ಜೆಡಿಎಸ್ ಅಲ್ಪಸಂಖ್ಯಾತರ ಘಟಕಕ್ಕೆ ಆಯ್ಕೆ

ಲೋಕದರ್ಶನ ವರದಿ:

ಶಿರಹಟ್ಟಿ : ದಾವಲಸಾಬ ಇಟಗಿ ಹಾಗೂ ಮಲೀಕಸಾಬ ಟಕೋರಿ ಅವರನ್ನು ಶಿರಹಟ್ಟಿ ತಾಲೂಕಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ನೇಮಿಸಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಜಾವೇದಸಾಬ ನೂರಬಾಷ ಆದೇಶಿಸಿದ್ದಾರೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದಶರ್ಿ ನಜೀರ ಡಂಬಳ ಹೇಳಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು ಪಕ್ಷದ ತತ್ವ ಸಿದ್ದಾಂತಗಳಿಗೆ ಬಧ್ದರಾಗಿ ಜಾತ್ಯಾತೀತ ಜನತಾದಳದ ಅಲ್ಪಸಂಖ್ಯಾತರ ಘಟಕವನ್ನು ಗ್ರಾಮ/ಬೂತ್ ಮಟ್ಟದಿಂದ ಸಂಘಟಿಸಿ ಪಕ್ಷದ ಬಲವರ್ಧನೆಗೆ ಪಕ್ಷದ ಮಾತೃ ಘಟಕದ ಪದಾಧಿಕಾರಿಗಳ ಮಾರ್ಗದರ್ಶನ ಪಡೆದು ಶ್ರಮಿಸಬೇಕು ಎಂದು ಹೇಳಿದರು.