ಸರಸ್ವತಿ ಸಸಿಮಠಗೆ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ಪ್ರದಾನ
ಕೊಪ್ಪಳ 13: ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕ ಮ್ಯಾಗೇರಿ ಗ್ರಾಮದ ನಿವಾಸಿಯಾಗಿರುವ ಇವರು ಸದ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಕನೂರು ಡಿಪೋದಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸರಸ್ವತಿ ಸಸಿ ಮಠ ಕಳೆದ ಸುಮಾರು ಒಂದು ದಶಕದಿಂದ ಕುಕುನೂರು ಘಟಕದಲ್ಲಿ ತಾಂತ್ರಿಕ ಸಹಾಯಕರಾಗಿ ಉತ್ತಮ ಸೇವೆ ಸಲ್ಲಿ ಸುತ್ತಿರುವ ಹಿನ್ನೆಲೆಯಲ್ಲಿ ಅವರ ಉತ್ತಮ ತಾಂತ್ರಿಕ ಸೇವೆ ಪರಿಗಣಿಸಿ ಅವರನ್ನು ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಇಟಗಿ ಉತ್ಸವದಲ್ಲಿ ರವಿವಾರ ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ಚಾಲುಕ್ಯ ವಿಕ್ರಮಾದಿತ್ಯ ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಿ ಸತ್ಕರಿಸಲಾಯಿತು.
ಸಮಾರಂಭದಲ್ಲಿ ಅನ್ನದಾನೇಶ್ವರ ಸಂಸ್ಥಾನ ಮಠ ಕುಕನೂರಿನ ಮಹಾದೇವ ದೇವರು, ಸಮ್ಮೇಳನದ ಅಧ್ಯಕ್ಷರಾದ ಬಸವರಾಜ್ ಅಡಿವೆಪ್ಪ ಗೌಡ್ರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಗೌರವಾಧ್ಯಕ್ಷರಾದ ಎಂಬಿ ಅಳವಂಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸದಸ್ಯರಾದ ಎಂ ಸಾಧಿಕ್ ಅಲಿ ಸಂಘಟಕರಾದ ಮಹೇಶ್ ಬಾಬು ಸುರುವೇ ಸೇರಿದಂತೆ ಜನಪ್ರತಿನಿಧಿಗಳು ವಿವಿಧ ಸಂಘಟನೆಗಳ ಮುಖ್ಯಸ್ಥರು ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾರಿಗೆ ನಿಗಮ ಕುಕನೂರು ಘಟಕದ ತಾಂತ್ರಿಕ ಸಹಾಯಕಿ ಸರಸ್ವತಿ ಸಸಿಮಠ ರಾಜ್ಯಮಟ್ಟದ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ಲಭಿಸಿರುವುದಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಕನೂರು ಘಟಕದ ನೌಕರ ವರ್ಗ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.