66 ವರ್ಷ ಬಳಿಕ ಗಿನ್ನೆಸ್ ದಾಖಲೆಯ ಉಗುರು ಕತ್ತರಿಸಿಕೊಂಡ ಶ್ರೀಧರ್


ಪುಣೆ : ಅತೀ ಉದ್ದದ ಕೈಬೆರಳ ಉಗುರಿಗಾಗಿ ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವ ಇಲ್ಲಿನ ಶ್ರೀಧರ್ ಚಿಲ್ಲಾಲ್ ಅವರು  66 ವರ್ಷಗಳ ಬಳಿಕ ಕೊನೆಗೂ ತನ್ನ ಉಗುರನ್ನು ಕತ್ತರಿಸಿಕೊಂಡಿದ್ದಾರೆ. ಟೈಮ್ಸ್  ಸ್ಕ್ವೇರ್ನಲ್ಲಿ ಉಗುರು ಕತ್ತರಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಶ್ರೀಧರ್ ಅವರು ತಮ್ಮ ಕೈಬೆರಳ ಉಗುರನ್ನು ಕತ್ತರಿಸಿಕೊಂಡಾಗ ಅದರ ಸಂಯೋಜಿತ ಉದ್ದ  909.6 ಸೆ.ಮೀ. ಆಗಿತ್ತು.  ಈಗ 82 ವರ್ಷ ಪ್ರಾಯದವರಾಗಿರುವ ಶ್ರೀಧರ್ 1952ರಲ್ಲಿ ತಾವು 14 ವರ್ಷ ಪ್ರಾಯದವರಿದ್ದಾಗ ತನ್ನ ಎಡಗೈ ಬೆರಳುಗಳ ಉಗುರನ್ನು ಬೆಳೆಸಲು ಆರಂಭಿಸಿದ್ದರು.  

ಶ್ರೀಧರ್ ಅವರ ಎಡಗೈ ಬೆರಳುಗಳ ಪೈಕಿ ಹೆಬ್ಬೆರಳ ಉಗುರು ಅತೀ ಉದ್ದದ್ದು.  ಅದರ ಉದ್ದ 197.8 ಸೆ.ಮೀ.; ತೋರು ಬೆರಳಿನ ಉಗುರಿನ ಉದ್ದ 164.5 ಸೆ.ಮೀ., ಮಧ್ಯದ ಬೆರಳಿನ ಉಗುರಿನ ಉದ್ದ 186.6 ಸೆ.ಮೀ., ಉಂಗುರ ಬೆರಳಿನ ಉಗುರಿನ ಉದ್ದ 181.6 ಸೆ.ಮೀ. ಮತ್ತು ಕಿರು ಬೆರಳಿನ ಉಗುರಿನ ಉದ್ದ 179.1 ಸೆ.ಮೀ. ಒಂದೇ ಕೈ ಬೆರಳ ಅತೀ ಉದ್ದದ ಉಗುರನ್ನು ಹೊಂದಿರುವುದಕ್ಕಾಗಿ ಶ್ರೀಧರ್ ಅವರು 2015ರಲ್ಲೇ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕಕ್ಕೆ ಸೇರಿದ್ದರು. ಶ್ರೀಧರ್ ಅವರು ಕತ್ತರಿಸಿಕೊಂಡಿರುವ ಅವರ ಉಗುರುಗಳು ಈಗಿನ್ನು ನ್ಯೂಯಾಕರ್್ನ ಟೈಮ್ಸ್ ಸ್ಕ್ವೇರ್ ನಲ್ಲಿರುವ ಖಠಿಟಜಥಿ ಃಜಟಜತಜ ಣ ಠಡಿ ಓಠಣ! ನಲ್ಲಿ ಪ್ರದರ್ಶನಗೊಳ್ಳಲಿವೆ