ಸಿಂದಗಿ: ರಮೇಶ ಜಿಗಜಿಣಗಿ ರೋಡ್ ಷೋ

ಲೋಕದರ್ಶನ ವರದಿ

ಸಿಂದಗಿ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ರಮೇಶ ಜಿಗಜಿಣಗಿ ಅವರು ರೋಡ್ ಷೋ ಮಾಡಿದರು.

ನಂತರ ಮಾತನಾಡಿದ ಅವರು,  ಮೂಲಕ ನನ್ನ ಅಧಿಕಾರದ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ದೊಡ್ಡ ಜನ ನನ್ನ ಬಗ್ಗೇ ಏನಬೇಕಾದರು ಮಾತಾಡ್ಕೊಳ್ಳಿ ನಾವು ನಮ್ಮ ಕೆಲಸ ನಾವು ಮಾಡ್ಕೋತ ಹೋಗೋಣ. ದೇಶದ ಭವಿಷ್ಯ ಮುಖ್ಯವಾಗಿದೆ. ಆದ್ದರಿಂದ ಮತ್ತೆ ದೇಶದ ಪ್ರಧಾನಿಯನ್ನಾಗಿ ನರೇಂದ್ರ ಮೋದಿ ಅವರನ್ನು ಮಾಡೋಣ. ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ನನ್ನನ್ನು ಚುನಾಯಿಸಿ ದೇಶದಲ್ಲಿ ನರೇಂದ್ರ ಮೋದಿ ಅವರ ಕೈ ಬಲ ಪಡೆಸೋಣ ಎಂದರು. 

ರೋಡ್ ಷೋದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಮೇಶ ಜಿಗಜಿಣಗಿ ಅವರು 2ಲಕ್ಷಕ್ಕು ಹೆಚ್ಚು ಬಹುಮತದಿಂದ ದಾಖಲೆ ಗೆಲುವು ಸಾಧಿಸುವುದು ಖಚಿತ. ಜಿಗಜಿಣಗಿ ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.

ತಾ.ಪಂ. ಸದಸ್ಯ ಶ್ರೀಶೈಲ ಚಳ್ಳಗಿ, ಬಿಜೆಪಿ ಮುಖಂಡರಾದ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಪ್ರಭುಗೌಡ ಪಾಟೀಲ ಡಂಬಳ, ಮಹಾಂತೇಶ ಸಾತಿಹಾಳ, ಸೈಫನ್ ಕೋರವಾರ, ಮಲ್ಲಿಕಾಕಾಜರ್ುನ ಜೋಗೂರ, ಮಹಾದೇವ ರಾಠೋಡ್ ಶಾಬಾದಿ ಮಂಜು ನಾಯ್ಕೋಡಿ, ಶಿವು ತಳವಾರ್, ಮಂಜು ಗಣಪುರ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ರೋಡ್ ಷೋದಲ್ಲಿ ಭಾಗಿಯಾಗಿದ್ದರು.