ನೂತನ ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು

The chariot festival of the new Anjaneya Swamy was celebrated with great pomp

ನೂತನ ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು

ಹೂವಿನಹಡಗಲಿ 31: ತಾಲೂಕಿನ ವಿನೋಬನಗರ ಮಿರಾಕೊರನಹಳ್ಳಿ ಗ್ರಾಮದ ನೂತನವಾಗಿ ನಿರ್ಮಿಸಿದ ಆಂಜನೇಯ ಸ್ವಾಮಿಯ ರಥೋತ್ಸವವು ಸಮಳ ನಂದಿಕೋಲು ಡ್ರಮ್ ಸೆಟ್ ವಾದ್ಯ ಸಕಲ ಮೇಳಗಳೊಂದಿಗೆ ಗವಿಮಠದ ಡಾ. ಹಿರಿ ಶಾಂತವೀರ ಮಹಾಸ್ವಾಮಿಗಳ ಪಾವನ ದಿವ್ಯ ಸಾನಿಧ್ಯದಲ್ಲಿ  ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು. ಭಕ್ತರು ತೇರಿಗೆ ಬಾಳೆಹಣ್ಣು ಹೂವು ಸಮರ​‍್ಿಸಿ ತೇರನ್ನೆಳೆದು ತಮ್ಮ ಭಕ್ತಿ ಇಷ್ಟಾರ್ಥಗಳನ್ನು ಸ್ವಾಮಿಗೆ ಸಮರ​‍್ಿಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ವಾಮಿಯ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆಯಿತು  ವಿನೋಬ ನಗರ ಗ್ರಾಮದ ಊರಾಳ  ಲಕ್ಷ್ಮಣ ಇವರು 26.101ರೂಗಳಿಗೆ ಹರಾಜಿನಲ್ಲಿ ಪಡೆದರು.  ಗ್ರಾಮ ಪಂಚಾಯಿತಿ ಸದಸ್ಯರಾದ ಜಿ. ಶರಣಗೌಡ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ರಥೋತ್ಸವಕ್ಕೆ ಬಂದಂತಹ ಭಕ್ತರಿಗೆ ಶಿಕ್ಷಕರಾದ ಮಡ್ಡಿ ಗಣೇಶ ಹಾಗೂ ಕುಟುಂಬ ವರ್ಗದವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.