ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಇರಲಿ: ಸಿ.ಬಿ.ಅಸ್ಕಿ

ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಇರಲಿ: ಸಿ.ಬಿ.ಅಸ್ಕಿ  Let everyone feel like an Indian: C.B. Askey

ತಾಳಿಕೋಟೆ 06 : ಮುಸ್ಲಿಂ ಬಾಂಧವರು ಪವಿತ್ರ ರಮಜಾನ್ ಮಾಸದಲ್ಲಿ ಉಪವಾಸ ವೃತ ಹಾಗೂ ವಿಶೇಷ ಆರಾಧನೆಗಳನ್ನು ಆಚರಿಸುವ ಮೂಲಕ ಭಗವಂತನ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಇದು ಎಲ್ಲ ಧರ್ಮೀಯರ ಮಧ್ಯೆ ಪ್ರೀತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮಾಸಾಗಿದೆ ಎಂದು ಅಸ್ಕಿ ಫೌಂಡೇಶನ್ ಕೊಣ್ಣೂರದ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪವಿತ್ರ ರಮಜಾನ್ ಮಾಸದ ಅಂಗವಾಗಿ ಫೌಂಡೇಶನ್ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡ "ಇಫ್ತಾರ ಸೌಹಾರ್ದ ಕೂಟ" ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ 8 ವರ್ಷಗಳಿಂದ ಇಂತಹ ಸೌಹಾರ್ದ ಭೋಜನ ಕೂಟಗಳನ್ನು ಎರಡೂ ತಾಲೂಕುಗಳಲ್ಲಿ ಆಯೋಜಿಸುತ್ತಾ ಬಂದಿದ್ದೇನೆ ಇದಕ್ಕೆ ಎಲ್ಲಾ ಸಮಾಜ ಬಾಂಧವರ ಸಹಕಾರ ನನಗಿದೆ ನಾವೆಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದಿಂದ ಬಾಳುತ್ತಾ ದೇಶ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಂದರು. ಗ್ರಾಮದ ಗಣ್ಯರಾದ ಬಸನಗೌಡ ಹಡಲಗೇರಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಮಡಿಕೇಶ್ವರ ಅವರು ಮಾತನಾಡಿ ಸಿ.ಬಿ.ಅಸ್ಕಿ ಅವರು ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಹಾಗೂ ಸಹಕರಿಸುವ ವ್ಯಕ್ತಿಯಾಗಿದ್ದಾರೆ ಅವರು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳು ನಮಗೆಲ್ಲರಿಗೂ ಮಾದರಿ ಯೋಗ್ಯವಾಗಿವೆ ಅವರಿಗೆ ನಾವು ಸಹಕರಿಸೋಣ. ನಾವೆಲ್ಲರೂ ಒಂದು ನಾವೆಲ್ಲರೂ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕಾಗಿದೆ.

ಇಂತಹ ಸೌಹಾರ್ದ ಭೋಜನ ಕೂಟಗಳು ಸಮಾಜದಲ್ಲಿ ಹೆಚ್ಚಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಭೋಜನ ಕೂಟದಲ್ಲಿ ಸರ್ವ ಸಮಾಜದ ನೂರಾರು ಜನರು ಭಾಗವಹಿಸಿ ಭಾವೈಕ್ಯತೆಯನ್ನು ಮೆರೆದರು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರಾದ ಶಂಕರಗೌಡ ಹಿಪ್ಪರಗಿ, ವಿವೇಕಾನಂದ ದ್ಯಾಪೂರ,ಜಿ.ಜಿ.ಅಸ್ಕಿ, ಅಂಜುಮನ್ ಕಮಿಟಿ ಅಧ್ಯಕ್ಷ ಬಂದೇನವಾಜ ಕಡಕೋಳ, ಜಿ.ಎಸ್‌.ಹಡಲಗೇರಿ, ಆರಿ​‍್ಸ.ಪಾಟೀಲ, ಗುರಣ್ಣ ಹತ್ತೂರ, ಅಬ್ದುಲ್ ರೆಹ್ಮಾನ ಅವಟಿ, ಮುದೇಗೌಡ ಹಡಲಗೇರಿ,ಆರಿ​‍್ಬ.ಬಿರಾದಾರ, ಮಹಮ್ಮದ್ ರಫೀಕ ಚಬನೂರ,ಡಿ.ಬಿ.ಬಿರಾದಾರ, ತಿಪ್ಪಣ್ಣ ಬಡಿಗೇರ, ಎಸ್‌.ಎಸ್‌.ಹಡಲಗೇರಿ ಬಸಣ್ಣ ನಾಯ್ಕೋಡಿ ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಪತ್ರಕರ್ತ ಅಬ್ದುಲ್ ಗನಿ ಮಕಾನದಾರ ಕಾರ್ಯಕ್ರಮ ನಿರ್ವಹಿಸಿದರು.