ವೃತ್ತಿ ನಿರತ ಛಾಯಾಗ್ರಹಾಕರ ಪದಾಧಿಕಾರಿಗಳ ಆಯ್ಕೆ

Selection of Officers of Professional Photographers

ವೃತ್ತಿ ನಿರತ ಛಾಯಾಗ್ರಹಾಕರ ಪದಾಧಿಕಾರಿಗಳ ಆಯ್ಕೆ      

 ಹುಕ್ಕೇರಿ 21:  ತಾಲೂಕು ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.  ನೂತನ ಅಧ್ಯಕ್ಷರಾಗಿ ಅಪ್ಪು ಹುಕ್ಕೇರಿ,ಉಪಾಧ್ಯಕ್ಷರಾಗಿ ಶಿವಾನಂದ ಪಾಟೀಲ, ಕಾರ್ಯದರ್ಶಿಯಾಗಿ ಬಸವರಾಜ ದಾರೋಜಿ, ಹಾಗೂ ಖಜಾಂಜಿಯಾಗಿ ಉಮೇಶ ಕರಗುಪ್ಪಿ  ಅವಿರೋಧ ಆಯ್ಕೆಯಾದರು.     ತಾಲೂಕಿನ ಬಡಕುಂದ್ರಿ ಹೊಳೆಮ್ಮಾ ದೇವಿ ಸಭಾಭವನದಲ್ಲಿ ಶುಕ್ರವಾರ ದಿನಾಂಕ 20- 12- 2024 ರಂದು ಹಮ್ಮಿಕೊಂಡ ಸಭೆಯಲ್ಲಿ ಸತ್ಕಾರ ಸ್ವೀಕರಿಸಿ ನೂತನ ಅಧ್ಯಕ್ಷ ಅಪ್ಪು ಹುಕ್ಕೇರಿ ಮಾತನಾಡಿದರು.ತಾಲೂಕಿನ ಎಲ್ಲ ಛಾಯಾಗ್ರಾಹಕರ ಸಹಕಾರದಿಂದ ಚುನಾವಣೆ ನಡೆಯದೆ ನಾಲ್ಕು ಸ್ಥಾನಗಳಿಗೆ ನಮ್ಮನ್ನು ಅವಿರೋಧ ಆಯ್ಕೆ ಮಾಡಿದ್ದೀರಿ,ಈ ಆಯ್ಕೆಯಿಂದ ತಾಲೂಕು ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ಅಭಿವೃದ್ಧಿಗೆ ಸಹಕಾರ ಆಗುತ್ತದೆ. ಎಲ್ಲರ ಶ್ರಮದಿಂದ  ಸಂಘಟನೆಯನ್ನು ಉನ್ನತ ಸ್ಥಾನದಲ್ಲಿ ಸಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.     ನೂತನ ಉಪಾಧ್ಯಕ್ಷ  ಶಿವಾನಂದ ಪಾಟೀಲ  ಮಾತನಾಡಿ ನನ್ನನ್ನು ಅವಿರೋಧ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಛಾಯಾಗ್ರಾಹಕ ಸಂಘದ ಸಮಗ್ರ ಬೆಳವಣಿಗೆಗೆ ಸದಾ ಶ್ರಮಿಸುವುದಾಗಿ ಹೇಳಿದರು.     

      ನೂತನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಜಿಗೆ ಮಾಜಿ ಅಧ್ಯಕ್ಷ ಸುರೇಶ ಜಿನರಳೆ ಸತ್ಕಾರ ಮಾಡಿ ತಾಲೂಕು ವೃತ್ತಿ ನಿರತ ಛಾಯಾಗ್ರಾಹಕರ ಸಂಘಟನೆ ಉದ್ದೇಸಿಸಿ ಮಾತನಾಡಿದರು.   ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ಚಿದಾನಂದ ವಸ್ತ್ರದ, ಕುಮಾರ ಹುಣಶ್ಯಾಳೆ,ರಾಜು ಪಾಟೀಲ, ಮಾನಿಂಗ ಮೇಲಮಟ್ಟಿ,ಮಹೇಶ ಬೆಳಂಬಿ,ಪ್ರಕಾಶ ನಾಗನೂರೆ, ಸಚೀನ ಮಗದುಮ, ಲೋಕೇಶ ಕುಂದಗೋಳ, ನಾಶಿರ ಸುತಾರ, ಗಂಗಾಧರ ಬಡಿಗೇರ, ವಿನಾಯಕ ಬೆನಿವಾಡೆ, ಬಾಳೇಶ ಸನದಿ,ವಿಶಾಲ ತಳವಾರ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು. ಸುರೇಶ ಜಿನರಾಳೆ ಪ್ರಸ್ತವಿಕ ನುಡಿದರು,  ಈರಣ್ಣ ಚೌಗಲಾ ಸ್ವಾಗತಿಸಿ, ವಂದಿಸಿದರು.