ಲೋಕದರ್ಶನವರದಿ
ರಾಣೇಬೆನ್ನೂರು: ಇಂದಿನ ವಿದ್ಯಾಥರ್ಿಗಳು ಮೊಬೈಲ್, ಇಂಟರ್ನೆಟ್, ವ್ಯಾಟ್ಸ್ಆಪ್, ಫೇಸ್ಬುಕ್, ಟ್ವೀಟರ್ ಸೇರಿದಂತೆ ಮತ್ತಿತರೆ ತಂತ್ರಜ್ಞಾನ ಜಾಲದಲ್ಲಿ ಮುಳುಗಿ ಹೋಗಿದ್ದಾರೆ. ಇದರ ಪರಿಣಾಮ ಅವರಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳುವ ಆತ್ಮ ವಿಶ್ವಾಸ ಮತ್ತು ಮಾನಸಿಕ ಧೃಡತೆ ಇಲ್ಲದಂತಾಗಿದೆ ಎಂದು ಮೌನೇಶ್ವರ ಟ್ರಸ್ಟ್ ಕಮಿಟಿ ಕೋಶಾಧ್ಯಕ್ಷ, ಲಯನ್ಸ್ ಅಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು.
ನಗರದ ಜಗದ್ಗುರು ಮೌನೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಜಿಲ್ಲಾ ಪಂಜಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ, ಮೌನೇಶ್ವರ ಟ್ರಸ್ಟ್ ಕಮಿಟಿ ಆಯೋಜಿಸಿದ್ದ, ಸಿದ್ದೇಶ್ವರ ಮಂಡಲಮಟ್ಟದ 2019-20ನೇ ಸಾಲಿನ ಪ್ರೌಢ ಶಾಲಾ ವಿಧ್ಯಾಥರ್ಿಗಳ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನಸಿಕ, ದೈಹಿಕ, ಭೌದ್ದಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರಿಯಾಗಿವೆ. ವಿದ್ಯಾಥರ್ಿ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ದೇಶೀಯ ಕ್ರೀಡಾ ಸಂಸ್ಕೃತಿ ಸಂಸ್ಕಾರ ಪರಂಪರೆಯ ನಾಗರೀಕರಾಗಿ ಬದುಕನ್ನು ರೂಪಿಸಿಕೊಳ್ಳಲು ಮುಂದಾಗಬೇಕಾಗಿದೆ ಎಂದರು.
ದೈಹಿಕ ಶಿಕ್ಷಕರ ಸಂಘದ ಕಾರ್ಯದಶರ್ಿ ಎಂ.ಎಸ್.ಗಾಣಗೇರ ಮಾತನಾಡಿ ಆಟದಲ್ಲಿ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಾಗದೇ ಇರಬಹುದು. ಇಂದಿನ ಸೋಲು ಮುಂದಿನ ಗೆಲುವು ಎನ್ನುವ ನೈತಿಕ ಮತ್ತು ತತ್ವ ಸಿದ್ಧಾಂತ ಅಡಿಯಲ್ಲಿ ತಮ್ಮ ಕರ್ತವ್ಯಗಳನ್ನು ತಾವು ಮಾಡುವುದರ ಮೂಲಕ ಕ್ರೀಡೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ಕಮಿಟಿ ಸದಸ್ಯರಾದ ರಾಮಚಂದ್ರಪ್ಪ ಗುಡಗೂರ ಓಲಂಪಿಕ್ ಧ್ವಜಾರೋಹಣ ನೆರವೇರಿಸಿದರು, ಪರಮೇಶಪ್ಪ ಬಡಿಗೇರ ಓಲಂಪಿಕ್ ಜ್ಯೋತಿ ಬೆಳಗಿಸಿದರು. ವೇದಿಕೆಯಲ್ಲಿ ಕಾಳಪ್ಪ ಹುಲ್ಲತ್ತಿ, ಮಲ್ಲಪ್ಪ ಕಮ್ಮಾರ, ಸಿ.ಎನ್.ಹಾವನೂರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ರೇಖಾ ಶಿಕ್ಷಕಿ ಉಮಾ ಸುಂಕಾಪುರ ಸ್ವಾಗತಿಸಿದರು, ಮುಖ್ಯೋಪಾಧ್ಯಯ ಜಿ.ಎಸ್.ಬಡಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕೆ.ಎನ್.ಕಾಟೇನಹಳ್ಳಿ ನಿರೂಪಿಸಿ, ಶಿಕ್ಷಕ ಸಿ.ಬಿ.ಹಾಲೇಶ್ ವಂದಿಸಿದರು.ಮುಂಜಾನೆಯಿಂದ ಸಂಜೆಯವರೆಗೂ ನಡೆದ ಕ್ರೀಡಾಕೂಟದಲ್ಲಿ 9 ಶಾಲೆಗಳ 400ಕ್ಕೂ ಹೆಚ್ಚು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.