ಲೋಕದರ್ಶನವರದಿ
ರಾಣೇಬೆನ್ನೂರು 15: ಶಂಕರಾಚಾರ್ಯರು ಒಬ್ಬ ಅಸಾಧಾರಣ ಕ್ರಿಯಾಶೀಲ ಅದ್ಭುತ ಮಹಾಪುರುಷರಾಗಿದ್ದರು, ಅವರು ಬೌದ್ಧ ಮತ್ತು ಇತರ ವೈದಿಕ ಪರಂಪರೆಯಲ್ಲಿರುವ ದೋಷಗಳನ್ನು ಎತ್ತಿ ತೋರಿಸಿ ಅದ್ವೈತ ತತ್ವವೇ ಪರಿಪೂರ್ಣ ಎಂದು ಸಾರಿದ ಕೀತರ್ಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಹರಿಹರಪುರದ ಸಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಮಂಗಳವಾರ ನಗರದ ಬನಶಂಕರಿ ಸಭಾಭವನದಲ್ಲಿ ಏರ್ಪಡಿಸಿದ್ದ ಶತಮಾನೋತ್ಸವದ ಸಮಿತಿ ವತಿಯಿಂದ ಆದಿಗುರು ಶಂಕರಾಚಾರ್ಯರ ಜಯಂತೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಶಂಕರಾಚಾರ್ಯರು ಭಗವದ್ಗೀತೆ ಮತ್ತು ಹತ್ತು ಉಪನಿಷತ್ತುಗಳು ಹಾಗೂ ಬ್ರಹ್ಮಸ್ತೋತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವುಗಳಿಗೆ ಭಾಷೆಗಳನ್ನು ಬರೆದು ಸಮ್ಮತವಾದ ಅದ್ವೈತ ಸಿದ್ಧಾಂತವೆಂದು ನಿರೂಪಿಸಿದ್ದಾರೆ ಎಂದರು.
ಭಾರತದ ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು, ಅವರು ಕೇವಲ 32 ವರ್ಷಗಳ ಕಾಲ ಜೀವಿಸಿದ್ದರು, ಈ ಅಲ್ಪಾವಧಿಯಲ್ಲಿಯೇ ದೇಶಾದ್ಯಂತ ಸಂಚರಿಸಿ ಗೀತಾಚಾರ್ಯ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತ ವಿಶ್ವಕ್ಕೆ ಸಾರಿದವರು. ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಸಾನಗೊಳಿಸಿದವರು ಶಂಕರಾಚಾರ್ಯರು ಎಂದು ವಿವರಿಸಿದರು.
ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ| ಸಂಜಯ ನಾಯಕ ಮಾತನಾಡಿ, ಎಲ್ಲಾ ಜೀವರಾಶಿಗಳಿಗೂ ಒಂದೇ, ಅವುಗಳಲ್ಲಿ ಯಾವ ಭೇದವೂ ಇಲ್ಲ. ಅವೆಲ್ಲವೂ ಪರಮಾತ್ಮನ ಸ್ವರೂಪ ಎಂಬ ಉನ್ನತ ತಾತ್ವಿಕ ತತ್ವದ ಸತ್ಯವನ್ನು ಜಗತ್ತಿಗೆ ತಿಳಿಸದವರು ಶಂಕರಾಚಾರ್ಯರು ಎಂದರು.
ನಶ್ವರವಾದ ಈ ಸಂಸಾರದ ಬಗ್ಗೆ ವ್ಯಾಮೋಹ ಬಿಟ್ಟು ಸದ್ಗತಿಯ ಕಡೆಗೆ ಮನಸ್ಸನ್ನು ಹರಿದಾಡುವಂತೆ ಭಜಗೋವಿಂದಂ ಸ್ತೋತ್ರವನ್ನು ಬರೆದರು. ಬದರಿಕಾ ಕ್ಷೇತ್ರದಲ್ಲಿ ನರ ನಾರಾಯಣನನ್ನು ಪ್ರತಿಷ್ಠಾಪಿಸಿದರು. ಬ್ರಹ್ಮಸೂತ್ರ ಭಗವದ್ಗೀತೆ ಹಾಗೂ ಉಪನಿಷತ್ತುಗಳ ಮೇಲೆ ಭಾಷೆಗಳನ್ನು ಬರೆದರು ಎಂದರು.
ಗೌರವಾಧ್ಯಕ್ಷ ಎ.ಎಂ.ನಾಯಕ, ಡಿ.ಸಿ.ಕುಲಕಣರ್ಿ, ಗುರುರಾಜ ನಾಡಿಗೇರ, ಅರುಣ ಮುದ್ರಿ, ಶ್ರೀಪಾದ ಕುಲಕಣರ್ಿ, ಚಿದಂಬರ ಜೋಷಿ, ನಾಗರಾಜ ಕುಲಕಣರ್ಿ, ವಿನಾಯಕ ಜೋಷಿ, ರವಿಂದ್ರ ವರಗಿರಿ ಸೇರಿದಂತೆ ಮತ್ತಿತರರು ಇದ್ದರು.
ಬೆಳಿಗ್ಗೆ ಬ್ರಹ್ಮಿಮುಹೂರ್ತದಲ್ಲಿ ಗಣಪತಿ ಪೂಜೆ, ಪುಣ್ಯಹ, ಕೃಚ್ಛಾಚರಣೆ, ಪ್ರಾಯಶ್ಚಿತ್, ಯಂತ್ರ, ಕಳಶ ಸ್ಥಾಪನೆ, ಅಂಕುರಾರ್ಪ ಮಹಾರುದ್ರಯಾಗ, ಶತಚಂಡಿ ಪಾರಾಯಣ, ವೇದ ಪಾರಾಯಣ, ಶಂಕರ ಭಾಷ್ಯ ಪಾರಾಯಣ, ಗಣಪತಿ ಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ ಹಾಗೂ ಪೂಣರ್ಾಹುತಿ ಸಲ್ಲಿಸುವ ಮೂಲಕ ಎಲ್ಲ ಧಾಮರ್ಿಕ ವಿಧಿವಿಧಾನಗಳನ್ನು ಕಾರವಾರದ ಶಿವಮೂತರ್ಿ ಜೊಯ್ಸ ಅವರು ನಡೆಸಿಕೊಟ್ಟರು.
ಇದಕ್ಕೂ ಮುನ್ನು ಆದಿಗುರು ಶಂಕರಾಚಾರ್ಯರ ಭಾವಚಿತ್ರದ ಪಾಲಕಿ ಉತ್ಸವವು ಬಹು ವಿಜೃಂಭಣೆಯಿಂದ ಮಂಗಲವಾಧ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬನಶಂಕರಿ ಸಭಾಭವನಕ್ಕೆ ಬಂದು ತಲುಪಿತು, ಮೆರವಣಿಗೆಯದ್ದಕ್ಕೂ ಮಹಿಳೆಯರು ಪೂರ್ಣ ಕುಂಬದೊಂದಿಗೆ ಸಾಗಿದರು, ಆದಿಗುರು ಶಂಕರಾಚಾರ್ಯರ ಭಾವಚಿತ್ರದ ಪಾಲಕಿ ಉತ್ಸವದ ಅಂಗವಾಗಿ ದಾರಿಯುದ್ದಕ್ಕೂ ಎಲ್ಲರ ಮನೆಯ ಮುಂದೆ ರಂಗೋಲಿ ಬಿಡಿಸಿ ಹಸಿರು ತೋರಣಗಳಿಂದ ರಸ್ತೆಯನ್ನು ಶೃಂಗರಿಸಿದ್ದರು.