ಲೋಕದರ್ಶನ
ವರದಿ
ಸಿದ್ದಾಪುರ 01: ತಾಲೂಕಿನಲ್ಲಿಂದು 63 ನೇ ರಾಜ್ಯೋತ್ಸವ ಕಾರ್ಯಕ್ರಮ
ವಿಜೃಂಬಣೆಯಿಂದ ನಡೆಯಿತು. ನಾಡಿನ ಪ್ರಸಿದ್ಧ ಭುವನೇಶ್ವರಿ ದೇವಿಯ ನೆಲೆಯಾದ ಭುವನಗಿರಿಯಿಂದ ಜ್ಯೋತಿ ತಂದು ನಗರದ ಪ್ರಮುಖ
ಬೀದಿಗಳಲ್ಲಿ ಮೆರವಣಿಗೆ ನಡೆಸಿ ಐತಿಹಾಸಿಕ ನೆಹರು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ನೆರವೆರಿಸಿದ ತಹಸೀಲ್ದಾರ ಪಟ್ಟರಾಜ ಗೌಡ ಮಾತನಾಡಿ ಶತಮಾನಗಳ
ಕಾಲ ಶ್ರಮಿಸಿ ಕಟ್ಟಿದ ನಾಡು, ಇದಕ್ಕೆ ಶ್ರಮಿಸಿದ ಎಲ್ಲಾ ಹಿರಯರಿಗೆ ಕೃತಜ್ಞತೆ ಸಲ್ಲಿಸಿದರು. ಕನರ್ಾಟಕದಲ್ಲಿ ವಿವಿಭಿನ್ನತೆಗಳಿಂದ ಕೂಡಿದ ಜನಾಂಗಗಳಿದ್ದರು ಕನ್ನಡದಲ್ಲಿ ಯಾವುದೇ ವಿಭಿನ್ನತೆಗಳಿಲ್ಲದೆ ನಾವೆಲ್ಲ ಒಂದು ಎನ್ನುವಭಾವನೆಯಿದೆ.ಸಾಂಸ್ಕೃತಿವಾಗಿ,
ಸಾಮಾಜಿಕವಾಗಿ ಶ್ರೀಮಂತ ನಾಡಾಗಿದೆ ಇದನ್ನು ಉಳಿಸಿ ಬೆಳಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮೆರವಣಿಗೆಯಲ್ಲಿ
ವಿವಿಧ ಇಲಾಖೆಯ ಸ್ಥಬ್ಧ ಚಿತ್ರಗಳು ಗಮನ ಸೆಳೆದವು.ವೇದಿಕೆಯಲ್ಲಿ
ಶ್ರೀ ಈಶ್ವರ ಕಲಾ ಸಂಘ ಕಡಕೇರಿಯವರು
ಕೃಷಿ ಇಲಾಖೆಯ ಯೋಜನೆ ತಿಳಿಸುವ ವಿವಿಧ ಹಾಡುಗಳನ್ನು ಹಾಡಿದರು.
ಕನರ್ಾಟಕ ನಾಡ ರಕ್ಷಣಾ ವೇದಿಕೆ,
ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಸಂಘ,
ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ 63 ನೇ
ರಾಜ್ಯೋತ್ಸವ ಅಂಗವಾಗಿ ಕನ್ನಡ
ಹಬ್ಬ, ಮತ್ತು ಮಹಿಳಾ ಸಮಾವೇಶ ರಾಘವೆಂದ್ರ ಮಠದ ಸಭಾಭವನದಲ್ಲಿ ನಡೆಯಿತು.
ಕನ್ನಡ
ಹಬ್ಬ ಕಾರ್ಯಕ್ರಮ ಉದ್ಘಾಟಿಸಿದ ಕನರ್ಾಟಕ ನಾಡ ರಕ್ಷಣಾ ವೇದಿಕೆ
ರಾಜ್ಯಾಧ್ಯಕ್ಷ ಶಂಕರ ಕೆ ಮಾತನಾಡಿ
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಜಾಗೃತಿ ಇದ್ದರೆ ಅಭಿವೃದ್ಧಿ ಸಾಧ್ಯ. ಎಲ್ಲರೂ ಕನ್ನಡ ಕಲಿಯಬೇಕು, ಕಲಿಸಬೇಕು ಮಹಿಳೆಯರಿಂದ ಹೋರಾಟಗಳದಾಗ ಯಶ ಗಳಿಸಲು ಸಾಧ್ಯ
. ಸಿದ್ದಾಪುರ ಸರಾಯಿ ಮುಕ್ತ ತಾಲೂಕಾಗಲು ಹೋರಾಡಲು ನಾವು ಸಹಕರಿಸುತ್ತೆವೆ ಎಂದರು.
ಸ್ವಾತಂತ್ರ್ಯ
ಹೋರಾಟಗಾರನ ಹೆಂಡತಿ ಸಶೀಲಾ ಶ್ರೀಧರ ಕೊರೆಕರ್ ಮಹಿಳಾ ಸಮಾವೇಶ ಉದ್ಘಾಟಿಸಿದರು.
ಕನ್ನಡ ತಾಯಿ ಭುವನೇಶ್ವರಿ ಪ್ರಶಸ್ತಿಯನ್ನು ಮಾನವ
ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ
ಸಂಸ್ಥೆ ದೆಹಲಿಯ ರಾಷ್ಟ್ರೀಯ ಕಾರ್ಯದಶರ್ಿ ಡಾ. ಮಹೇಶ ಪಿ
ಮತ್ತು ದೃಶ್ಯ ಮಾಧ್ಯಮ ವರದಿಗಾತರ್ಿ ಕು. ಜ್ಯೋತಿ ದಫೇದಾರ
ಇವರಿಗೆ ನೀಡಿ ಗೌರವಿಸಲಾಯಿತು.
ಭುವನೇಶ್ವರಿ
ಪ್ರಶಸ್ತಿಯನ್ನು ಮಾನವ
ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ
ಸಂಸ್ಥೆ ದೆಹಲಿಯ ರಾಷ್ಟ್ರೀಯ ಕಾರ್ಯದಶರ್ಿ ಡಾ. ಮಹೇಶ ಪಿ
ಮಾತನಾಡಿ ಮಹಿಳೆಯರು ಸಮಸ್ಯೆಗಳಿಗೆ ಹೆದರದೆ
ಧೈರ್ಯವಾಗಿ ಎದುರಿಸಬೇಕು, ಕಾನೂನುಗಳ ನೆರವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು, ಈ ಕುರಿತು ಮಹಿಳೆಯರಿಗೆ
ಅರಿವಿನ ಜಾಗೃತಿ ಮೂಡಿಸಬೇಕು. ಕನ್ನಡ ನಾಡು-ನುಡಿ ಗೌರವಿಸಿ
ಉಳಿಸಬೇಕು ಎಂದರು.
ಕನರ್ಾಟಕ ನಾಡ ರಕ್ಷಣಾ ವೇದಿಕೆ
ತಾಲೂಕು ಘಟಕದ ಅಧ್ಯಕ್ಷ ಆಕಾಶ
ಕೊಂಡ್ಲಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವಕುಮಾರ, ಪ್ರಸನ್ನ
ಕುಮಾರ, ವೆಂಕಟೇಶ ಮಂಡ್ಯ, ಮೋಹನ ರಾವ್ ಮಂಡ್ಯ,
ಕ.ನಾ.ರ.ವೇ.ಕಾಯರ್ಾರ್ಧಯಕ್ಷ ಪ್ರಕಾಶ , ಕ.ನಾ.ರ.ವೇ.ಕಾಯರ್ಾದಶರ್ಿಗೀರೀಶ,ತಾಲೂಕು
ರೈತ ಸಂಗದ ಅಧ್ಯಕ್ಷ ವೀರಭದ್ರ
ನಾಯ್ಕ ಸುಮಿತ್ರಾ ರಮಾನಂದ ನಾಯ್ಕ, , ಸುಧಾ ಕೊಂಡ್ಲಿ, ಪ್ರಶಾಂತ
ಜೋಷಿ, ಶಂಕರಮೂತರ್ಿ ನಾಯ್ಕ, ಉಪಸ್ಥಿತರಿದ್ದರು.