ಸಿದ್ದಾಪುರ: ತಾಲೂಕಿನ ಕವಂಚೂರು ಚೆಕ್ಪೋಸ್ಟ್ನಲ್ಲಿ ಗುರುವಾರ ಬೈಕ್ ಮೇಲೆ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು ಅರವತ್ತು ಸಾವಿರರೂ. ಮೌಲ್ಯದ ಸೀರೆ, ಚೂಡಿದಾರ ಸೇರಿದಂತೆ ವಿವಿಧ ಬಟ್ಟೆಗಳನ್ನು ಉತ್ತರಪ್ರದೇಶದ ಅಜಿತಕುಮಾರ ಎನ್ನುವವರಿಂದ ವಶಪಡಿಸಿಕೊಳ್ಳಲಾಗಿದೆ ಚುನಾವಣಾ ಸ್ಕಾಡ್ನ ಮುಖ್ಯಸ್ಥ ದಿನೇಶ ಡಿ.ಎ.ಕಾರ್ಯಚರಣೆಯ ನೇತೃತ್ವವಹಿಸಿದ್ದರು ಎಂದು ತಿಳಿಸಿದ್ದಾರೆ.
ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೆಂಗಳೂರಿನಿಂದ -ಶಿರಸಿಗೆ ಹೋಗುವ ಸಾರಿಗೆ ಇಲಾಖೆಯ ಬಸ್ನಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು ನಲವತ್ತು ಸಾವಿರ ರೂ. ಮೌಲ್ಯದ ಉಮಾಗೋಲ್ಡ್ ಬಂಗಾರವನ್ನು ಶಿರಸಿ ಗಾಂಧೀನಗರ ನಿವಾಸಿ ಮಂಜುನಾಥ ಅಣ್ವೇಕರ್ ಎನ್ನುವವರಿಂದ ವಶಪಡಿಸಿಕೊಳ್ಳಲಾಗಿದೆ ಸ್ಕಾಡ್ನ ಮಂಗೇಶ ನಾಯ್ಕ, ನಟರಾಜ ಈ ಕಾಯರ್ಾಚರಣೆಯನ್ನು ನಡೆಸಿದ್ದಾರೆ ಎಂದು ಉಪತಹಸೀಲ್ದಾರ ಡಿ.ಆರ್.ಬೆಳ್ಳಿಮನೆ ತಿಳಿಸಿದ್ದಾರೆ.