ಲೋಕದರ್ಶನವರದಿ
ಹಾವೇರಿ11 : ಹಿರಿಯ ಸಾಹಿತಿಗಳಿಗೆ ಜಾತ್ಯತೀತ ಪ್ರಜಾಪ್ರಭುತ್ವವಾದಿ ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುಸ್ಕೃತರು, ನಾಟಕಕಾರ ಡಾ.ಗಿರೀಶ್ ಕಾನರ್ಾಡರು ಎಸ್ಎಫ್ಐ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಆಫೀಸ್ ಹತ್ತಿರ ಇರುವ ನಂಬರ್ 2 ಹಾಸ್ಟೆಲ್ ನಲ್ಲಿ ವಿದ್ಯಾಥರ್ಿಗಳಿಂದ ಮೌನ ಆಚರಣೆ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐನ ಜಿಲ್ಲಾ ಸಹಕಾರ್ಯದಶರ್ಿ ಬಸವರಾಜ ಭೋವಿ ಮಾತನಾಡಿ ಗಿರೀಶ ಕಾನರ್ಾಡ್ರು 1938 ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಜಡೆದವರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾನರ್ಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾನರ್ಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು.
ಪ್ರಾಥಮಿಕ ಶಿಕ್ಷಣವನ್ನು ಶಿರಸಿಯಲ್ಲಿ, ಪ್ರೌಢಶಿಕ್ಷಣವನ್ನು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕನರ್ಾಟಕ ಕಾಲೇಜಿನಲ್ಲಿ ಮಾಡಿದರು. ನಂತರ ಉನ್ನತ ಶಿಕ್ಷಣಕ್ಕಾಗಿ ಹರ್ೊಡ್ಸ್ ಸ್ಕಾಲಶರ್ಿಪ್ ಪಡೆದುಕೊಂಡು ಆಕ್ಸ್ಫಡರ್್ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾನರ್ಾಡರು ಆಕ್ಸ್ಫಡರ್್ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಕರುನಾಡಿನ "ಕಾನರ್ಾಡ್ ಜಾತಿ ಧರ್ಮವನ್ನು ಮೀರಿ ಸಮಾಜವನ್ನು ಪ್ರೀತಿಸಿ ದೇಹ ತ್ಯಜಿಸಿದ್ದಾರೆ ಸಮಾಜವನ್ನು ಪ್ರೀತಿಯಿಂದ ಬೆಸೆಯಬೇಕು ಕಟ್ಟಬೇಕು ಈ ದೇಶ ಮಾನವತೆಯ ಅಡಿಯಲ್ಲಿ ಬೆಳೆಯಬೇಕು ಎಂದು ಸದಾ ಹಂಬಲಿಸುತ್ತಿದ್ದ ಗಿರೀಶ್ ಕಾನರ್ಾಡ್ ಆ ಜವಾಬ್ದಾರಿಯನ್ನು ನಮ್ಮೆಲ್ಲರ ಹೆಗಲಿಗೆ ಏರಿಸಿ ತೆರಳಿದ್ದಾರೆ.ಗಿರೀಶ್ ಕಾನರ್ಾಡ್ ಅವರು ಕಂಡ ಪ್ರೀತಿಯ ಕನಸನ್ನು ನಾವೆಲ್ಲರೂ ಸೇರಿ ಬೆಸೆಯೋಣ ಜೊತೆಗೆ ವಿದ್ಯಾಥರ್ಿ - ಯುವ ಜನರು ಗಿರೀಶ್ ಕಾನರ್ಾಡ್ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದು ಬಸವರಜ ಭೋವಿ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಾದ ಪ್ರತಾಪ್ ಬೆಂಡಿಗೇರಿ,ಹನುಮಂತ ಮುದಿನಕೊಪ್ಪ,ಪ್ರಕಾಶ್ ಅಂಗಡಿ,ಕಿರಣ ಕಾಟೆನಹಳ್ಳಿ,ಹನುಮಂತ ತಳವರ,ಚೇತನ ವಡ್ಡರ,ಮಹೇಶ್ ತಳವರ,ಅರುಣ, ದುರಗಪ್ಪ ರಿತ್ತಿ,ರಾಜು ಲಮಾಣಿ, ಸಿದ್ದಪ್ಪ ಮಾದರ ಪಲ್ಗೊಂಡಿದ್ದರು.