ಸಿಂದಗಿ: ಸ್ವಾತಂತ್ಯ ಚಳುವಳಿಗೆ ಪತ್ರಿಕಾ ಕ್ಷೇತ್ರದ ಕೊಡುಗೆ ಅಪಾರ

ಲೋಕದರ್ಶನ ವರದಿ

ಸಿಂದಗಿ 15: ಪತ್ರಿಕಾರಂಗ ಈ ದೇಶದ ಅತ್ಯಂತ ಪವಿತ್ರವಾಗಿರುವ ರಂಗ. ಸ್ವಾತಂತ್ಯ ಚಳುವಳಿಗೆ ಪತ್ರಿಕಾ ಕ್ಷೇತ್ರದ ಕೊಡುಗೆ ಮರೆಯುವಂತಿಲ್ಲ ಎಂದು ವಿಧಾನ ಪರಿಷತ್ತ ಸದಸ್ಯ ಅರುಣ ಶಹಾಪೂರ ಹೇಳಿದರು.      

ರವಿವಾರ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ  ಮಂಟಪದಲ್ಲಿ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಾ ಶಾಖೆಯು ದಿ. ರೇ.ಚ.ರೇವಡಿಗಾರ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಪತ್ರಿಕಾ ದಿನಾಚಾರಣೆ, ನೂತನ ಪದಾಕಾರಿಗಳ ಪದಗ್ರಹಣ  ಸಮಾರಂಭ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಆಡಳಿತ ಪಕ್ಷಗಳನ್ನು ಹಾಗೂ ವಿರೋಧ ಪಕ್ಷಗಳಿಗೆ ಪ್ರತಿ ಕ್ಷಣಕ್ಕೂ ಎಚ್ಚರಿಕೆಯನ್ನು ನೀಡುತ್ತಲೆ ಇರುತ್ತದೆ. ಸಿಂದಗಿಯ ಹಿರಿಯ ವರದಿಗಾರ ದಿ. ರೇ.ಚ.ರೇವಡಿಗಾರ ಅವರು ಪತ್ರಿಕಾ ಭೀಷ್ಮರೆಂದೆ ಖ್ಯಾತಿಯಾದವರು ಅವರ ಹೆಸರನ್ನು ಅಜರಾಮರವಾಗಿಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಿಂದಗಿ ಮತ ಕ್ಷೇತ್ರದ ಶಾಸಕರೊಂದಿಗೆ ಚಚರ್ಿಸಿ ನಾವು ಜಂಟಿಯಾಗಿ ರೇ.ಚ.ರೇವಡಿಗಾರ ಅವರ ಹೆಸರಿನ ಪತ್ರಿಕಾ ಭವನ ನಿರ್ಮಾಣ ಮಾಡುವ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ ಹಿರಿಯ ವರದಿಗಾರ ಶಾಂತೂ ಹಿರೇಮಠ ಮಾತನಾಡಿ, ಸಮಾಜದ ಓರೆ ಕೊರೆಗಳನ್ನು ಎತ್ತಿತೊರಿಸುವದಷ್ಟೇ ಕಾರ್ಯ ವಿನಃ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡುವುದಲ್ಲ. ಪತ್ರಕರ್ತರಲ್ಲಿ ಪ್ರಾಮಾಣಿಕತೆ, ವೃತ್ತಿ ಗೌರವಗಳು ಹೆಚ್ಚಾಗಬೇಕು ಎಂದರು.

ಸಾನಿಧ್ಯ ವಹಿಸಿದ ಸ್ಥಳಿಯ ಸಾರಂಗಮಠ-ಗಚ್ಚಿನಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿದರು. 

ಪತ್ರಿಕಾ ದಿನಾಚಾರಣೆ ನಿಮಿತ್ಯ ಹಮ್ಮಿಕೊಂಡಿರುವ ರಕ್ತದಾನ ಶಿಭಿರದಲ್ಲಿ ಪತ್ರಕರ್ತರು, ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾಥರ್ಿಗಳು  ಸೇರಿದಂತೆ ಸುಮಾರು 44 ಜನರು ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡಿದರು.   

ಕಾನಿಪದ ಜಿಲ್ಲಾಧ್ಯಕ್ಷ ಶರಣು ಮಸಳಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಇಂದುಶೇಖರ ಮಣೂರ, ಮಲ್ಲಿಕಾರ್ಜುನ ಕೆಂಬಾವಿ, ಆಸ್ಪಾಕ ಕರ್ಜಗಿ, ಶಶಿಕಾಂತ ಮೆಂಡೆಗಾರ, ಗುರುರಾಜ ಗದ್ದನಕೇರಿ, ಡಾ. ಶಿವಾನಂದ ಗುಂಡಳ್ಳಿ,  ತಾಲೂಕಾ ಅಧ್ಯಕ್ಷ ಆನಂದ ಶಾಬಾದಿ, ಪ್ರಧಾನಕಾರ್ಯದಶರ್ಿ ಮಲ್ಲಿಕಾರ್ಜುನ ಅಲ್ಲಾಪೂರ ಅವರು ವೇದಿಕೆ ಮೇಲೆ ಇದ್ದರು.   

ಕಾರ್ಯಕ್ರಮದಲ್ಲಿ ತಾಲೂಕಿನ ಪತ್ರಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.               

ಸಿಂದಗಿಯ ರಾಗರಂಜನಿಯ ಡಾ. ಪ್ರಕಾಶ ಪ್ರಾಥರ್ಿಸಿದರು. ತಾಲೂಕಾಧ್ಯಕ್ಷ ಆನಂದ ಶಾಬಾದಿ ಸ್ವಾಗತಿಸಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿದರು.  ಪಂಡಿತ ಯಂಪೂರೆ ವಂದಿಸಿದರು.