ಶಿಗ್ಗಾವಿ: ಕಣ್ಣು ಮನುಷ್ಯನಿಗೆ ಬಹು ಮುಖ್ಯವಾದ ಅಂಗ: ಹನುಮಂತಪ್ಪ

ಲೋಕದರ್ಶನ ವರದಿ 

ಶಿಗ್ಗಾವಿ 31: ಕಣ್ಣು ಮನುಷ್ಯನಿಗೆ ಬಹು ಮುಖ್ಯವಾದ ಅಂಗವಾಗಿದ್ದು, ಕಣ್ಣಿನ ಬಗ್ಗೆ ನೀರ್ಲಕ್ಷ ಭಾವನೆ ತೋರದೇ ಸರಿಯಾದ ವೇಳೆಗೆ ಕಣ್ಣುಗಳನ್ನು ತಪಾಸಿಸಿ ಕೋಳ್ಳುವಮೂಲಕ ಕಣ್ಣಿನ ದೃಷ್ಠಿಯನ್ನು ಕಾಯ್ದುಕೋಳ್ಳುವಂತೆ ಡಾ. ಹನುಮಂತಪ್ಪ ಸಾರ್ವಜನಿಕರಿಗೆ ಕರೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕನರ್ಾಟಕ ಪತ್ರಕರ್ತರ ಸಂಘ ಶಿಗ್ಗಾವಿ, ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೆಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ ಹಾವೇರಿ, ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ ಇವರ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನಿಗೆ ಆಸ್ತಿ ಅಂತಸ್ತು ಐಶ್ವರ್ಯಕ್ಕೀಂತ ಆರೋಗ್ಯ ಸಂಪತ್ತು ಬಹುದೊಡ್ಡ ಸಂಪತ್ತಾಗಿದೆ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು. ಶಿರಸಿ ಸುಬ್ರಾವ್ ಆಸ್ಪತ್ರೆಯ ನೇತ್ರ ತಜ್ಞ ಡಾ.ಗಿರೀಶ್ ಮೇಟಿ ಮಾತನಾಡಿ  ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೆಬಲ್ ಆಸ್ಪತ್ರೆ 60 ಸಾವಿರಕ್ಕೀಂತ ಅಧಿಕ ಶಸ್ತ್ರ ಚಿಕಿತ್ಸೆ ಮಾಡಿ ಏಶಸ್ವೀಯಾಗಿದೆ. ನಾವು ಸೇವಾ ಮನೋಬಾವನೆಯಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದ್ದು, ಮಧ್ಯವತರ್ಿಗಳಿಗೆ ಯಾವುದೇ ಹಣ ನೀಡದಂತೆ ಸೂಚಿಸಿದರು. ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ನಾವೇ ಕರೆದುಕೋಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿ ಮರಳಿ ಕರೆತರುವ ವ್ಯವಸ್ಥೆ ಇದೆ. ಶಸ್ತ್ರ ಚಿಕಿತ್ಸೆ ನಂತರ ಕನ್ನಡಕವನ್ನು ನೀಡಿ ಆರು ತಿಂಗಳುಗಳ ಕಾಲ ಉಚಿತವಾಗಿ ಸೇವೆ ಮಾಡಲಾಗುವುದು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕೇಂದು ಹೇಳಿದರು.ಕನರ್ಾಟಕ ಪತ್ರಕರ್ತ ಸಂಘದ ಅಧ್ಯಕ್ಷ ರವಿ ಉಡಪಿ ಮಾತನಾಡಿದರು. ಈ ಶಿಬಿರದಲ್ಲಿ 176 ಜನ ತಪಾಸಣೆಗೆ ಒಳಗಾಗಿ 100 ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.

     ಡಾ.ಗುರುರಾಜ ಎನ್, ಗಿರೀಶ ದಾರೇಶ್ವರ, ಮಂಜುನಾಥ ನಾಯಕ, ಅನುರಾಧಾ ಪಾಟೀಲಕರ್ನಾಟಕ   ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ ಬಂಡಿವಡ್ಡರ, ಬಸವರಾಜ ಹಡಪದ ಸೇರಿದಂತೆ ಶುಶ್ರುಕಿಯರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಸುಧಾಕರ ದೈವಜ್ಞ ನಿರೂಪಿಸಿದರು.