ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಸಮಾರಂಭ ಅಪ್ಪಣ್ಣನವರ ಬದುಕು ಪ್ರತಿಯೊಬ್ಬರಿಗೂ ಆದರ್ಶ: ಡಾ. ಮೈತ್ರೇಯಿಣಿ


ಬೆಳಗಾವಿ:  ಅನುಭವ ಮಂಟಪ ಹಾಗೂ ಬಸವಣ್ಣನವರ ಕಾಯಕಕ್ಕೆ ಹಡಪದ ಅಪ್ಪಣ್ಣನವರು ಆಧಾರ ಸ್ತಂಭವಾಗಿದ್ದರು. ಬಸವಣ್ಣನವರ ಕಲ್ಯಾಣ ರಾಜ್ಯ ನಿಮರ್ಾಣಕ್ಕೆ ಅಪ್ಪಣ್ಣನವರು ಕೂಡ ಸಲಹೆಗಾರರಾಗಿದ್ದರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ (ಜು.27) ಹಮ್ಮಿಕೊಂಡಿದ್ದ ಶಿವಶರಣ       ಶ್ರೀ ಹಡಪದ ಅಪ್ಪಣ್ಣನವರ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. 

ಬಸವಣ್ಣನವರ ಕಾರ್ಯಭಾರದಲ್ಲಿ ತಮ್ಮದೇ ಆದ ಸೇವೆಯ ಮೂಲಕ ಹಡಪದ ಅಪ್ಪಣ್ಣನವರು ಪ್ರಸಿದ್ಧರಾಗಿದ್ದರು. ಅವರು ಸದಾಕಾಲ ಬಸವಣ್ಣನವರೊಂದಿಗೆ ಇರುತ್ತಿದ್ದರು. ಬಸವಣ್ಣನವರನ್ನು ಭೇಟಿ ಮಾಡಲು ಬರುವವರು ಮೊದಲು ಅಪ್ಪಣ್ಣನವರ ಅನುಮತಿ ಪಡೆಯಬೇಕಿತ್ತು ಎಂದರು.

ತಾತ್ವಿಕ ಚಿಂತನೆ ಒಳಗೊಂಡ ವಚನಗಳನ್ನು ಅಪ್ಪಣ್ಣನವರು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕನರ್ಾಟಕ ಸರಕಾರ ಬಿಡುಗಡೆಗೊಳಿಸಿರುವ ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿ ಅಪ್ಪಣ್ಣನವರ 246 ವಚನಗಳನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಮಾನವ ಹಕ್ಕುಗಳನ್ನು ಮನಗಂಡು ಅವುಗಳಿಗೆ ದಕ್ಕೆ ಬಾರದಂತೆ ಬದುಕಿದವರು ಶರಣರು. ಅವರಲ್ಲಿ ಅಪ್ಪಣ್ಣನವರು ಕೂಡ ಒಬ್ಬರು. ಅಪ್ಪಣ್ಣನವರ ಬದುಕು ಪ್ರತಿಯೊಬ್ಬರಿಗೂ ಆದರ್ಶ ಮತ್ತು ಅನುಕರಣೀಯ ಎಂದರು.

ಮೌಢ್ಯತೆ ಸಮಾಜಕ್ಕೆ ಇಂದಿಗೂ ಶಾಪವಾಗಿ ಪರಿಣಮಿಸಿದ್ದು, ಮೌಢ್ಯದಿಂದ ದೂರವಿರಲೂ ಶರಣರ ವಚನಗಳನ್ನು ಅಥರ್ೈಸಿಕೊಳ್ಳಬೇಕಿದೆ ಎಂದು ಹೇಳಿದರು.

ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಇಂದು ಇರುವ ಅನೇಕ ಹುದ್ದೆಗಳನ್ನು ಅಂದಿನ ಕಾಲದಲ್ಲಿಯೇ ಬಸವಣ್ಣನವರು ಅನುಭವ ಮಂಟಪದಲ್ಲಿ ರಚಿಸಿದ್ದರು ಎಂದು ತಿಳಿಸಿದರು.

ಸಂಶೋಧನೆ ನಡೆಯಲಿ:

ರಾಜ, ಮಹಾರಾಜರ ಕಾಲದಲ್ಲಿ ಹಾಗೂ ಇತಿಹಾಸದಲ್ಲಿ ಹಡಪದ ಸಮಾಜದ ಹಿರಿಮೆ ಗರಿಮೆಗಳ ಕುರಿತು ಸಂಶೋಧನೆ ನಡೆಯಬೇಕು ಹಾಗೂ ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಹಡಪದ ಸಮಾಜದ ಸಾಹಿತಿಗಳ ಕೊಡುಗೆಯ ಬಗ್ಗೆಯೂ ಸಂಶೋಧನೆ ನಡೆಯಬೇಕಿದೆ ಎಂದು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಸಮಾಜ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆಥರ್ಿಕವಾಗಿ ಸದೃಢವಾಗಬೇಕಿದೆ ಎಂದು ಹೇಳಿದರು.

ಯಾವುದೇ ಉದ್ಯೋಗವೂ ಕೀಳು ಮಟ್ಟದ್ದಲ್ಲ. ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಬೆಲೆ ಇದೆ. ಎಲ್ಲ ವೃತ್ತಿಗಳೂ ಸೇರಿದಾಗ ಮಾತ್ರ ಸಮಗ್ರ ಸಮಾಜ ನಿಮರ್ಾಣ ಸಾಧ್ಯ ಎಂದರು.

ಹಡಪದ ಅಪ್ಪಣ್ಣ ಸಮಾಜ ಬಾಂಧವರು ನಗರದಲ್ಲಿ ಸಮುದಾಯ ಭವನ ನಿಮರ್ಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಅಥವಾ ಬುಡಾದೊಂದಿಗೆ ಶೀಘ್ರದಲ್ಲೇ ಚಚರ್ಿಸಿ ನಿವೇಶನ ಮಂಜೂರು ಮಾಡಿಸಿ, ಸಮುದಾಯ ಭವನ ನಿಮರ್ಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಮಹಾನಗರ ಪಾಲಿಕೆಯ ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ, ಉಪಮಹಾಪೌರರಾದ ಮಧುಶ್ರೀ ಪೂಜಾರಿ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಸಮಾಜದ ಮುಖಂಡರು ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಶ್ರೀಶೈಲ್ ಕರಿಶಂಕರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಕಲಾವಿದರಾದ ಶ್ರೀರಂಗ ಜೋಶಿ ಅವರು ನಾಡಗೀತೆ ಹಾಗೂ ವಚನ ಗಾಯನ ಪ್ರಸ್ತುತ ಪಡಿಸಿದರು. ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ಅವರು ನಿರೂಪಿಸಿದರು. 

ಮೆರವಣಿಗೆ:

ಜಯಂತಿ ಅಂಗವಾಗಿ ಬೆಳಿಗ್ಗೆ ನಗರದ ಅಶೋಕ ವೃತ್ತದಿಂದ ಕುಮಾರ ಗಂಧರ್ವ ರಂಗಮಂದಿರದವರೆಗೆ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ಜರುಗಿತು. 

ಅಪರ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಅಶೋಕ ವೃತ್ತದಿಂದ ಆರಂಭವಾದ ಮೆರವಣಿಗೆ ಆರ್ಟಿಒ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಎಸ್ಪಿ ಕಚೇರಿ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರ ತಲುಪಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಶ್ರೀಶೈಲ್ ಕರಿಶಂಕರಿ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಶಶಿಧರ ನಾಡಗೌಡ ಸೇರಿದಂತೆ ಸಮಾಜದ ಮುಖಂಡರು, ಕುಂಭ ಹೊತ್ತ ನೂರಾರು ಮಹಿಳೆಯರು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.