ಹುಬ್ಬಳ್ಳಿ 29: ಕೆ.ಎಲ್.ಇ. ಸಂಸ್ಥೆಯಲ್ಲಿ ಸುದೀರ್ಘ 38 ವರ್ಷಗಳ ಕಾಲ ಶಿಕ್ಷಕರಾಗಿ, ಪ್ರಾಚಾರ್ಯರಾಗಿ ಅಮೋಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ಡಾ. ಲಿಂಗರಾಜ ಡಿ. ಹೊರಕೇರಿ, ಪಿ. ಸಿ. ಜಾಬಿನ್ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಆಯೋಜಿಸಿದ್ದ ಹೃದಯ ಸ್ಪರ್ಶಿ ಸನ್ಮಾನ ಸಮಾರಂಭದಲ್ಲಿ ಕೆ.ಎಲ್.ಇ. ಸಂಸ್ಥೆಯ ಪಿ. ಸಿ. ಜಾಬಿನ್ ವಿಜ್ಞಾನ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ. ಲಿಂಗರಾಜ ಡಿ. ಹೊರಕೇರಿ ಅವರಿಗೆ ನಾಡಿನ ಹೆಸರಾಂತ ಲೇಖಕರು, ಸಾಹಿತಿಗಳು, ವಿಶ್ರಾಂತ ಪ್ರಾಚಾರ್ಯರು,ಗದಗ-ಕಾರಟಗಿ ಹಾಗೂ ವಚನ ಟಿ.ವಿ.ಯ ನೇತೃತ್ವ ವಹಿಸಿರುವ, ಸ್ನೇಹಿ ಜೀವಿ ಪ್ರೊ ಸಿದ್ದು ಯಾಪಲಪರವಿ ಅವರು ಶಾಲು, ಮಾಲಾರ್ಪಣೆ ಮಾಡಿ ಅತ್ಯಂತ ಆತ್ಮೀಯವಾಗಿ, ಪ್ರೀತಿಯಿಂದ ಗೌರವಿಸಿದರು.
ಗಣ್ಯರು, ಶಿಕ್ಷಕರು, ಸಹನಾ ಸುರೇಶ ಹೊರಕೇರಿ ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಪ್ರೊ ಎಸ್.ಎಂ. ಸಾತ್ಮಾರ, ಮುಂತಾದವರು ಇದ್ದರು.