ನಾಳೆಯಿಂದ ಶಂಕರಲಿಂಗ ಜಾತ್ರೆ: ವಿವಿಧ ಸ್ಪರ್ಧೆಗಳು
ಸಂಕೇಶ್ವರ 2: ದಿ. 4ರಿಂದ ಶಂಕರಲಿಂಗನ ಮಹಾಜಾತ್ರೆಯು ಆರಂಭಗೊಳ್ಳುತ್ತಿದ್ದು, ಜಾತ್ರೆಯ ನಿಮಿತ್ತ ಭವ್ಯ ಅಟೋರಿಕ್ಷಾ ಸೌಂದರ್ಯ ಸ್ಪರ್ಧೆ, ಎತ್ತಿನಗಾಡಿ ಸ್ಪರ್ಧೆಗಳು ನಡೆಯಲಿವೆ.
ಕರ್ನಾಟಕ ರಾಜ್ಯ ರಿಕ್ಷಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 15,001 ಹಾಗೂ ಟ್ರೋಫಿ ನಗರದ ಗಣ್ಯವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ ಇವರಿಂದ ದ್ವಿತೀಯ ಬಹುಮಾನ ರೂ. 11,001 ಹಾಗೂ ಟ್ರೋಫಿ ಮರಾಠಾ ಸಮಾಜದ ನಾಯಕ ಬಂಡು ಬಾಳಕೃಷ್ಣ ಹತನೂರೆ ಇವರಿಂದ ಮತ್ತು ತೃತೀಯ ಬಹುಮಾನ ರೂ. 7,001 ಹಾಗೂ ಟ್ರೋಫಿ ಪುರಸಭೆಯ ಸದಸ್ಯ ನಂದು ಮುಡಶಿ ಇವರಿಂದ, ಚತುರ್ಥ ಬಹುಮಾನ ರೂ. 4,001 ಹಾಗೂ ಟ್ರೋಫಿ ರಾಹುಲ ಕದಮ ಮತ್ತು ಮಹಾರಾಷ್ಟ್ರ ರಾಜ್ಯದ ರಿಕ್ಷಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 15,001 ಹಾಗೂ ಟ್ರೋಫಿ ಪುರಸಭೆಯ ನಾಮನಿರ್ದೇಶಿತ ಸದಸ್ಯ ಪುಟ್ಟು ನೇಸರಿ (ನ್ಯಾಯವಾದಿ) ಇವರಿಂದ ದ್ವಿತೀಯ ಬಹುಮಾನ ರೂ. 11,001 ಹಾಗೂ ಟ್ರೋಫಿ ಪುರಸಭೆಯ ಸದಸ್ಯ ಸುನೀಲ ಪರ್ವತರಾವ ಇವರಿಂದ ಮತ್ತು ತೃತೀಯ ಬಹುಮಾನ ರೂ. 7,001 ಹಾಗೂ ಟ್ರೋಫಿ ಪುರಸಭೆಯ ಸದಸ್ಯ ನಂದು ಮುಡಶಿ ಇವರಿಂದ, ಚತುರ್ಥ ಬಹುಮಾನ ರೂ. 4,001 ಹಾಗೂ ಟ್ರೋಫಿ ನಬಿಸಾಬ ಹುಣಚ್ಯಾಳಕರ ಇವರಿಂದ ನೀಡಲಾಗುವುದು. ಅಟೋರಿಕ್ಷಾ ಸೌಂದರ್ಯ ಸ್ಪರ್ಧೆಯ ಎಲ್ಲ ವಿಜೇತರಿಗೆ ಟ್ರೋಫಿಗಳು ನವೀನ ಗಂಗಾರೆಡ್ಡಿ ಇವರಿಂದ ನೀಡಲಾಗುವುದು ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ಮತ್ತು ಟೋಫಿಗಳು ಪುರಸಭೆಯ ನಾಮನಿರ್ದೇಶಿತ ಸದಸ್ಯ ಅವಿನಾಶ ಜಯಪ್ರಕಾಶ ನಲವಡೆ ಇವರು ನೀಡುವರು.
ಅಟೊರಿಕ್ಷಾ ಕಮೀಟಿಯ ಅಧ್ಯಕ್ಷ ಶೇಖರ ಸೂರ್ಯವಂಶಿ, ಉಪಾಧ್ಯಕ್ಷ ಅಮೋಲ ಗೋಂಧಳಿ, ಕಾರ್ಯದರ್ಶಿ ಸಂದೀಪ ಶೇಂಡಗೆ, ರವೀಂದ್ರ ಹೊಸಮನಿ, ಸದಸ್ಯರುಗಳಾದ ಚಂದ್ರಕಾಂತ ಸತ್ಯನಾಯಕ, ದೀಪಕ ಪಾರಕೆ, ಪ್ರಶಾಂತ ಮೇಲಗಿರಿ, ಶೇಖರ ಮಾಳಿ, ಪದ್ಮಾಕರ ಯಾದಗೂಡೆ, ಸಂದೀಪ ಫಡಕೆ, ವಿಶಾಲ ರಾಯಣ್ಣವರ, ಬಸವರಾಜ ಕರನಿಂಗ ಈ ಎಲ್ಲ ಸ್ಪರ್ಧೆಯು ಛತ್ರಪತಿ ಶಿವಾಜಿ ಚೌಕ ಲಿಂಕ್ ರೋಡ್ ಇಲ್ಲಿಂದ ಆರಂಭಗೊಳ್ಳುತ್ತವೆ.
ಕಳೆದ 40 ವರ್ಷಗಳಿಂದ ಹುಟ್ಟುಹಾಕಿದ ಅಚಾನಕ ತರುನ ಮಂಡಳ ಮಠಗಲ್ಲಿ ಶಂಕರಲಿಂಗ ಜಾತ್ರೆಯ ನಿಮಿತ್ತ ಭವ್ಯ ಜೋಡೆತ್ತಿನ ಶರ್ಯತ್ತುಗಳನ್ನು ಆಯೋಜಿಸಿದ್ದಾರೆ. ಇದರಲ್ಲಿ ವಿಜೇತರಾದ ಪ್ರಥಮ ಬಹುಮಾನ ರೂ. 30,001 ಈ ಬಹುಮಾನವನ್ನು ಯಮಕನಮರಡಿ ಕ್ಷೇತ್ರದ ಶಾಸಕರು ಮತ್ತು ರಾಜ್ಯದ ಲೋಕೋಪಯೋಗಿ ಸಚಿವರಾದ ಸತೀಶ ಲಕ್ಷ್ಮಣರಾವ ಜಾರಕಿಹೊಳಿ ಇವರ ಬಲಗೈ ಬಂಟ ಕಿರಣಸಿಂಗ ಬಾ ರಜಪೂತ, ದ್ವಿತೀಯ ಬಹುಮಾನ ರೂ. 20,001 ಈ ಬಹುಮಾನವನ್ನು ಯೋಧರಾದ ಶಿವರಾಮ ಶೇಲಾರ, ಮತ್ತು ತೃತೀಯ ಬಹುಮಾನ ರೂ. 10,001 ಈ ಬಹುಮಾನವನ್ನು ಸಚಿನ ಶಂಕರರಾವ ಹೆಗಡೆ ಇವರಿಂದ ನೀಡಲಾಗುವುದು ಮತ್ತು ಕುದುರೆ ಗಾಡಿ ಶರ್ಯತ್ತು ಪ್ರಥಮ ಬಹುಮಾನ ರೂ. 15,001 ಈ ಬಹುಮಾನವನ್ನು ರಾಜ್ಯದ ಕಾಂಗ್ರೇಸ್ ಯುವಾ ಕಮಿಟಿಯ ಮಹಿಳಾ ಪ್ರಧಾನ ಕಾರ್ಯದರ್ಶಿ ಇವರಿಂದ, ದ್ವಿತೀಯ ಬಹುಮಾನ ರೂ. 10,001 ಈ ಬಹುಮಾನವನ್ನು ಬಾಬು ಭೂಸಗೋಳ್ ಇವರಿಂದ, ಮತ್ತು ತೃತೀಯ ಬಹುಮಾನ ರೂ. 7,001 ಈ ಬಹುಮಾನವನ್ನು ಸಂಕೇಶ್ವರ ಬ್ಲಾಕ್ ಕಾಂಗೈ ಅಧ್ಯಕ್ಷ-ಸಂತೋಷ ಮುಡಶಿ ಇವರಿಂದ ನೀಡಲಾಗುವುದು. ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.