ಬೀಜದ ಪ್ಯಾಕೆಟ್ಗಳ ವಿತರಣೆಯಲ್ಲಿ ಬಾರಿ ಅವ್ಯವಹಾರ: ಸವಿತಾ

ಲೋಕದರ್ಶನವರದಿ

ಬ್ಯಾಡಗಿ೧೨: ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿತರಣೆ ಮಾಡಲಿರುವ ವಿವಿಧ ಬೀಜದ ಪ್ಯಾಕೆಟ್ಗಳ ವಿತರಣೆಯಲ್ಲಿ ಬಾರಿ ಅವ್ಯವಾಹರ ನಡೆಯುತ್ತಲಿದೆ ಎಂದು ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಹೇಳಿದರು.

    ಅವರು ಬುಧವಾರ  ತಾಲೂಕಾ ಪಂಚಾಯತ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಧಿಢೀರನೇ ಭೇಟಿ ನೀಡಿ ಪರಿಶೀಲಿಸಿದಾಗ ಬೆಳಕೇರಿ ಗ್ರಾಮದ ರೈತ ಬಸವಂತಪ್ಪ ಸಂಕಪ್ಪ ಅಂಬಲಿ ಎಂಬುವ ರೈತನು ಶೆಂಗಾ ಬೀಜದ ಚೀಲಗಳನ್ನು ಖರೀಧಿಸಿದ್ದು, ಸದರಿ ರೈತನು ಎಸ್ಸಿ/ಎಸ್ಟಿ ರೈತನಾಗಿದ್ದು, ಅವನಿಗೆ ಸಾಮಾನ್ಯ ರೈತನೆಂದು ಬಿಲ್ ಹಾಕಿ ಕೊಡಲಾಗಿದೆ. ಇದರಿಂದಾ ಎಸ್ಸಿ/ಎಸ್ಟಿ ರೈತರಿಗೆ ಸರಕಾರ ನೀಡಲಿರುವ ರೀಯಾಯತಿಯನ್ನು ಆ ಜನರಿಗೆ ಮುಟ್ಟಿಸದೇ ಅವರಿಗೆ ವಂಚಿಸುತ್ತಲಿದ್ದಾರೆಂದು ತಾ.ಪಂ.ಅಧ್ಯಕ್ಷರು ಆರೋಪಿಸಿದರು.

      ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಇದೇ ತೆರನಾಗಿ ಸಾಕಷ್ಟು ಸಮಸ್ಯೆಗಳನ್ನು ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಮಾಡುವ ಮೂಲಕ ರೈತರನ್ನು ವಂಚನೆ ಮಾಡಿ ನಿತ್ಯ ರೈತರಿಗೆ ಶೋಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. 

     ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ನಡೆಯುವ ಹಗಲು ದರೋಡೆಯನ್ನು ತಡೆಯುವಂತೆ ಮೇಲಾಧಿಕಾರಿಗಳಿಗೆ ತಿಳಿಸಿದರು. ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಉಪಸ್ಥಿತರಿದ್ದರು.