ರಂಜಾನ ನಿಮಿತ್ತ ವಕ್ಫ ಮಸೂದೆಯನ್ನು ವಿರೋಧಿಸಿ ಕೈಗೆ ಕಪ್ಪುಪಟ್ಟಿಯನ್ನು ದರಿಸಿ ಪ್ರಾರ್ಥನೆ
ಹನುಮಸಾಗರ 31: ಹನುಮಸಾಗರದ ಬೀಳಗಿ ಅಗಸಿ ಹಾಗೂ ಮನ್ನೇರಾಳ ರಸ್ತೆಯ ಹತ್ತಿರದ ಈದ್ಗಾ ಮೈದಾನದಲ್ಲಿ ರಂಜಾನ ನಿಮಿತ್ತ ಮುಸ್ಲಿಂ ಬಾಂದವರು ಕೇಂದ್ರ ಸರ್ಕಾರದ ವಕ್ಫ ಮಸೂದೆಯನ್ನು ವಿರೋಧಿಸಿ ಕೈಗೆ ಕಪ್ಪುಪಟ್ಟಿಯನ್ನು ದರಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಬೀಳಗಿ ಅಗಸಿ ಹತ್ತಿರದ ಈದ್ಗಾ ಮೈದಾನದಲ್ಲಿ ಗುರುವಾರ ರಂಜಾನ ನಿಮಿತ್ತ ಮುಸ್ಲಿಂ ಬಾಂದವರಿಗೆ ಮೈನುದ್ದೀನಸಾಬ ಖಾಜಿ ಪ್ರಾರ್ಥನೆ ಮಾಡಿಸಿದರು ರಂಜಾನ ಹಬ್ಬದ ನಿಮಿತ್ಯ ಮುಸ್ಲಿಂ ಭಾಂದವರು ಒಂದು ತಿಂಗಳ ಪರ್ಯಂತ ರಂಜಾನ್ ತಿಂಗಳಿನಲ್ಲಿ ರೋಜಾ ಉಪವಾಸ ವೃತವನ್ನು ಕೈಕೊಂಡಿದ್ದ ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಸ್ಮಿಂ ಸಮಾಜದವರು ಈದ್ ಉಲ್ ಫಿತಾರ್ ಸಂಭ್ರಮದಿಂದ ಆಚರಣೆ ಮಾಡಿದರು.
ಮನ್ನೇರಾಳ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮದೀನಾ ಮಸ್ಜಿದ್ ಗೇಸುದಾಸ ಬನ್ನು ಪ್ರಾರ್ಥನೆ ಮಾಡಿಸಿದರು. ಯಲಬುಣಚಿ, ಕಲಾಲಬಂಡಿ, ಹೂಲಗೇರಿ, ಹನುಮನಾಳ, ಮಾಲಗಿತ್ತಿ, ನಿಲೋಗಲ್, ಕುಂಬಳಾವತಿ, ಚಳಗೇರಾ, ಮೂಗನೂರ ಹೀಗೆ ವಿವಿಧ, ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.