ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ವಿಕ್ಷಿತ್ ಭಾರತ ಯುವ ಸಂಸತ್ ಭಾಷಣ ಸ್ಪರ್ಧೆ

ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ವಿಕ್ಷಿತ್ ಭಾರತ ಯುವ ಸಂಸತ್ ಭಾಷಣ ಸ್ಪರ್ಧೆ  District level Vikshith Bharat Yuva Samsat speech competition in Belgaum



ಬೆಳಗಾವಿ, 06 : ಯುವ ಸಂಸತ್  ಕಾರ್ಯಕ್ರಮ ಯುವಜನರ ಸಾರ್ವಜನಿಕ ಸಮಸ್ಯೆಗಳಲ್ಲಿ ತೊಡಗಿಸಿಕೊಳ್ಳಲು ಸಾಮಾನ್ಯ ಜನರ ದೃಷ್ಠಿಕೋನವನ್ನು ಅರ್ಥಮಾಡಿಕೊಳ್ಳಲು, ಅವರ ಅಭಿಪ್ರಾಯಗಳನ್ನು ರೂಪಿಸಲು ಮತ್ತು ಅವುಗಳನ್ನು ಸ್ಪಷ್ಟಪಡಿಸಲು ಈ ಕಾರ್ಯಕ್ರಮವು ಸಹಕಾರಿಯಾಗಿದೆ ಎಂದು  ಕೆಎಲ್ ಇ ಹೋಮಿಯೊಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ   ನಿರ್ದೇಶಕರಾದ   ಡಾ: ಮುಕುಂದ ಉಡಚಂಕರ  ಹೇಳಿದರು. 

ಬಸವನಕುಡಚಿಯ  ಕೆ.ಎಲ್‌.ಇ ವಿಶ್ವವಿದ್ಯಾಲಯ, ಕೆ.ಎಲ್‌.ಇ ಫಾರ್ಮಸಿ ಕಾಲೇಜನಲ್ಲಿ   ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದೊಂದಿಗೆ  ಆಯೋಜಿಸಲಾದ  ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ ಕೇಂದ್ರ ಬೆಳಗಾವಿಯ,  ಜಿಲ್ಲಾ ಮಟ್ಟದ ವಿಕ್ಷಿತ್ ಭಾರತ ಯುವ ಸಂಸತ್ -2026 ಭಾಷಣ ಸ್ಪರ್ಧೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು, ಇದರಿಂದ  ಯುವಕರು ದೇಶದ ಬದಲಾವಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇದೆ.  

 ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಮುಖ್ಯ. ನಮ್ಮಷ್ಟು ಮಾನವ ಸಂಪನ್ಮೂಲ ಬೇರೆ ಯಾವುದೇ ದೇಶದಲ್ಲಿ ಇಲ್ಲ. ಹಾಗೆಯೇ ಯುವ ಸಮುದಾಯ ನಮ್ಮ ದೇಶದಲ್ಲಿ ಹೆಚ್ಚು ಇದೆ. ಹೀಗಾಗಿ, ಅವರ ಕೊಡುಗೆಯೂ ಬಹುಮುಖ್ಯವಾಗಿದೆ’ ಎಂದು ಪ್ರತಿಪಾದಿಸಿದರು.ಮಲ್ಲಯ್ಯಾ ಕರಡಿ ಇವರು ಮಾತನಾಡಿ, ಮೈ ಭಾರತ ಕೇಂದ್ರದ ಬಗ್ಗೆ, ವಿಕ್ಷಿತ್  ಭಾರತ ಯುವ ಸಂಸತ್ತು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. 

50 ವರ್ಷಗಳು ಭಾರತೀಯ ಪ್ರಜಾಪ್ರಭುತ್ವಕ್ಕೆ ಪಾಠಗಳು ಎಂಬ ವಿಷಯ ಮೇಲೆ 03 ನಿಮಿಷಗಳ ಕಾಲಾವಧಿಯಲ್ಲಿ ಭಾಷಣ ಮಾಡಬೇಕು ಜಿಲ್ಲೆಯಿಂದ 05 ಯುವಕರನ್ನು ಮುಂದಿನ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಸುಮಾರು 50 ಕಿಂತ ಹೆಚ್ಚು ಸ್ಪರ್ಧಾಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಡಾ. ಎಮ್‌.ಬಿ ಪಾಟೀಲ, ಡಾ. ವಿ.ಎಸ್‌.ಮಸ್ತಿಹೊಳಿಮಠ,   ರಾಷ್ಟ್ರೀಯ ಸೆವಾಯೋಜನೆ ಅಧಿಕಾರಿಗಳಾದ ವೀರಕುಮಾರ ಜಪ್ತಿ, ವಿನಾಯಕ ಹಾರೋಗೊಪ್ಪ,   ಜಯತೀರ್ಥ ಖುಲಕರನಿ, ನರ್ಮತಾ ದೇವಾಲಕರ್, ಶುಭಾರಾಣಿ ಮುರಗೋಡ, ಅದ್ವೀತಾ ಗಣಾಚಾರಿ ನಿರೂಪಿಸಿದರು.  ಲಿಂಗರಾಜು ವಂದಿಸಿದರು.