ಲೋಕದರ್ಶನ ವರದಿ
ಸಿಂದಗಿ 31: ಕಲಬುರಗಿ ಜಿಲ್ಲೆಯ ಅರಳಗುಂಡಗಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮಲು ಅವರು ವಿಜಯಪುರ ದಿಂದ ಸಿಂದಗಿ ಮಾರ್ಗವಾಗಿ ಹೋರಟ ಸಂದರ್ಭದಲ್ಲಿ ಚಿಕ್ಕಸಿಂದಗಿ ಬಳಿ ಬೈಪಾಸ್ನಲ್ಲಿ ಅವರಿಗೆ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು.
ಕ್ಷೇತ್ರದಲ್ಲಿ ಸತತ ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿ ಕ್ಷೇತ್ರ ಅಭಿವೃದ್ಧಿ ಮಾಡಿದ ಮಾಜಿ ಶಾಸಕ ರಮೇಶ ಭೂಸನೂರ ಅವರಿಗೆ ಸರಕಾರದ ಒಳ್ಳೆಯ ನಿಗಮ ಅದ್ಯಕ್ಷಸ್ಥಾನ ನೀಡಲು ಕೇಂದ್ರ ಹಾಗೂ ರಾಜ್ಯ ವರಿಷ್ಠರಿಗೆ ಒತ್ತಾಯಿಸುವಂತೆ ಮನವಿ ಮಾಡಿಕೊಂಡರು. ಅದಕ್ಕೆ ಉತ್ತರ ನೀಡಿದ ಸಚಿವರು ವರಿಷ್ಠರಲ್ಲಿ ಸಮಾಲೋಚನೆ ನಡೆಸಿ ನಿರ್ಧಾರ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಕ್ಷದ ಪ್ರಮುಖರಾದ ಎಂ.ಎಸ್.ಮಠ, ಚಂದ್ರಶೇಖರ ನಾಗೂರ, ಅಶೋಕ ಅಲ್ಲಾಪುರ, ಸಂತೋಷ ಪಾಟೀಲ ಡಂಬಳ, ಬಿ.ಎಚ್.ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಸಂದೀಪ ಚೌರ, ಶಿವಾನಂದ ಆಲಮೆಲ, ಸಂತೋಷ ಹರನಾಳ, ಚಂದ್ರಶೇಖರ ಅಮಲಿಹಾಳ ಸೇರಿದಂತೆ ಇತರರು ಇದ್ದರು.