ಸಿಂದಗಿ: ಬಸ್ ಪಲ್ಟಿ, 20 ಪ್ರಯಾಣಿಕರಿಗೆ ಗಾಯ

ಲೋಕದರ್ಶನ ವರದಿ

ಸಿಂದಗಿ 13: ಚಾಲಕನ ನಿಯಂತ್ರಣ ತಪ್ಪಿ ಭಾನುವಾರ ಮಧ್ಯಾಹ್ನ ಬಸ್ವೊಂದು ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದ್ದು ಅಂದಾಜು 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಬಳಗಾನೂರ ಗ್ರಾಮದಿಂದ ಸಿಂದಗಿಯತ್ತ ಹೊರಟಿದ್ದ ಬಸ್ ಅಂದಾಜು 2 ಕಿ.ಮೀ ದೂರ ಸಾಗಿತ್ತು. ಅಷ್ಟರಲ್ಲಿಯೇ ಏಕಾಏಕಿ ಚಾಲಕನ ನಿಯಂತ್ರನ ತಪ್ಪಿದ ಬಸ್ ರಸ್ತೆಯಿಂದ ಅತ್ತಿತ್ತ ಓಡಾಡಿದ ವೇಳೆ ಪ್ರಯಾಣಿಕರು ದಂಗಾಗಿ ಚೀರಾಡಿದ್ದಾರೆ. ಜನರು ಗಾಬರಿಯಾಗಿದ್ದನ್ನು ಕಂಡ ಚಾಲಕ ಬಸ್ನು ರಸ್ತೆ ಪಕ್ಕದ ತಗ್ಗಿಗೆ ನುಗ್ಗಿಸಿದ್ದಾನೆ. 

ಗ್ರಾಮದ ಯುವಕರಾದ ದಶರಥ ನಾಟೀಕಾರ, ದಾದಾ ಸಿಂದಗಿ, ವಿದ್ಯಾಧರ ಸಂಗೋಗಿ, ಸಂಜು ಚೌಧರಿ, ಶಾಂತಗೌಡ ಪಾಟೀಲ ಮತ್ತಿತರರು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಬಸ್ನಿಂದ ಇಳಿಸಿ ರಕ್ಷಿಸಿದ್ದಾರೆ. ಸಣ್ಣ ಪುಟ್ಟ ಗಾಯಗಳಿಂದ ಗಾಬರಿಗೊಂಡ ಪ್ರಯಾಣಿಕರಿಗೆ ಧೈರ್ಯ ತುಂಬಿ ಮಾನವೀಯತೆ ತೋರ್ಪಡಿಸಿದ್ದಾರೆ. 

ಬಸ್ನಲ್ಲಿ ಮಕ್ಕಳು, ಮಹಿಳೆಯರು ಸೇರಿ 40 ಕ್ಕೂ ಹೆಚ್ಚು ಜನರಿದ್ದು ಸಣ್ಣ ಪುಟ್ಟ ಗಾಯಗಳನ್ನು ಹೊರತು ಪಡಿಸಿ ಯಾವುದೇ ಸಾವು ನೋವು ಸಂಭವಿಸಿಲ್ಲ.