ಲೋಕದರ್ಶನ ವರದಿ
ಬೆಳಗಾವಿ, 7 : ನಗರದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡ (ಸ್ವಾಯತ್ತ) ಮಹಾವಿದ್ಯಾಲಯದ ಎನ್.ಎಸ್.ಎಸ್ (ಓಖಖ) ಘಟಕದ ವಿಶೇಷ ವಾಷರ್ಿಕ ಶಿಬಿರದ ಎರಡನೇ ದಿನದ ಕಾರ್ಯಕ್ರಮ ದತ್ತು ಗ್ರಾಮವಾದ ಮಾರೀಹಾಳ ಗ್ರಾಮದಲ್ಲಿ ದಿನಾಂಕ 06 ರಂದು ಆಯೋಜಿಸಲಾಗಿತ್ತು.
"ಯುವ ಜನತೆಯಲ್ಲಿ ನೈತಿಕ ಮೌಲ್ಯಗಳು" ಗೋಷ್ಠಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎಲ್.ಎಸ್. ಕಾಲೇಜಿನ ಕನ್ನಡ ವಿಭಾಗದ ಪ್ರೊ. ಎಸ್.ಬಿ.ತಾರದಾಳೆ ಅವರು ಮಾತನಾಡುತ್ತ, ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಇಂದಿನ ಯುವ ಜನತೆಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡರೇ ತಮ್ಮ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಯುವಜನತೆ ದಾನ ಮತ್ತು ತ್ಯಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಸ್ಪಧರ್ಾ ಮನೋಭಾವನೆ ಜೊತೆಗೆ ಸೇವಾ ಮನೋಭಾವನೆ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜಾಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಪ್ರೊ. ಎಸ್.ಎಸ್. ಅಬ್ಬಾಯಿ ಅವರು ಮಾತನಾಡುತ್ತಾ, ಸ್ವಯಂ ಸೇವಕರು ಈ ಗ್ರಾಮದಲ್ಲಿ ಮುಕ್ತ ಮನಸ್ಸಿನಿಂದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆಂದು ತಿಳಿಸಿದರು.
ಮಾರಿಹಾಳ ಗ್ರಾಮದ ಬಸವಣ್ಣನ ದೇವಸ್ಥಾನ ಮತ್ತು ಹೈಸ್ಕೂಲ ಆವರಣವನ್ನು ಸ್ವಚ್ಛತಾ ಕಾರ್ಯ ಮಾಡಿದರು.
ಕುಮಾರಿ. ಮಹಾಲಕ್ಷ್ಮೀ ಹಾಗೂ ಸಂಗಡಿಗರು ಓಖಖ ಗೀತೆಹಾಡಿದರು. ಕುಮಾರಿ. ಶಿಲ್ಪಾ ರುದ್ರಣ್ಣವರ ಸ್ವಾಗತಿಸಿದರು. ಕುಮಾರ. ಸಚಿನ್ ಹಿತ್ತಲಮನಿ ವಂದಿಸಿದರು. ಕುಮಾರಿ. ಸೌಮ್ಯಾ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಮಾರಂಭದಲ್ಲಿ ಸಹ ಶಿಬಿರಾಧಿಕಾರಿಯಾದ ಪ್ರೊ.ಎಸ್.ಜಿ.ಗಲಗಲಿ ಹಾಗೂ ಗ್ರಾಮದ ನಾಗರಿಕರು ಮತ್ತು ಶಿಬಿರದ ಸ್ವಯಂ ಸೇವಕರು ಉಪಸ್ಥಿತರಿದ್ದರು.