ಸೇವಾಲಾಲ್ ಬಂಜಾರ 286 ಜಯೋತ್ಸವ
ಮುಂಡಗೋಡ, 17 : ಪಟ್ಟಣದ ವಿವೇಕಾನಂದ ರಂಗಮಂದಿರದಲ್ಲಿ ರವಿವಾರ ನಡೆದ ಸದ್ಗುರು ಸೇವಾಲಾಲ್ ಬಂಜಾರ 286 ಜಯೋತ್ಸವ ಪ್ರಯುಕ್ತ ಬೃಹತ್ ಬಂಜಾರ ಸಮಾವೇಶ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿ ಸೇವಲಾಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ನೆರೆವಹಿಸಿದ್ದರು.
ಶಾಸಕ ಶಿವರಾಮ ಹೆಬ್ಬಾರ್ ಮಾತನಾಡುತ್ತ ಅವರು ನಮ್ಮ ಹಿಂದೆ ಒಬ್ಬ ಗುರು ಇರಬೇಕು. ಗುರು ಇಲ್ಲದೆ ಹೋದರೆ ಗುರಿ ಮುಟ್ಟಲು ಸಾಧ್ಯವಿಲ್ಲ ಗುರುಗಳ ಆಶೀರ್ವಾದ ನಿಮ್ಮಗಳ ಜತೆ ನಮಗೂ ಬೇಕು. ಜೀವನದಲ್ಲಿ ಮುಕ್ತಿ ಏನಾದರೂ ಕಾಣೋದಾದರೆ ಗುರುಗಳ ಗುಲಾಮ ಆಗಲೇಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಶಿರಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿ ಮಾತನಾಡಿ ಬಂಜಾರ ಸಮುದಾಯ ಚಿಕ್ಕದು. ಈಗ ತಾನೆ ಬೆಳೆಯುತ್ತಿರುವ ಸಮಾಜವಾಗಿದೆ. ಬಹತೇಕ ತಾಂಡಗಳಲ್ಲಿ ಇವತ್ತಿಗೂ ಸಹ ನಮ್ಮ ಪರಿಸ್ಥಿಗಳು ಸಮಾಜಮುಖಿಯಾಗಿ ಬೆಳೆಯುವಂತದು ತುಂಬಾ ಇದೆ. ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು.ಹಿಂದಿನಿಂದಲೂ ಗೋ ರಕ್ಷಣಾ ಮಾಡುವ ಸಮಾಜ ಬಂಜಾರ ಸಮಾಜವಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿ ಹೇಳಿದರು. ಚಿತ್ತರಗಿ ಸಿದ್ದಲಿಂಗ ಸ್ವಾಮೀಜಿ ಹಾಗೂ ಗುಂಡೂರ ನಿರಂಜನ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ಸ್ವಾಮೀಜಿ ಅವರು ಮಾತನಾಡಿದರು.
ಈ ಸಭಾ ಕಾರ್ಯಕ್ರಮವನ್ನು ಬಂಜಾರ ಸಮುದಾಯದ ಎಲ್ಲಾ ಮುಖಂಡರು ಸೇರಿದ್ದರು. ನಂತರ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.