ಸ್ವಾಭಿಮಾನಿಗಳ ನಾಡು ಬೆಳಗಾವಿ: ಸಂಸದ ಅಂಗಡಿ

ಲೋಕದರ್ಶನ ವರದಿ

ಬೆಳಗಾವಿ 19:  ಬೆಳಗಾವಿ ಒಂದು ಸ್ವಾಭಿಮಾನಿಗಳ ನಾಡು, ನಮ್ಮಲ್ಲಿ ಯಾವುದೇ ಜಾತಿ-ಭಾಷೆಗಳ ಭೇದಭಾವ ವಿಲ್ಲದೆ ಕೂಡಿ ಇರುವುದನ್ನು ಕಲಿಸಿಕೊಟ್ಟದ್ದು ನಮ್ಮ ಸಂಸ್ಕೃತಿಯ ಹಿರಿಮೆ ಎಂದು ಸಂಸದ ಸುರೇಶ ಅಂಗಡಿಯವರು ಹೇಳಿದರು.

ಕಿತ್ತೂರ ರಾಣಿ ಚನ್ನಮ್ಮ ಸಾಹಿತ್ಯ ಸಾಂಸ್ಕೃತಿಕ ಸಂಘ ಬೆಳಗಾವಿ ಕನರ್ಾಟಕ ಸಮೂಹ ಮಾಧ್ಯಮ ವೇದಿಕೆ ಹಾಗೂ ಹಸಿರುಕ್ರಾಂತಿ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ನಾಡಹಬ್ಬ ಉತ್ಸವ 2018 ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸುರೇಶ ಅಂಗಡಿಯವರು, ದಸರಾ ನಾಡ ಹಬ್ಬವು ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ಎಂದು ಆಚರಿಸಲಾಗುತ್ತದೆ. ಅಂದು ಖಡ್ಗ, ಬಿಲ್ಲು, ಭಾಣಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು, ಇಂದು ದೇವಿಯ ಪೂಜೆಯನ್ನು ಪೂಜಿಸುತ್ತಿದ್ದೇವೆ. ನಮ್ಮ ನಾಡಿನ ಮುತ್ತು-ರತ್ನಗಳ ವೈಭವ ಮತ್ತೆ ಮರಳಿ ಬರಲಿ ಎಂದು ಸುರೇಶ ಅಂಗಡಿ ಹೇಳಿದರು.

                ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ ಬೆಳಗಾವಿ ಹೋರಾಟಗಾರರ ಜಿಲ್ಲೆ, ಸ್ವಾತಂತ್ರ್ಯ ಮುನ್ನಡಿ ಇಟ್ಟ ಜಿಲ್ಲೆಯಾಗಿದೆ. ಸ್ವತಂತ್ರ ಹೋರಾಟಗಾತರ್ಿ ಕಿತ್ತೂರ ರಾಣಿ ಚನ್ನಮ್ಮಾ ಅವರು ಕೇವಲ ಬೆಳಗಾವಿಗೆ ಸಿಮಿತವಾಗಿರಬಾರದು, ಅವರ ಬಗ್ಗೆ ದೇಶದೆಲ್ಲಡೆ ಪ್ರಚಾರ-ಗೌರವ ಸಿಗಬೇಕು ಎಂದರು. ಎಷ್ಟೇ ತಾಂತ್ರಿಕತೆ ಬಂದರೂ ಸಾಹಿತ್ಯ ಮತ್ತು ಪತ್ರಿಕೆಗಳ ಮಹತ್ವ ಎಂದಿಗೂ ಕಡಿಮೆಯಾಗಲ್ಲ ಎಂದು ಹೇಳಿದರು.

                ಇಂದಿನ ಕವಿಗೋಷ್ಠಿಯ ಅದ್ಯಕ್ಷತೆವಹಿಸಿದ್ದ ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿ ನಾಡು ನುಡಿಯ ಬಗ್ಗೆ ಅಭಿಮಾನ ಪ್ರೀತಿ ಹೆಚ್ಚಾಗಬೇಕಿದೆ. ಕವನ ಕಟ್ಟುವ ಕಲೆ ನಮ್ಮ ಕನ್ನಡಿಗರಿಗೆ ಸುಲಲಿತವಾಗಿ ವಿಶೇಷವಾಗಿ ಬಂದಿದೆ. ಶಾಲೆಯನ್ನು ಕಲಿಯದ ನಮ್ಮ ನಾಡಿನ ಜನ ಉತ್ತಮ ಕವಿತೆಗಳನ್ನು ಬರೆದಿದ್ದಾರೆ. ಕವನಗಳ ರಚನೆ ನಮ್ಮ ಜನರಲ್ಲಿ ರಕ್ತಗತವಾಗಿ ಬಂದಿದೆ. ನಮ್ಮ ಜಾನಪದ ಜಾಣೆಯರು ಉತ್ತಮ ಮೌಲ್ಯಯುತ ಕವನಗಳನ್ನು ರಚಿಸಿದ್ದಾರೆ ಎಂದರು.

                ಲೇಖಕಿ ಸುನಂದಾ ಎಮ್ಮಿ ಅವರು ಮಾತನಾಡಿ ಕೂಡಿ ಬಾಳುವುದನ್ನು ನಮ್ಮ ಸಂಸ್ಕೃತಿ ಕಲಿಸಿದೆ, ಜನನಿ ಜನ್ಮಕ್ಕಿಂತ ದೊಡ್ಡವಳು ಎನ್ನುವುದು ನಮ್ಮ ಸಂಸ್ಕೃತಿ ಹೇಳಿದೆ. ಆದರೆ ನಾವು ಇಂದು ಬೇರೆ ಸಂಸ್ಕೃತಿಯತ್ತ ಮುಖಮಾಡುತ್ತಿದ್ದೇವೆ. ನಮ್ಮ ಸಂಸ್ಕೃತಿಯ ಹಿರಿಮೆ ನಾವು ಮರೆಯುತ್ತಿದ್ದೇವೆ. ಆದರೆ ನಮ್ಮ ಸಂಸ್ಕೃತಿ ಶ್ರೇಷ್ಠವಾಗಿದೆ ಎಂಬುದನ್ನು ಮರೆಯಬಾರದು ಎಂದರು.

                ಮತ್ತೋರ್ವ ಅತಿಥಿ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ ಯಾವುದೇ ತಪ್ಪುಗಳ ವಿರುದ್ದ ಪ್ರತಿಭಟಿಸುವುದು ಜೀವಂತಿಕೆಯ ಲಕ್ಷಣ, ತಪ್ಪುಗಳ ವಿರುದ್ದ ಹೋರಾಡದಿದ್ದರೆ ಅದಕ್ಕೆ ನಮ್ಮ ಸಮ್ಮತಿ ಇದೆ ಎಂದಾಗುತ್ತದೆ ಎಂದರು. ಕಲ್ಯಾಣರಾವ ಮುಚಳಂಬಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

                ಮುಖ್ಯ ಅತಿಥಿಗಳಾಗಿ ಕಸಾಪ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಮಾಜಿ ಜಿ.ಪಂ.ಅಧ್ಯಕ್ಷರಾದ ಎಸ್.ಎಫ್.ದೊಡ್ಡಗೌಡರ ಅಗಮಿಸಿದ್ದರು.

ಕವಿಗೋಷ್ಠಿಯಲ್ಲಿ ಸೋಮಶೇಖರ ಸೊಗಲದ, ಜಿ.ಬಿ.ನೇಸರಗಿ, ಆಶಾ ಯಮಕನಮಡರ್ಿ, ಶಬಾನಾ ಅಣ್ಣಿಗೇರಿ, ಸಂಜಯ ಕುರಣೆ, ವಿರುಪಾಕ್ಷ ಕಾಮನೂರು ಮತ್ತು ಅಶೋಕ ಎಚ್. ಕಾಖಂಡಕಿ ಕವನ ವಾಚನ ಮಾಡಿದರು. ಜಲತ್ಕುಮಾರ ಪುಣಜಗೌಡ ಅವರು ಸ್ವಾಗತ ಮಾಡಿದರು, ಬಸವರಾಜ ಸುಣಗಾರ ನಿರುಪಣೆ ಮಾಡಿದರು, ಪ್ರಸ್ತಾವಣೆ ಸಂಪತ್ತಕುಮಾರ ಮುಚಳಂಬಿ ಮಾಡಿದರುಪ್ರಾರ್ಥನೆ ಭಜನಾ ಮಂಡಳಿ, ಎಸ್.ಎನ್.ಪೂಜಾರಿ, ರುದ್ರಾಂಬಿಕಾ ಯಾಳಗಿ ಮತ್ತು ಸಾಕ್ಷಿ ಶಿವಪೂಜಿಮಠ ಮಾಡಿದರು.