ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 02:ಕ್ಷೇತ್ರದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಚಿಲವಾರ ಬಂಡಿ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಗೊಳಿಸಲಾಗುವುದೆಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.
ಶಾಸಕ ಎಸ್.ಭೀಮಾನಾಯ್ಕ್ ಬುಧವಾರ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ ಈ ಭಾಗದ ರೈತರ ಜೀವನಾಡಿಯಾದ ಚಿಲವಾರು ಬಂಡಿ ಏತನೀರಾವರಿ ಯೋಜನೆಯ ಪೂರ್ಣ ಪ್ರಮಾಣದ ಉಪಯೋಗವನ್ನು ಮುಂದಿನ ಆರೇಳು ತಿಂಗಳಲ್ಲಿ ಭಾಗದ ರೈತರು ಪಡೆಯಲಿದ್ದಾರೆ ಇದರಿಂದ ಸುಮಾರು 7500 ಎಕರೆಯಿಂದ ಹತ್ತು ಸಾವಿರ ಎಕರೆ ನೀರಾವರಿ ಸೌಲಭ್ಯ ಪಡೆಯಬಹುದಾಗಿದೆ. ಸದ್ಯದ ಕಾಮಗಾರಿಯಲ್ಲಿ ಜಕ್ವಾಲ್ ಕಟ್ಟುವಲ್ಲಿ ಕೆಲ ಸಮಸ್ಯೆ ಕಾಡುತ್ತಿದೆ ಕಾರಣ ಸಿಪೇಜ್ ನೀರು ಖಾಲಿಯಾದರೆ ಕೆಲಸ ಚುರುಕಾಗಿ ಸಾಗುತ್ತದೆ ಅದಕ್ಕಾಗಿ 24 ತಾಸು ಕೆಲಸ ಮಾಡುವಂತೆ ಸೂಚಿಸಿದ್ದೇನೆ, ಪೈಪ್ ಲೈನ್ ಜೋಡನೆ 6ಕಿಲೋ ಮೀಟರ್ ಉದ್ದದ್ದಾಗಿದೆ 575 ಪೈಪ್ಗಳು ಬೇಕಾಗಿದೆ ಸದ್ಯ 300 ಬಂದಿದೆ, ಮೆಸ್ ಕಾಂಕ್ರೀಟ್ ವೆವಸ್ಥೆಯನ್ನು ಮಾಡಲಗುವುದು ಇದರ ಸಾಮಥ್ರ್ಯ 1000ಹೆಚ್ಪಿಯ 4 ಮೋಟರ್ನಲ್ಲಿ 1 ಸ್ಟಾಂಡ್ ಬೈ ಮೋಟರ್ ವ್ಯೆವಸ್ಥೆ ಮಾಡಲಾಗಿದೆ ಮೂರು ಮೋಟರ್ ಕಾರ್ಯನಿರ್ವಹಿಸಲಿವೆ.
ಈ ಭಾಗದ ಹಲವಾರು ವರ್ಷಗಳ ಯೋಜನೆಗಾಗಿ ಹಲವರು ಶ್ರಮಿಸಿದ್ದರು, 2013ರಿಂದ 4ಬಜೆಟ್ಗಳಲ್ಲಿ ಈಭಾಗದ ನೀರಾವರಿ ಯೋಜನೆಗಳಿಗೆ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯವನರು ಮುಖ್ಯಮಂತ್ರಿಯಾದಾಗ ಜೆಡಿಎಸ್ ಪಕ್ಷದ ಶಾಸಕ ಎಂಬ ಭಾವನೆಯನ್ನು ತಾಳದೆ ಈಭಾಗದ ಸಾವಿರಾರು ಅನ್ನದಾತರ ಆಸೆಯನ್ನು ಪೋರೈಸಿ ಯೋಜನೆಯನ್ನು ರೂಪಿಸಿರುವುದು ನಮ್ಮೆಲ್ಲರ ಭಾಗ್ಯ ಎಂದು ಶಾಸಕ ಭೀಮಾನಾಯ್ಕ್ ಪರ್ತಕರ್ತರಿಗೆ ತಿಳಿಸಿದರು.ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಹತ್ತು ಹಲವುಬಾರಿ ಈಭಾಗದ ಜನರ ನೀರಾವರಿ ಸಮಸ್ಯೆಗಳ ವಿರುಧ್ಧ ಧ್ವನಿ ಎತ್ತಿದ್ದೇನೆ ಹಾಗಾಗಿ ಇಂದು ಈ ಮಹತ್ತರ ಯೋಜನೆಗಳು ಜಾರಿಯಾಗಿವೆ, ಕಳೆದ ಶಾಸಕರು ರೈತರ ಮೂಗಿಗೆ ತುಪ್ಪ ಹಚ್ಚಿ ನೂರೊಂದು ಬಂಡಿಗಳ ಕಟ್ಟಿಕೊಂಡು ಪೂಜೆ ಮಾಡಿದ್ದು ಹಾಗೂ ಶ್ರೀಗಳಿಗೆ ಇಲ್ಲ ಸಲ್ಲದ ಮಾತುಗಳಿಂದ ಅವರಿಗೂ ಮೋಸ ಮಾಡಿದ್ದು ಜನರಿಗೆ ತಿಳಿದ ವಿಷಯವಾಗಿದೆ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಕಾಂಗ್ರೇಶ್ ಪಕ್ಷವು ಹಲವಾರು ಯೋಜನೆಗಳನ್ನು ರೂಪಿಸಿ ನುಡಿದಂತೆ ನಡೆದಿದೆ ಎಂದರು.ಹಾಗೂ ಈ ಯೋಜನೆಯು 62ಕೋಟಿಯದ್ದಾಗಿದೆ ಇದರ ಕಾಮಗಾರಿಯನ್ನು ಶ್ರೀನಿವಾಸ ಕನ್ಸಟ್ರಕ್ಷನ್ ಇವರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಇ ಸಂಧರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ, ಅಕ್ಕಿ ತೋಟೇಶ್,ಹುಡೇದ್ ಗುರು ಬಸವರಾಜ್,ಅಪ್ತ ಸಹಾಯಕ ಸಿದ್ದೇಶ್ ಸೇರಿದಂತೆ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.
ಕಳೆದ ಬಿಜೆಪಿ ಸರಕಾರವಿದ್ದಾಗ 101ಬಂಡಿಗಳನ್ನು ತಂದು ಶ್ರೀಗಳಿಗೆ ದಾರಿ ತಪ್ಪಿಸಿ ಟೆಡಂರ್ ಇಲ್ಲದೆ ಭೂಮಿ ಪೂಜೆ ಮಾಡಿಸಿದ್ದು ಶುಧ್ಧ ಸುಳ್ಳ ಎಂಬುದರಲ್ಲಿ ಅನುಮಾನವಿಲ್ಲ,ಈ ಭಾಗದ ಯೋಜನೆಗಳಿಗೆ ವಿಧಾನ ಸಭೆ ಸೇರಿದಂತೆ ಸಂಭಂಧಿಸಿದ ಅಧಿಕಾರಿಗಳ ನಿರಂತರ ಸಂಪರ್ಕ ಹಾಗೂ ಹೋರಾಟದಿಂದ ಇಂದು ಕಾಮಗಾರಿ ಪೂರ್ಣಗೊಳ್ಳಲಿದೆ ಹಾಗೂ ಯೊಜನೆಯಲ್ಲಿ ಯಾವುದಾದರೂ ಅನುಮಾನಗಳಿದ್ದಲ್ಲಿ ಬಗೆಹರಿಸಿಕೊಳ್ಳಲಿ. ಶಾಸಕ ಎಸ್.ಭೀಮಾನಾಯ್ಕ್ ಶಾಸಕ ಹಗರಿಬಮ್ಮನಹಳ್ಳಿ