ಶರಣರ ಜಯಂತಿ ಗಣರಾಜ್ಯೋತ್ಸವ ದಿನಾಚರಣೆಗೆ ನಿಧರ್ಾರ

ಲೋಕದರ್ಶನ ವರದಿ

ಬ್ಯಾಡಗಿ: ತಾಲೂಕಿನಲ್ಲಿ ವಿವಿಧ ಶರಣರ ಜಯಂತಿಗಳನ್ನು ಮತ್ತು ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು.

     ಬುಧವಾರ ತಹಶೀಲದಾರರ ಕಾಯರ್ಾಲಯದ ಸಭಾಂಗಣದಲ್ಲಿ ತಹಶೀಲದಾರ ಕೆ.ಗುರುಬಸವರಾಜ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಜ.15 ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ, ಜ.19 ರಂದು ಮಹಾಯೋಗಿ ವೇಮನ ಜಯಂತಿ, ಜ.21 ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆಗಳನ್ನು ವೈಭವದಿಂದ ಆಚರಿಸಲು ಸಭೆಯಲ್ಲಿ ತಹಶೀಲಾದರ ಗುರುಬಸವರಾಜ ಅವರು ತಿಳಿಸಿದರು.

      ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜಯಂತಿ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ. ಆದ್ದರಿಂದ ರಾಷ್ಟ್ರೀಯ ಹಬ್ಬಗಳ ಸಮಿತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವ ಮೂಲಕ ಜಯಂತಿ ಕಾರ್ಯಕ್ರಮಗಳನ್ನು  ಯಶಸ್ವಿಗೊಳಿಸಬೇಕೆಂದರು.

     ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷ ಜಯಣ್ಣ ಮಲ್ಲಿಗಾರ ಮಾತನಾಡಿ ಇಂದು ನಡೆಯಲಿರುವ ವಿವಿಧ ಶರಣರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಆಗಮಿಸಿಲ್ಲ. ಗೈರಾದ ಅಧಿಕಾರಿಗಳಿಗೆ ಎಚ್ಚರಿಕೆ ನೋಟಿಸ್ ನೀಡುವ ಮೂಲಕ ಜಯಂತಿ ಕಾರ್ಯಕ್ರಮಗಳಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಭಾಗವಹಿಸುವಂತೆ ಕ್ರಮ ಕೈಕೊಳ್ಳಬೇಕೆಂದು ತಹಶೀಲದಾರ ಅವರಿಗೆ ಆಗ್ರಹಿಸಿದರು.

      ವಿವಿಧ ಸಮಾಜದ ಮುಖಂಡರಾದ ರಮೇಶ ಸುತ್ತಕೋಟಿ, ರವಿ ಪೂಜಾರ, ತಿಮ್ಮಣ್ಣ ವಡ್ಡರ, ರುದ್ರಣ್ಣ ಹೊಂಕಣ, ಬೀರಣ್ಣ ಬಣಕಾರ, ಜೀತೇಂದ್ರ ಸುಣಗಾರ ಅವರು ಮಾತನಾಡಿ ಜಯಂತಿ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದರು. ರಂಗಪ್ಪ ಸ್ವಾಗತಿಸಿ ವಂದಿಸಿದರು.

ಫೋಟೋ: 9ಬಿವೈಡಿ1 ಬ್ಯಾಡಗಿಯ ತಹಶೀಲದಾರರ ಕಾಯರ್ಾಲಯದಲ್ಲಿ ತಹಶೀಲದಾರ ಕೆ.ಗುರುಬಸವರಾಜ ಮಾತನಾಡಿದರು.