ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು -ಎ.ಎಸ್‌.ಪಿ. ಲಕ್ಷ್ಮಣ ಶಿರಕೋಳ

Drivers should drive cautiously -A.S.P. Lakshmana Shirakola

ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು -ಎ.ಎಸ್‌.ಪಿ. ಲಕ್ಷ್ಮಣ ಶಿರಕೋಳ 

ಹಾವೇರಿ 13:  ಚಾಲಕ ವೃತಿ ಬಹಳ ಶ್ರೇಷ್ಠ ಹಾಗೂ  ನಂಬಿಕೆಯ ವೃತ್ತಿಯಾಗಿದೆ.   ಹಾಗಾಗಿ ಚಾಲಕರು ಜಾಗರೂಕತೆಯಿಂದ ಅಪಘಾತ ರಹಿತ ಚಾಲನೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಅವರು ಹೇಳಿದರು. 

ನಗರದ ಕ.ರ.ಸಾ.ಸಂಸ್ಥೆಯ ಹಾವೇರಿ ಘಟಕದಲ್ಲಿ  ಶುಕ್ರವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ  ಜ.31 ರವರೆಗೆ ಹಾಗೂ  ಇಂಧನ ಉಳಿತಾಯ ಮಾಸಿಕ ಫೆ. 06ರವರೆಗೆ ವಿಭಾಗದ ಎಲ್ಲಾ ಘಟಕಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.   

ಭಾರತದಲ್ಲೇ ಕರ್ನಾಟಕ ರಾಜ್ಯದ ಸಾರಿಗೆ ಬಸ್ಸುಗಳನ್ನು ಪ್ರಥಮ ಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಇನ್ನೂ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು. 

ವಕೀಲರಾದ ಎಸ್‌.ಆರ್‌.ಹೆಗಡೆ ಅವರು ಅಪಘಾತಗಳಿಂದ ಆಗುವ ಆರ್ಥಿಕ ನಷ್ಟ ಹಾಗೂ  ಅಪಘಾತಗಳು ಸಂಭವಿಸಿದ ತಕ್ಷಣ ಮಾಡಬೇಕಾದ ತುರ್ತು ಕೆಲಸಗಳ ಕುರಿತು ಚಾಲನಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.  

ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ.ಜಿ ಅವರು, ಅಪಘಾತಗಳು ಸಂಭವಿಸುವುದರಿಂದ ಚಾಲನಾ ಸಿಬ್ಬಂದಿಗಳಿಗೆ ಹಾಗೂ ಸಂಸ್ಥೆಗೆ ಆಗುವ ನಷ್ಟದ ಕುರಿತು ತಿಳಿದರು . ಇಂಧನ ಉಳಿತಾಯ ಹಾಗೂ  ಸಂಸ್ಥೆಯ ಅಭಿವೃದ್ದಿಗಾಗಿ  ಚಾಲಕರು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. 

ವಿಭಾಗೀಯ ಸಂಚಾರ ಅಧಿಕಾರಿ  ಅಶೋಕ ಪಾಟೀಲ  ಪ್ರಾಸ್ತಾವಿಕವಾಗಿ ಮಾತನಾಡಿ,  ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ  ಅಂಗವಾಗಿ ಚಾಲನಾ ಸಿಬ್ಬಂದಿಗಳಿಗೆ ಸುರಕ್ಷತೆಯ ಬಗ್ಗೆ ಸೂಕ್ತ ತಿಳುವಳಿಕೆ ನೀಡುವ ಮೂಲಕ ಅಪಘಾತಗಳನ್ನು ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವರ್ಷ ಅಪಘಾತದಿಂದಲೇ ಸುಮಾರು 1.5 ಲಕ್ಷ ಜನರು ಮರಣ ಹೊಂದುತ್ತಾರೆ. ಹಾಗಾಗಿ ಸಂಸ್ಥೆಯ ಚಾಲಕರು ದಿನನಿತ್ಯದ ಕರ್ತವ್ಯದಲ್ಲಿ ಶಿಸ್ತು, ಸಂಯಮವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು   ಹೇಳಿದರು. 

ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಅಂಕಿಅಂಶ ಅಧಿಕಾರಿಗಳು, ಹನುಮಂತಪ್ಪ ಸಂಕ್ಲಿಪುರ, ಕೃಷ್ಣ ರಾಮಣ್ಣವರ, ಘಟಕದ ಅನೇಕ  ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು  ಉಪಸ್ಥಿತರಿದ್ದರು.  

ಘಟಕ ವ್ಯವಸ್ಥಾಪಕ ಗುರುಬಸಪ್ಪ ಅದರಕಟ್ಟಿ ಸ್ವಾಗತಿಸಿದರು. ಲೆಕ್ಕಪತ್ರ ಅಧೀಕ್ಷಕ ಕೃಷ್ಣ ರಾಹುತನಕಟ್ಟಿ ವಂದಿಸಿದರು.