ಅಡುಗೆ ಸಹಾಯಕರ ಸೇವೆ ಮಾತೃಸ್ವರೂಪದ್ದು: ಕೊರವರ್

 ಧಾರವಾಡ 22: ವಿದ್ಯಾಥರ್ಿ ನಿಲಯಗಳಲ್ಲಿ ಸೇವೆ ಸಲ್ಲಿಸುವ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಸೇವೆ ಮಾತೃ ಸ್ವರೂಪದ್ದಾಗಿದೆ. ವಿದ್ಯಾಥರ್ಿಗಳು ಮತ್ತು ಅಡುಗೆಯವರ ನಡುವಿನ ಬಾಂಧವ್ಯ ಬಹಳ ದೊಡ್ಡದು ಎಂದು ಜಿ.ಪಂ. ಉಪಕಾರ್ಯದಶರ್ಿ ಎಸ್.ಜಿ.ಕೊರವರ್ ಹೇಳಿದರು.

                ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು ಸಾಧನಕೇರಿಯ ಡಾ. .ರಾ.ಬೇಂದ್ರೆ ಭವನದಲ್ಲಿ ಏರ್ಪಡಿಸಲಾಗಿದ್ದ, ನೂತನ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಎರಡು ದಿನಗಳ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿದರು. ಅಡುಗೆಯವರು ಮತ್ತು ಅಡುಗೆ ಸಹಾಯಕರು ಶುಚಿತ್ವ ಕಾಪಾಡಬೇಕು. ವಿದ್ಯೆಯನ್ನು ಅರಸಿ ಬಂದ ಮಕ್ಕಳಿಗೆ ತಾಯಿಯಂತೆ ಪೊರೆಯಬೇಕು. ಮನೆಯಿಂದ ದೂರ ಇರುವ ಮಕ್ಕಳಿಗೆ ಹಾಸ್ಟೆಲ್ನಲ್ಲಿ ಮನೆಯ ವಾತಾವರಣ ಕಲ್ಪಿಸಿಕೊಟ್ಟು ಪಾಲಕರ ಪಾತ್ರ ನಿರ್ವಹಿಸಬೇಕು ಎಂದು ಹೇಳುತ್ತಾ ತಮ್ಮ ವಿದ್ಯಾಥರ್ಿ ಜೀವನದ ಹಾಸ್ಟೆಲ್ ದಿನಗಳ ಅನುಭವಗಳನ್ನು ಸ್ಮರಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಿ.ಬಿ.ಮುರನಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರುಪತ್ರಾಂಕಿತ ವ್ಯವಸ್ಥಾಪಕಿ ಭಾಗ್ಯಲಕ್ಷ್ಮಿ ಹೆಗಡೆ, ಈರಪ್ಪ ಬೆಟಗೇರಿ, ಆನಂದ ಪಾಟೀಲ ಮತ್ತಿತರರು ಇದ್ದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿಸ್ತರಣಾಧಿಕಾರಿಗಳು, ಕಚೇರಿ ವ್ಯವಸ್ಥಾಪಕರು ಸೇರಿದಂತೆ ನೂತನವಾಗಿ ನೇಮಕಗೊಂಡಿರುವ ಅಡುಗೆ ಸಿಬ್ಬಂದಿ ಭಾಗವಹಿಸಿದ್ದರು.