ಮುಂಬೈ , ಜ.19 : ಬಾಲಿವುಡ್ ರಾಕ್ ಸ್ಟಾರ್ ರಣಬೀರ್ ಕಪೂರ್ ಅವರೊಂದಿಗೆ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳಲು ನಟಿ ಶ್ರದ್ಧಾ ಕಪೂರ್ ತುಂಬಾ ಉತ್ಸುಕರಾಗಿದ್ದಾರಂತೆ.
ಪ್ಯಾರ್ ಕಾ ಪಂಚನಾಮಾ, ಸೋನು ಕೆ ಟೀಟ್ಟು ಕಿ ಸ್ವೀಟಿ ಚಿತ್ರದ ನಿರ್ದೇಶನ ಮಾಡಿದ ಲವ್ ರಂಜನ್ ಶೀಘ್ರವೇ ಮತ್ತೊಂದು ಚಿತ್ರ ಹೊರತರಲು ಸಜ್ಜಾಗಿದ್ದಾರೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶ್ರದ್ಧಾ, ಲವ್ ರಂಜನ್ ಅವರ ಚಿತ್ರದಲ್ಲಿ ನಾನು ರಣಬೀರ್ ಕಪೂರ್ ಅವರೊಂದಿಗೆ ತೆರೆಹಂಚಿಕೊಳ್ಳುತ್ತಿದ್ದೇನೆ. ರಣಬೀರ್ ಜೊತೆಗೆ ನಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಏಕೆಂದರೆ ರಣಬೀರ್ ಪ್ರಸ್ತುತ ಜನಾಂಗದ ಅದ್ಭುತರಲ್ಲಿ ಒಬ್ಬರಾಗಿದ್ದಾರೆ ಎಂದರು.
ಈ ಮುಂಚೆ ರಣಬೀರ್ ಅವರೊಂದಿಗೆ ನಟಿಸಲು ಯಾವುದೇ ಚಿತ್ರದಲ್ಲಿ ಅವಕಾಶ ಸಿಕ್ಕಿರಲಿಲ್ಲ ಎಂದರು.