ಲೋಕದರ್ಶನ ವರದಿ
ಸಿಂದಗಿ 22: ಲೋಕಸಭಾ ಚುನಾಚವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಬಿಳುವುದು ಖಚಿತ ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಿಜಗಿಣಗಿ ವಂಚಕ. ನಾನು 15 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಸತತ 3ವರ್ಷಗಳಿಂದ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಆದರೆ ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ದಿಸಲು ಬಿಜೆಪಿಯಿಂದ ನಾನು ಟಿಕೇಟ್ ಕೇಳಿದಾಗ ಕೊನೆ ಕ್ಷಣದಲ್ಲಿ ತಪ್ಪಿಸುವಲ್ಲಿ ರಮೇಶ ಜಿಗಜಿಣಗಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು.
ಸಿಂದಗಿ ಮತ್ತು ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನದೆಯಾದ ಅಭಿಮಾನಿಗಳು ಮತ್ತು ಕಾರ್ಯಕರ್ತರಿದ್ದಾರೆ. ಅವರನ್ನು ಸಂಪಕರ್ಿಸಿ ಕ್ಷೇತ್ರದಲ್ಲಿ ಸಂಚರಿಸಿ ಎಲ್ಲರ ಸಹಕಾರದಿಂಗೆ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಅವರ ಗೆಲುವಿಗೆ ಶ್ರಮಿಸುತ್ತೇನೆ. ಡಾ.ಸುನೀತಾ ಚವ್ಹಾಣ ಅವರ ಗೆಲುವು ಖಚಿತ ಎಂದರು.
ಜೆಡಿಎಸ್ ಮುಖಂಡ ಅಶೋಕ ಮನಗೂಳಿ, ಶಿವಪ್ಪಗೌಡ ಬಿರಾದಾರ, ಜಿ.ಎಸ್.ಭಂಕೂರ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ರಾಜು ಕೂಚಬಳ, ರಮೇಶ ಹೂಗಾರ, ಸಿದ್ದಣ್ಣ ಚೌಧರಿ ಕನ್ನೊಳ್ಳಿ, ವಿ.ಬಿ.ಕುರಡೆ. ಅರವಿಂದ ಹಂಗರಗಿ, ಇಮ್ತಿಹಾಜ ಖತಿಬ, ಸಲಿಮ ಜೂಮನಾಳ, ನೂರಹ್ಮದ ಅತ್ತಾರ, ಬಸವರಾಜ ಯರನಾಳ, ಚನ್ನು ಪಟ್ಟಣಶೆಟ್ಟಿ, ಆಶೋಕ ಕೋಳಾರಿ, ರಮೇಶ ಭಂಟನೂರ, ಪ್ರಭು ವಾಲಿಕಾರ, ಶೈಲಜಾ ಸ್ಥಾವರಮಠ, ಜಯಶ್ರೀ ಹದ್ನೂರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.