಯಾಂಕಗಳು ಕೇವಲ ತಮ್ಮನ್ನು ಆಥರ್ಿಕ ಸೇವೆಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಸಾಮಾಜಿಕ ಸೇವಾ ಕಾರ್ಯಮಾಡುತ್ತಿರುವುದು ಶ್ಲಾಘನೀಯ ಎಂದು ತಾಲೂಕಿನ ಗೋಲಗೇರಿ ಗ್ರಾಮದ ಪರಮಾನಂದ ಶಿಕ್ಷಣ ಸಂಸ್ಥೆಯ ಚೇರಮನ್ ರಾಜಶೇಖರ ಬಿರಾದಾರ ಅವರು ಅಭಿಪ್ರಾಯ ವ್ಯಕ್ತ ಪಡೆಸಿದರು.
ತಾಲೂಕಿನ ಗೋಲಗೇರಿ ಗ್ರಾಮದಲ್ಲಿನ ಮುಳಸಾವಳಗಿ ಸಂಗನಗೌಡ ಬಿರಾದಾರ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಸಿಂದಗಿಯ ಬ್ಯಾಂಕ ಆಫ್ ಬರೋಡಾದ ಶಾಖೆಯವರು ತಮ್ಮ 112ನೇ ಸ್ಥಾಪನೆಯ ದಿನಾಚರಣೆಯ ಅಂಗವಾಗಿ ಸಾಮಾಜಿಕ ದತ್ತು ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಂದಗಿಯ ಬ್ಯಾಂಕ ಆಫ್ ಬರೋಡಾದ ಶಾಖೆಯ ಹಿರಿಯ ಪ್ರಬಂಧಕರಾದ ದರ್ಶನ ಉಪಾದ್ಯೆ, ಅಧಿಕಾರಿಗಳಾದ ರಮೇಶ, ಲಕ್ಷ್ಮಣ ಮತ್ತು ಗೂಳಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ಈ ಕನ್ನಡ ಮಣ್ಣನು ಮರೆಯಬೇಡ ಓ ಅಭಿಮಾನಿ ಎಂಬ ಹಾಡಿಗೆ ಮೂಕ ಮತ್ತು ಕಿವುಡ ಮಕ್ಕಳು ನೃತ್ಯವನ್ನು ಮಾಡಿದರು. ಶಾಲಾ ಗೋಡೆಗಳ ಮೇಲೆ ಸನ್ನೆ ಭಾಷೆ ಚಿತ್ರಗಳನ್ನು ನೋಡಿ ಅದಕ್ಕೆ ಸ್ಪಂದಿಸಿದ ಹಾಡುಗಳನ್ನು ಕಂಡು ಬ್ಯಾಂಕಿನ ಅಧಿಕಾರಿಗಳು ಹರ್ಷ ವ್ಯಕ್ತ ಪಡೆಸಿದರು.
ಸುನಂದಾ ಬಿರಾದಾರ, ಯಮನವ್ವ ಭಜಂತ್ರಿ, ಪ್ರಕಾಶ ಹದಗಲ, ಸಂತೋಷ ಅಂಕಲಗಿ, ಚಂದ್ರಕಾತ ಸುಂಗಟಾನ, ಅವಿನಾಶ ಕರವಿನಾಳ ಹಾಗೂ ಶಾಲಾ ಮೂಕ ಮತ್ತು ಕಿವುಡ ಮಕ್ಕಳು ಕಾರ್ಯಕ್ರಮದಲ್ಲಿ ಇದ್ದರು. ಸುಮಿತ್ರಾ ನೂರಜಹಾನ ಪ್ರಾರ್ಥನೆ ಹಾಡಿದರು. ಮಹಾದೇವಿ ಬಿರಾದಾರ ಸ್ವಾಗತಿಸಿದರು. ಶಕುಂತಲಾ ಬಿರಾದಾರ ನಿರೂಪಿಸಿದರು. ರುಬಿನಾ ವಂದಿಸಿದರು.