ಶಾಹೀನ್ ಬಾಗ್; ವಿಚಾರಣೆ ಫೆ. 17ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ, ಫೆ 10 :     ದೆಹಲಿಯ ಕಳಿಂದಿ ಕುಂಜ್ ರಸ್ತೆಯ ಶಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆ. 17ಕ್ಕೆ ಮುಂದೂಡಿದೆ. 

ನೀವು ಪ್ರತಿಭಟನೆ ನಡೆಸಬೇಕಾದರೆ ಅದಕ್ಕಾಗಿ ನಿರ್ದಿಷ್ಟ ಸ್ಥಳವಿರಬೇಕು. ನೀವು ಸಾರ್ವಜನಿಕ ರಸ್ತೆಯನ್ನು ತಡೆಹಿಡಿಯುವಂತಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರಿದ್ದ ನ್ಯಾಯಪೀಠ, ವಿಚಾರಣೆಯನ್ನು ಫೆ. 17ಕ್ಕೆ ಮುಂದೂಡಿತು. 

ಕಳೆದ 58 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಅದರ ವಿಚಾರಣೆಗಾಗಿ ಇನ್ನೊಂದು ವಾರ ಕಾಯಲಾಗದೆ ಎಂದು ನ್ಯಾಯಪೀಠ ಪ್ರಶ್ನಿಸಿತು. 

ಅರ್ಜಿಯಲ್ಲಿ ಪ್ರತಿವಾದಿಯಾಗಿರುವ  ಪ್ರತಿಭಟನಾಕಾರ ಹೆಸರನ್ನು ಕೈಬಿಡಲು ನ್ಯಾಯಪೀಠ ನಿರಾಕರಿಸಿತು.