ಸಿಂದಗಿ: ಗಿಡಗಳನ್ನು ನೆಟ್ಟು ಅರಣ್ಯ ಉಳಿಸಿ: ಹುರಕಡ್ಲಿ

ಲೋಕದರ್ಶನ ವರದಿ

ಸಿಂದಗಿ 27: ಮನೆಗೊಂದು ಮರ, ಊರಿಗೊಂದು ವನ ಎನ್ನುವ ತತ್ವದಡಿಯಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಮೂಲಕ ಅರಣ್ಯ ಬೆಳೆಸಬೇಕು ಎಂದು ಸ್ಥಳಿಯ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಂ.ಹುರಕಡ್ಲಿ ಹೇಳಿದರು.

ಗುರುವಾರ ಪಟ್ಟಣದ ವಿದ್ಯಾನಗರದ 4ನೇ ಕ್ರಾಸ್ನಲ್ಲಿನ ವಿದ್ಯಾಚೇತನ ಹಿರಿಯ ಪ್ರಾಥಮಿಕಶಾಲೆಯ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ತಾಲೂಕಾ ಸಂಸ್ಥೆಯು ವಿದ್ಯಾಚೇತನ ಹಿರಿಯ ಪ್ರಾಥಮಿಕಶಾಲೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯಲ್ಲಿ ಶೇ.0.17 ರಷ್ಟು ಅರಣ್ಯ ಪ್ರದೇಶ ಇರುವುದರಿಂದ ಸತತ ಬರಗಗಾಲಕ್ಕೆ ತುತ್ತಾಗುತ್ತಿದೆ. ಈ ಬವಣೆಯಿಂದ ತಪ್ಪಿಸಿಕೊಳ್ಳಲು ನಾವು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ಪರಿಸರ ರಕ್ಷಣೆ ಕೆವಲ ಕಾರ್ಯಕ್ರಮದಿಂದ ಈಡೆರಿಸಲು ಸಾಧ್ಯವಿಲ್ಲ. ನಿಮ್ಮ ಮನೆ, ಅಕ್ಕಪಕ್ಕದವರ ಮನೆ, ಶಾಲೆ ಆವರಣ, ಸರಕಾರಿ ಕಚೇರಿಗಳ ಆವರಣದಲ್ಲಿ ಹೀಗೆ ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲೆಲ್ಲ ಗಿಡ ನೆಡಬೇಕು. ನೆಟ್ಟ ಗಿಡ ಹೆಮ್ಮರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಗುರುಮಾತೆ ಜ್ಯೋತಿ ಪೂಜಾರ, ಶಿಕ್ಷಕರಾದ ಮೇರಿ ಮಿಸ್, ಜಾರ್ಜ ಡಿಸೋಜಾ, ದಾನಮ್ಮ ಗಣಾಚಾರಿ, ರಾಜು ಹಿರೇಕುರಬರ, ವಿಜಯಲಕ್ಷ್ಮಿ ಶಹಾಪೂರ, ಅಕ್ಷತಾ ಅರ್ಜುಣಗಿ , ಸೌಮ್ಯಾ, ಆಶ್ವಿನಿ ಲೋಣಿ, ಸಾಧನಾ ಇಮಡೆ, ಮಂಗಳಾ ಬಮ್ಮಣ್ಣಿ, ವಿಜಯಲಕ್ಷ್ಮಿ ಮಠಪತಿ, ಗೌರಿ ಪಾಟೀಲ, ಶರಣು ಗೋಜರ್ಿ, ಅಂಬಿಕಾ ಸೇರಿದಂತೆ  ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಇದ್ದರು.

ಭಾರತೀಯ ರೆಡ್ ಕ್ರಾಸ್ ತಾಲೂಕಾ ಸಂಸ್ಥೆಯ ನಿದರ್ೇಶಕ ರಮೇಶ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿ  ಯುವರಾಜ ಚಂಡ್ರೆಪ್ಪಗೋಳ ನಿರೂಪಿಸಿದರು. ವಿದ್ಯಾಥರ್ಿನಿ ಸ್ಫೂರ್ತಿ  ಹರ್ನಾಳ  ವಂದಿಸಿದರು.