ಶಿಂದಿಕುರಬೇಟ: ಸಡಗರದ ಚಾಂಗದೇವರ ಜಾತ್ರೆ

Shindikurabeta: Changadevara fair

ಬೆಳಗಾವಿ 21: ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಯಮನೂರ​‍್ಪ (ಚಾಂಗದೇವರ) ಜಾತ್ರೆ ಮಾರ್ಚ್ 18 ಹಾಗೂ 19ರಂದು ಎರಡು ದಿನಗಳ ಕಾಲ ಸಡಗರದಿಂದ ಜರುಗಿತು. 

18ರಂದು ಗಂದಾಭಿಷೇಕ ಉತ್ಸವ ಜರುಗಿತು. ಈ ನಿಮಿತ್ತ ಮುತ್ತೈದೆಯರ ಆರತಿ, ಕುಂಭ ವಿವಿಧ ವಾದ್ಯಗಳ ಮೆರವಣಿಗೆ ಸಡಗರದಿಂದ ಜರುಗಿತು. ನಂತರ ದೇವಸ್ಥಾನದಲ್ಲಿ ಪೂಜೆ ಜರುಗಿ, ಗಂಧಾಭೀಷೇಕ ಮಾಡಲಾಯಿತು. ಬೆಳಗಾವಿಯ ಯಲ್ಲಾಲಿಂಗೇಶ್ವರ ಕಲಾ ತಂಡದಿಂದ ಸಂಗೀತ ಕಾರ‌್ಯಕ್ರಮ ಜರುಗಿತು. 

ಸಂಗೀತ ಕಾರ‌್ಯಕ್ರಮದಲ್ಲಿ ಶ್ರೀರಂಗ ಶೋಶಿ, ಬಸವರಾಜ ಕಮ್ಮಾರ, ಅಡವಯ್ಯ ಮಠದ, ಬಸವರಾಜ ಮಠದ, ಉಮಾದೇವಿ ನಿಜಗುಲಿ, ಖುಷಿ ಢವಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಉಪನ್ಯಾಸ ನೀಡಿದ ಬಿ.ಎಚ್‌. ಮಾರದ, ಯುವ ಧುರೀಣರಾದ ಆನಂದ ಕರಲಿಂಗಣವರ, ಚಂದ್ರಶೇಖರ ಕತ್ತಿ ಇವರನ್ನು ಸತ್ಕರಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ರೂಪಾ ಕಂಬಾರ, ಚಾಂದ ಪನಿಬಂಧ, ನಿರುಪಾದಯ್ಯ ಕಲ್ಲೋಳಿಮಠ, ಹಣಮಂತ ಮಾನೆ, ಹಣಮಂತ ಹಣಮಂತಗೋಳ, ಹಮೀದ ಪನಿಬಂಧ, ತುಕಾರಾಮ ಖಟಾವಕರ, ಛಾಯಾ ಮಾನೆ, ಮಹಾಲಕ್ಷ್ಮೀ ಗುಮತಿ, ಸಂಕ್ರೆವ್ವಾ ಭೋಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. 

19ರಂದು ಮುಖ್ಯ ಜಾತ್ರೆ ಜರುಗಿತು. ನೈವೇದ್ಯ ಅರ್ಪಿಸುವ ಕಾರ‌್ಯಕ್ರಮ ಜರುಗಿತು. ಸಂಜೆ ಶಿಕ್ಷಕಿ ವನಿತಾ ಸರ್ವಿ ಇವರ ನೇತೃತ್ವದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ‌್ಯಕ್ರಮ ಜರುಗಿದವು. ಜಾತ್ರೆ ನಿಮಿತ್ತ ಸಹಕಾರ ನೀಡಿದ ಪರಶುರಾಮ ಪೂಜೇರಿ, ಯಮನಪ್ಪ ಹೊನಕುಪ್ಪಿ, ಭಾರತಿ ಗುಮತಿ, ಪ್ರೇಮಾ ಕಂಬಾರ, ಪೊಲೀಸ್ ಸಿಬ್ಬಂದಿ ಘಸ್ತಿ ಚಾಂದ ಪನಿಬಂಧ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು. 

ರೇಣುಕಾದೇವಿ ಡೊಳ್ಳಿನ ಸಂಘದವರಿಂದ ಡೊಳ್ಳು ಬಾರಿಸುವ ಕಾರ‌್ಯಕ್ರಮ ಆಕರ್ಷಕವಾಗಿ ಜರುಗಿತು. ಚಂದ್ರಶೇಖರ ಸುಲಧಾಳ, ಮನೋಹರ ಗುಮತಿ, ಪ್ರಕಾಶ ಖಟಾವಕರ, ಪವನ ಖಟಾವಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಗೋಪಾಲ ಖಟಾವಕರ ಕಾರ‌್ಯಕ್ರಮ ನಿರೂಪಿಸಿದರು. ಘಟಪ್ರಭಾ ಪೊಲೀಸರು ಬಂದೋಬಸ್ತ ಕಲ್ಪಿಸಿದ್ದರು.