ಸಿಂದಗಿ: ರಸ್ತೆ ದುರಸ್ಥಿ: ಸುಗಮ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಸಿಂದಗಿ 26: ತಾಲೂಕಿನ ಚಟ್ಟರಕಿ ಕಡ್ಲೇವಾಡ ರಸ್ತೆ ಬಂದಾಗಿರುವುದನ್ನು ದುರಸ್ಥಿ ಮಾಡಬೇಕು. ಸಂಚಾರಕ್ಕೆ ಸುಗಮ ಮಾಡಿಕೊಡಬೇಕು ಎಂದು ಚಟ್ಟರಕಿ ಗ್ರಾಮಸ್ಥರು ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಕೀಲ, ಬಿಜೆಪಿ ಮುಖಂಡ ಶಂಭುಲಿಂಗ ಕಕ್ಕಳಮೇಲಿ, ಡಿಎಸ್ಎಸ್ ಭೀಮ ಘರ್ಜನೆ ತಾಲೂಕಾ ಅಧ್ಯಕ್ಷ ಶ್ರೀಶೈಲ ಜಾಲವಾದ, ಶ್ರೀಶೈಲ ಮುಳಜಿ, ಬಿಜೆಪಿ ಯುವ ಮೋಚರ್ಾ ತಾಲೂಕಾ ಅಧ್ಯಕ್ಷ ಶಿವು ನಾಟಿಕಾರ, ಕಾಂಗ್ರೇಸ್ ಯುವ ಮುಖಂಡ ದಾದಾ ಸಿಂದಗಿ, ಗ್ರಾಪಂ ಅಧ್ಯಕ್ಷ ಅಪ್ಪು ಪಾಟೀಲ ಹಾಗೂ ಇತರರು ಮಾತನಾಡಿ, ತಾಲೂಕಿನ ಚಟ್ಟರಕಿ ಗ್ರಾಮದಿಂದ ಕಡ್ಲೇವಾಡ ಗ್ರಾಮಕ್ಕೆ ಸಂಪಕರ್ಿಸುವ ರಸ್ತೆಯು ಖಾಸಗಿ ಮಾಲಿಕತ್ವದ ಹೊಲದಲ್ಲಿ ಹಾದು ಹೋಗಿದೆ. ಈ ರಸ್ತೆ ನಿರ್ಮಾಣ  ಸಂದರ್ಭದಲ್ಲಿ ಹೇಳಿದಂತೆ ಹೊಲದ ಮಾಲಿಕರಿಗೆ ಪರಿಹಾರ ಹಣ ಬಂದಿಲ್ಲ ಎಂದು ಹೊಲ ಮಾಲಿಕರು ರಸ್ತೆ ಅಗೆದಿದ್ದಾರೆ. ಇದರಿಂದ ಚಟ್ಟರಕಿ ಕಡ್ಲೇವಾಡ ರಸ್ತೆ ಸಂಪರ್ಕ ಬಂದಾಗಿದೆ ಎಂದು ಆರೋಪಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಅರ್ಜುನ ಮಾಲಗಾರ, ಮಲ್ಲನಗೌಡ ಬಿರಾದಾರ, ಅಯ್ಯನಗೌಡ ಪಾಟೀಲ, ಸುರೇಶ ಹೂಗಾರ, ರುದ್ರಯ್ಯ ಹಿರೇಮಠ, ಶ್ರೀಶೈಲ ಯಳಸಂಗಿ, ಶಿವಾನಂದ ನಾಟಿಕಾರ, ಪ್ರಶಾಂತ ಪಾಟೀಲ, ದಯಾನಂದ ಸೋಲಾಪೂರ, ಅಣ್ಣಾರಾಯಗೌಡ ಮಾಲಗಾರ, ಶಿವಾನಂದ ಮಾಲಗಾರ, ಮಲ್ಲನಗೌಡ ಚೌಧರಿ, ಯಲ್ಲಪ್ಪಾ ಬೊಮ್ಮನಳ್ಳಿ, ಪ್ರಶಾಂತ ಪಾಟೀಲ, ಶಶಿಕಾಂತ ಮಾಲಗಾರ, ಹುಸೇನ ಬಾಷಾ ಮಂಗಳೂರು, ಶ್ರೀಮಂತ ಹರಿಜನ ಸೇರಿಂದತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.