ತಾಳಿಕೋಟಿ 28: ತಾಲೂಕಿನ ತುಂಬಗಿ ಗ್ರಾಮ ಪಂಚಾಯತ್ ಇದರ ತೆರವಾದ ಅನಸೂಚಿತ ಜಾತಿ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ತುಂಬಗಿ ಸದಸ್ಯೆ ಶಂಕ್ರಮ್ಮ ಮಲಕಪ್ಪ ಬಜಂತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ತುಂಬಗಿ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಉಪಾಧ್ಯಕ್ಷ ಸ್ಥಾನದ ಈ ಚುನಾವಣೆಯಲ್ಲಿ ಸದಸ್ಯೆ ಶಂಕ್ರಮ್ಮ ಮಲಕಪ್ಪ ಬಜಂತ್ರಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ನಾಮಪತ್ರವೂ ಸಲ್ಲಿಕೆ ಆಗದೇ ಇರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಾಪಂ ಇಓ ನಿಂಗಪ್ಪ ಮಸಳಿ ಘೋಷಿಸಿದರು.ತಾಪಂ ನ ಬಸನಗೌಡ ಚೌಧರಿ, ಮಹಾಂತಗೌಡ ದೊರೆಗೋಳ ಹಾಗೂ ಪಿಡಿಒ ಮಲ್ಲಿಕಾರ್ಜುನ ಮಾದರ ಸಹಾಯಕರಾಗಿ ಕಾರ್ಯನಿರ್ವಹಿಸಿದರು.ಈ ಗ್ರಾಮ ಪಂಚಾಯತ್ ನ ಒಟ್ಟು 13 ಸದಸ್ಯರ ಪೈಕಿ ಚುನಾವಣಾ ಪ್ರಕ್ರಿಯೆಯಲ್ಲಿ 10 ಜನ ಸದಸ್ಯರು ಭಾಗವಹಿಸಿದ್ದರು.
ಸಂಭ್ರಮಾಚರಣೆ: ಉಪಾಧ್ಯಕ್ಷ ಸ್ಥಾನದ ಘೋಷಣೆ ಆಗುತ್ತಿದಂತೆಯೇ ಅವರ ಅಪಾರ ಬೆಂಬಲಿಗರು ಸೇರಿ ಸಂಭ್ರಮಾಚರಣೆ ಮಾಡಿದರು. ಗ್ರಾಮದ ಗಣ್ಯರಾದ ಶಿವಯ್ಯ ಹಿರೇಮಠ, ನಿಂಗನಗೌಡ ಚೌದ್ರಿ, ಶಂಕರಗೌಡ ಬಿರಾದಾರ, ಅಶೋಕ್ ಕಾಮರೆಡ್ಡಿ, ವಿಶ್ವನಾಥ ನಾಯ್ಕೋಡಿ, ಸಿದ್ದಲಿಂಗ ಕೊಳ್ಳಿ, ಸಂತೋಷ ತೋಟದ, ಬಸನಗೌಡ ಬಿರಾದಾರ, ಬಸವರಾಜ ಏವೂರ, ಗ್ರಾಪಂ ಸದಸ್ಯರಾದ ನಿಂಗನಗೌಡ ಶರಣಪ್ಪಗೌಡ ಚೌದ್ರಿ, ಶರಣಬಸವರಾಜ್ ಬಸಣ್ಣ ಕೊಳ್ಳಿ, ಶರಣಮ್ಮ ಹಣಮಂತ್ರಾಯ ನಾಯ್ಕೋಡಿ, ಮಲ್ಲಮ್ಮ ಹಣಮಂತ್ರಾಯ ದಿಡ್ಡಿಮನಿ, ಕಸ್ತೂರಿಬಾಯಿ ಬಸವಂತ್ರಾಯ ಕಾಮರೆಡ್ಡಿ, ಅಶೋಕ ಸಿದ್ಲಿಂಗಪ್ಪ ಉಪ್ಪಲದಿನ್ನಿ, ರಾಮನಗೌಡ ಚನ್ನನ ಗೌಡ ಹಾದಿಮನಿ, ಸುಭಾಶ ಮದ್ದರಕಿ, ಶಿವಮ್ಮ ಬಸವರಾಜ ಏವೂರ, ಗ್ರಾಪಂ ಸಿಬ್ಬಂದಿಗಳಾದ ಬಸವರಾಜ ಮಸರಕಲ್ಲ, ನಿಂಗಣ್ಣ ಯಲಗೋಡ, ಬಸವರಾಜ ತೋಟದ, ಬಸನಗೌಡ ದೇಸಾಯಿ, ಸಂಗೀತಾ ಕೊಳೂರ, ಮಡಿವಾಳಪ್ಪಗೌಡ ಬಿರಾದಾರ ಮತ್ತಿತರರು ಇದ್ದರು.